ಚುನಾವಣೆ ನಡೆಸಲು ಆಯೋಗದ ಖರ್ಚು ಎಷ್ಟು?; ಅದನ್ನು ಯಾರು ಭರಿಸುತ್ತಾರೆ? ಇಲ್ಲಿದೆ ಮಾಹಿತಿ

Date:

Advertisements

ರಾಜ್ಯದ ಒಟ್ಟು 224 ಕ್ಷೇತ್ರಗಳ ಸುಮಾರು 58.,000 ಮತಗಟ್ಟೆಗಳಲ್ಲಿ ಇಂದು (ಮೇ 10) ಮತದಾನ ನಡೆಯುತ್ತಿದೆ. ಲಕ್ಷಾಂತರ ಮಂದಿ ಸಿಬ್ಬಂದಿಗಳು ಚುಣಾವಣಾ ಕರ್ತವ್ಯದಲ್ಲಿದ್ದಾರೆ. ಈ ನಡುವೆ, ಚುನಾವಣಾ ಕರ್ತವ್ಯದ ಭಾಗವಾಗಿರುವ ಆಶಾ ಕಾರ್ಯಕರ್ತೆಯರು ತಮಗೆ ಗೌರವ ಧನ ನೀಡಿಲ್ಲವೆಂದು ಆರೋಪಿಸಿದ್ದಾರೆ. ಅವರಿಗೂ ಗೌರವ ಧನ ನೀಡುವ ಬಗ್ಗೆ ಚುನಾವಣಾ ಆಯೋಗ ಭರವಸೆ ನೀಡಿದೆ. ಇದೆಲ್ಲದರ ನಡುವೆ, ಚುನಾವಣೆ ನಡೆಸಲು ಆಯೋಗಕ್ಕೆ ಎಷ್ಟು ಖರ್ಚಾಗಬಹುದು ಎಂಬ ಪ್ರಶ್ನೆ ಹಲವರಲ್ಲಿ ಮೂಡಿರುತ್ತದೆ. ಚುನಾವಣಾ ವೆಚ್ಚದ ಮಾಹಿತಿ ಇಲ್ಲಿದೆ.

ಚುನಾವಣಾ ಆಯೋಗವು ಮತದಾರ ಗುರುತಿನ ಚೀಟಿ ಮುದ್ರಣ, ಮತಪತ್ರಗಳ ಮುದ್ರಣ, ಮತದಾನ ಜಾಗೃತಿ ಅಭಿಯಾನ, ಮತಗಟ್ಟೆ ಸಿಬ್ಬಂದಿ ಗೌರವಧನ, ಚುನಾವಣಾ ವೀಕ್ಷಕರ ಸಂಭಾವನೆ, ಚುನಾವಣಾ ಸಿಬ್ಬಂದಿಗಳ ಪ್ರಯಾಣಕ್ಕೆ ಕಾರು, ಬಸ್ಸುಗಳ ಬಾಡಿಗೆ ಹಾಗೂ ಚುನಾವಣಾ ಸಿಬ್ಬಂದಿಗೆ ಊಟದ ವ್ಯವಸ್ಥೆಗಾಗಿ ಹಣವನ್ನು ಖರ್ಚು ಮಾಡುತ್ತದೆ.

2023ರ ವಿಧಾನಸಭಾ ಚುನಾವಣೆಗೆ ಎಷ್ಟು ವೆಚ್ಚವಾಗಿದೆ ಎಂದು ಚುನಾವಣಾ ಆಯೋಗ ಇನ್ನೂ ಅಂಕಿಅಂಶ ಬಹಿರಂಗ ಪಡಿಸಿಲ್ಲ. ಮತ ಎಣಿಕೆಯ ಬಳಿಕ ಮಾಹಿತಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ನಡುವೆ, ಫೆಬ್ರವರಿಯಲ್ಲಿ ಆಯೋಗವು ಸರ್ಕಾರಕ್ಕೆ ಸಲ್ಲಿಸಿದ್ದ ಅಂದಾಜಿನ ಪ್ರಕಾರ, ಈ ಬಾರಿ 511 ಕೋಟಿ ರೂ. ಚುನಾವಣಾ ವೆಚ್ಚವಾಗಲಿದೆ ಎಂದು ಹೇಳಲಾಗಿದೆ.

Advertisements

2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಯೋಗವು 160 ಕೋಟಿ ರೂ ಖರ್ಚು ಮಾಡಿತ್ತು. ಆಗ ಒಂದು ಕ್ಷೇತ್ರಕ್ಕೆ ಸರಾಸರಿ 65 ಲಕ್ಷ ರೂ. ವೆಚ್ಚವಾಗಿತ್ತು. 2018ರ ವಿಧಾನಸಭಾ ಚುನಾವಣೆಯಲ್ಲಿ 394 ಕೋಟಿ ರೂಗಳನ್ನು ಆಯೋಗ ಖರ್ಚು ಮಾಡಿತ್ತು. ಆ ಚುನಾವಣೆಯಲ್ಲಿ ಪ್ರತಿ ಕ್ಷೇತ್ರಕ್ಕೆ ಸರಾಸರಿ 1.75 ಕೋಟಿ ರೂ. ವೆಚ್ಚವಾಗಿತ್ತು. ಈ ವರ್ಷ, ಪ್ರತಿ ಕ್ಷೇತ್ರಕ್ಕೆ ಸರಾಸರಿ 2.2 ಕೋಟಿ ರೂ. ವೆಚ್ಚವಾಹಬಹುದು ಎಂದು ಅಂದಾಜಿಸಲಾಗಿದೆ.

ಚುನಾವಣಾ ಆಯೋಗವು ಖರ್ಚು ಮಾಡುವ ಹಣವನ್ನು ಆಯಾ ರಾಜ್ಯ ಸರ್ಕಾರಗಳೇ ಭರಿಸುತ್ತವೆ. ರಾಜ್ಯದಲ್ಲಿ ಆಯೋಗದ ಚುನಾವಣಾ ವೆಚ್ಚವನ್ನು ಇಲ್ಲಿನ ಸರ್ಕಾರ ಭರಿಸುತ್ತದೆ. ಈ ಬಾರಿಯ ಚುನಾವಣಾ ಖರ್ಚಿಗಾಗಿ ಸರ್ಕಾರ ಡಿಸೆಂಬರ್ ತಿಂಗಳಿನಲ್ಲಿ 300 ಕೋಟಿ ರೂ. ಮೀಸಲಿಟ್ಟಿತ್ತು. ಆದರೆ, ಆಯೋಗವು ಫೆಬ್ರವರಿಯಲ್ಲಿ 511 ಕೋಟಿ ರೂ. ಮೊತ್ತದ ಅಂದಾಜು ಪಟ್ಟಿಯನ್ನು ಸಲ್ಲಿಸಿತ್ತು. ಬಳಿಕ, ಉಳಿದ ಮೊತ್ತವನ್ನೂ ಸರ್ಕಾರ ಬಿಡುಗಡೆ ಮಾಡಿತ್ತು.

ಈ ಸುದ್ದಿ ಓದಿದ್ದೀರಾ?: ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ?: ರಾಜ್ಯದಲ್ಲಿ ಬೆಟ್ಟಿಂಗ್ ಭರಾಟೆ; ಆರೋಪ

ಉಳಿದಂತೆ, ಮತಗಟ್ಟೆ, ಚೆಕ್‌ಪೋಸ್ಟ್‌ಗಳು, ಮತ ಎಣಿಕೆ ಕೇಂದ್ರಗಳಲ್ಲಿ ಭದ್ರತೆಗಾಗಿ ಅರೆಸೇನಾ ಪಡೆ, ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಈ ವೆಚ್ಚವನ್ನು ಸರ್ಕಾರವೇ ನೇರವಾಗಿ ಭರಿಸುತ್ತದೆ. ಇದು ಚುನಾವಣಾ ಆಯೋಗದ ಖರ್ಚಿನ ವ್ಯಾಪ್ತಿಗೆ ಒಳಪಡುವುದಿಲ್ಲ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಕಲಬುರಗಿ | ಯುವಕರು ಮಾರಕಾಸ್ತ್ರ ಹಿಡಿದ ವಿಡಿಯೊ ವೈರಲ್: ನಾಲ್ವರು ಯುವಕರ ವಿರುದ್ಧ ಎಫ್‌ಐಆರ್

ಕಲಬುರಗಿಯ ದೇವಿ ನಗರದಲ್ಲಿ ನಾಲ್ವರು ಯುವಕರು ಕೈಯಲ್ಲಿ ಮಾರಕಾಸ್ತ್ರಗಳು ಹಿಡಿದು ವಿಡಿಯೋ...

ಸಕಲೇಶಪುರ | ಮಿತಿ ಮೀರಿರುವ ಮಾದಕ ವಸ್ತು ಸೇವನೆ ಆಧುನಿಕತೆಗೆ ಮಾರಕವಾಗಿದೆ: ಗಾಂಧಿವಾದಿ ಪ್ರಸನ್ನ

ಮಾದಕ ವಸ್ತು ಮುಕ್ತ ಭಾರತವನ್ನು ಕಟ್ಟುವ ಸಕಲೇಶಪುರದ ಜನತೆಯ ಜತೆಗೆ ನಾನೂ...

Download Eedina App Android / iOS

X