ಚೆನ್ನೈ ಸೂಪರ್ ಕಿಂಗ್ಸ್‌ನ ಸಂಘಟಿತ ಬೌಲಿಂಗ್ ನೆರವಿನಿಂದ ಧೋನಿ ಪಡೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 27 ರನ್‌ಗಳ ಅಂತರದಿಂದ ಗೆಲುವು ದಾಖಲಿಸಿತು.
ಚೆನ್ನೈನ ಎಂ ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 16ನೇ ಆವೃತ್ತಿಯ 55ನೇ ಪಂದ್ಯದಲ್ಲಿ ಸಿಎಸ್‌ಕೆ ನೀಡಿದ 168 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಲಷ್ಟೆ ಶಕ್ತವಾಯಿತು. ಚೆನ್ನೈ ಪರ ಮತೀಶಾ ಪತಿರಾನ 37/3 ಹಾಗೂ ದೀಪಕ್ ಚಹಾರ್ 28/2 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿದರು.
ಡೆಲ್ಲಿ ಕ್ಯಾಪಿಟಲ್ಸ್ ಪರ ರಿಲೀ ರೋಸೌವ್ 35, ಮನೀಶ್ ಪಾಂಡೆ 27 ಹಾಗೂ ಅಕ್ಸರ್ ಪಟೇಲ್ 21 ರನ್ ಗಳಿಸಿದ್ದು ಉಳಿದ ಬ್ಯಾಟ್ಸಮನ್‌ಗಳ್ಯಾರು ಹೆಚ್ಚು ಪ್ರತಿರೋಧ ತೋರಲಿಲ್ಲ. ಏಳು ಸೋಲುಗಳನ್ನು ಕಂಡಿರುವ ಡೇವಿಡ್ ವಾರ್ನರ್ ಪಡೆ ಬಹುತೇಕ ಐಪಿಎಲ್‌ನಿಂದ ನಿರ್ಗಮಿಸುವ ಸಾಧ್ಯತೆ ಹೆಚ್ಚಾಗಿದೆ. ಸಿಎಸ್‌ಕೆ ಕೂಡ ಏಳು ಜಯ ದಾಖಲಿಸಿ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 20ರ ಗಡಿ ದಾಡಿದ ಆರು ಬ್ಯಾಟ್ಸಮನ್‌ಗಳ ಸಹಾಯದಿಂದ ನಿಗದಿತ 20 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 167 ರನ್ ಪೇರಿಸಿತು.
ರುತುರಾಜ್ ಗಾಯಕ್‌ವಾಡ್ (24),ಅಜಿಂಕ್ಯಾ ರಹಾನೆ (21),ಶಿವಂ ದುಬೆ (25),ಅಂಬಾಟಿ ರಾಯುಡು (23),ರವೀಂದ್ರ ಜಡೇಜ (21) ಹಾಗೂ ನಾಯಕ ಎಂ ಎಸ್ ಧೋನಿ (20) ರನ್ ಗಳಿಸಿದರು. ಇವರಲ್ಲಿ ಧೋನಿ 9 ಎಸೆತಗಳಲ್ಲಿ 2 ಸಿಕ್ಸರ್ 1 ಬೌಂಡರಿಯೊಂದಿಗೆ 20, ಶಿವಂ ದುಬೆ 12 ಚೆಂಡುಗಳಲ್ಲಿ 3 ಭರ್ಜರಿ ಸಿಕ್ಸರ್‌ಗಳೊಂದಿಗೆ 25 ರನ್‌ಗಳನ್ನು ವೇಗವಾಗಿ ಗಳಿಸಿದರು.
ಇನ್ನುಳಿದಂತೆ ಡಿವಾನ್ ಕಾನ್ವೆ 13 ಎಸೆತಗಳಲ್ಲಿ 10 ರನ್, ದೀಪಕ್ ಚಹರ್ 2 ಎಸೆತಗಳಲ್ಲಿ ಅಜೇಯ 1 ರನ್ ಹಾಗೂ ತುಷಾರ್ ದೇಶಪಾಂಡೆ ಒಂದು ಎಸೆತವನ್ನು ಎದುರಿಸಿ ಯಾವುದೆ ರನ್ ಗಳಿಸದೇ ಅಜೇಯರಾಗಿ ಉಳಿದರು.
ಡೆಲ್ಲಿ ತಂಡದ ಮಿಷಲ್ ಮಾರ್ಷ್ 18/3, ಅಕ್ಷರ್ ಪಟೇಲ್ 27/2, ಕುಲ್‌ದೀಪ್ ಯಾದವ್ 28/1, ಲಲಿತ್ ಯಾದವ್ 34/1 ಹಾಗೂ ಖಲೀಲ್ ಯಾದವ್ 32/1 ವಿಕೆಟ್ ಕಬಳಿಸಿ ಸಿಎಸ್‌ಕೆಯನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದರು.