ಬಡವರಿಗೆ ಅಪೌಷ್ಟಿಕತೆಯೇ ಸಮಸ್ಯೆ; ರಾಜಕಾರಣಿಗಳಿಗೆ ಮಾತ್ರ ಕೊಬ್ಬಿನ ಚಿಂತೆ!

Date:

Advertisements

ಒಂದು ಕಡೆ ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬಿದೆ ಎಂದು ಕೋಮುವಾದಿಗಳು ಗುಲ್ಲೆಬ್ಬಿಸುತ್ತಿದ್ದಾರೆ. ಇನ್ನೊಂದೆಡೆ ಜಗತ್ತಿನಾದ್ಯಂತ ಪ್ರತಿ ನಿಮಿಷಕ್ಕೆ 11 ಮಂದಿ ಹಸಿವಿನಿಂದ ಸಾವಿಗೀಡಾಗುತ್ತಿದ್ದಾರೆಂದು ಆಕ್ಸ್ ಫಾಮ್ ವರದಿ ಹೇಳಿದೆ. ಹಸಿವಿನಿಂದ ಸಾಯುವವರಲ್ಲಿ ಇಂಡಿಯಾ ಒಕ್ಕೂಟದವರೂ ಇದ್ದಾರೆ ಎಂಬ ನೆನಪಿರಲಿ

ನಾವು ಬದುಕುತ್ತಿರುವ ಇಂಡಿಯಾ ಒಕ್ಕೂಟ ವ್ಯವಸ್ಥೆಯಲ್ಲಿ ಜಾತಿ, ಲಿಂಗ ತಾರತಮ್ಯ, ಬ್ರಾಹ್ಮಣ್ಯಗಳೆಂಬ ದಟ್ಟ ದಾರಿದ್ರ್ಯಗಳೆಲ್ಲ ಸೇರಿ ನಮ್ಮ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಗೆಡವಿವೆ. ಖಾಸಗೀಕರಣದಿಂದ ಒಕ್ಕೂಟದ ಸಂಪತ್ತೆಲ್ಲವು ಕೆಲವರ ಕೈ ಸೇರಿ, ಬಹುಸಂಖ್ಯಾತರು ಬಡತನ ರೇಖೆಗಿಂತ ಕೆಳಗೆ ಉಳಿದಿದ್ದಾರೆ. ಇನ್ನು ಶ್ರೀಮಂತರು, ಕ್ರಿಮಿನಲ್‌ಗಳು, ಕೆಲವೇ ಕೆಲವು ಕುಟುಂಬದವರ ಕಪಿಮುಷ್ಠಿಯಲ್ಲಿ ರಾಜಕೀಯ ಕ್ಷೇತ್ರ ಸಿಲುಕಿ, ಸರಿ ಮಾಡಲಾಗದಷ್ಟು ಗಬ್ಬೆದ್ದು ನಾರುತ್ತಿದೆ. ಅತಿಯಾದ ಕೇಂದ್ರೀಕರಣದಿಂದ ಇಡೀ ಇಂಡಿಯಾ ಒಕ್ಕೂಟ ವ್ಯವಸ್ಥೆಯು ಸಡಿಲಗೊಂಡು ಶಿಥಿಲಾವಸ್ಥೆಯಲ್ಲಿದೆ!

ಈ ವ್ಯವಸ್ಥೆಯಲ್ಲಿ ಇಷ್ಟೆಲ್ಲ ನಾಚಿಕೆಗೇಡಿನ ವಿಷಯಗಳಿರಬೇಕಾದರೆ ಇವುಗಳನ್ನು ಗಮನಿಸಿಯೂ ಗಮನಿಸದೆ ಆರಾಮವಾಗಿ ಮಲಗಿದ್ದ ಮತಿಗೇಡಿ ಹಿಂದೂಗಳು ತಿರುಪತಿ ಲಡ್ಡಿನಲ್ಲಿ ದನದ ಕೊಬ್ಬಿದೆ ಎಂದು ಹೇಳಿಕೊಂಡು ಸಮಾಜದ ನೆಮ್ಮದಿಗೂ ಬೆಂಕಿಯಿಡುತ್ತಿದ್ದಾರೆ. ಈ ವಿಷಯವು ಆಂಧ್ರಪ್ರದೇಶದಲ್ಲಿ ಯಾವ ರೀತಿಯಾದ ವಿರೂಪವನ್ನು ಪಡೆದಿದೆ ಎಂದು ನೋಡಿದ್ದೇವೆ.

Advertisements

ಈ ವಿಷಯಗಳೆಲ್ಲ ಒಂದು ಸಮಸ್ಯೆಯೇ ಅಲ್ಲ. ಆದರೆ ಈ ವಿಷಯದ ಮೇಲೆಯೇ ಸಮಸ್ಯೆಯನ್ನು ಸೃಷ್ಟಿಸುತ್ತಿದ್ದಾರೆ ಎಂಬುದು ವಾಸ್ತವ. 2014ರಲ್ಲಿ ಜನಸೇನಾ ಪಕ್ಷವನ್ನು ಕಟ್ಟಿದ ನಟ ಪವನ್ ಕಲ್ಯಾಣ್ 10 ವರ್ಷಗಳಿಂದ ಇಲ್ಲಿಯವರೆಗೂ ಸತತ ಪರಿಶ್ರಮದಿಂದ ಪ್ರಖ್ಯಾತಿ ಪಡೆದು ಇಂದು ಟಿಡಿಪಿಯೊಂದಿಗೆ ಮೈತ್ರಿಯಿಂದ 21 ಎಂಎಲ್ಎ ಸ್ಥಾನಗಳನ್ನು ಗೆದ್ದು. ಈಗ ಉಪಮುಖ್ಯಮಂತ್ರಿಯಾಗಿರುವ ಇವರು ಅಧಿಕಾರ ಸಿಗುವ ಮೊದಲು “ನಾನು ಸ್ವಾಮಿ ವಿವೇಕಾನಂದರಿಂದ ಸ್ಪೂರ್ತಿ ಪಡೆದಿದ್ದೇನೆ, ನನಗೆ ಮನುಷ್ಯರೆಲ್ಲ ಸಮಾನರು. ನನಗೆ ಎಲ್ಲಾ ಧರ್ಮಗಳು ಸಮಾನವೇ. ನಾನು ಭಾರತೀಯನಾಗಿರುವ ಕಾರಣ ನನಗೆ ಜಾತಿ, ಕುಲ, ಪ್ರಾಂತ್ಯಗಳೆಂಬುದಿಲ್ಲ” ಎಂದು ಗರ್ಜಿಸುತ್ತಿದ್ದರು. “ನಾನು ಭಗತ್ ಸಿಂಗ್, ರಾಜ್ ಗುರು, ಸುಖ್‌ದೇವ್, ನೇತಾಜಿ, ಚಂದ್ರಶೇಖರ್ ಅಜಾದ್ ಅವರಿಂದ ಸ್ಪೂರ್ತಿ ಪಡೆದು ರಾಜಕೀಯ ಕ್ಷೇತ್ರಕ್ಕೆ ಬಂದಿದ್ದೇನೆ” ಎಂದೆಲ್ಲ ಉದ್ದುದ್ದ ಭಾಷಣ ಬಿಗಿದು, ಜನರಿಂದ ಚಪ್ಪಾಳೆಗಿಟ್ಟಿಸಿ, ತಾನು ಅಧಿಕಾರಕ್ಕೆ ಬಂದರೆ ದೇಶ ಉದ್ದಾರ ಮಾಡ್ತೀನಿ ಅಂತ ಜನರನ್ನ ನಂಬಿಸಿದ ಪವನ್ ಕಲ್ಯಾಣ್ ಈಗ ಮಾಡುತ್ತಿರುವುದಾದರೂ ಏನು?

ಸಮತಾವಾದಿಯಂತಿದ್ದ ಪವನ್ ಕಲ್ಯಾಣ್ ಅವರು ಕಟ್ಟರ್ ಹಿಂದುತ್ವವಾದಿಯಾಗಿ ಬದಲಾಗಿದ್ದಾರೆ. ಈಗ ಅವರು ನಾನು ‘ANGRY SANATHANI HINDU’. ನಾನು ‘UNAPOLOGETIC SANATHANI HINDU’, “SANATHANA PROTECTION BOARD” ಸ್ಥಾಪಿಸುತ್ತೇನೆಂದು ದೇವಸ್ಥಾನದ ಕಲ್ಲಿಗೆ ಅಡ್ಡಬೀಳುತ್ತಿದ್ದಾರೆ. ಗುಡಿ ಗುಂಡಾರವನ್ನೆಲ್ಲ ತೊಳೆದು, ಪುರೋಹಿತರ ಕಾಲಿಗೆ ಬಿದ್ದು “PURITY OF METIRIAL RELIGIOUS” ಅಂತ ಹೇಳಿಕೊಂಡು ‘ಹಿಂದೂಗಳು ಅಪಾಯದಲ್ಲಿದ್ದಾರೆ’ ಎಂಬ ಬಿಜೆಪಿಯವರ ಹಳೆಯ ಡೈಲಾಗನ್ನೇ ಹೇಳುತ್ತಾ ತಿರುಗಾಡ್ತಾ ಇದ್ದಾರೆ.

Pawan Kalyan Tirupati
ಪವನ್‌ ಕಲ್ಯಾಣ್‌

ಅಧಿಕಾರ ಸಿಗುವ ಮೊದಲು ಬರಿ ಕೈಯಲ್ಲಿ ಅವರಾಡಿದ ಮಾತಿಗೂ ಕೈಗೆ ಅಧಿಕಾರ ಸಿಕ್ಕ ನಂತರ ಮಾಡುತ್ತಿರುವ ಕ್ರಿಯೆಗೂ ಎಳ್ಳಷ್ಟಾದರೂ ಸಾಮ್ಯತೆ ಇದೆಯೇ? ಲಡ್ಡು ವಿಚಾರ ಮೊದಲನೆಯ ಹಂತ. ಮುಂದಿನ ಹಂತಗಳಲ್ಲಿ ಕಲ್ಲು ತೂರಾಟ ಕೋಮುಗಲಭೆಗಳು ಸಾಮೂಹಿಕ ಹತ್ಯಾಕಾಂಡಗಳು ಸಹ ಇರುತ್ತವೆ ಎಂಬುದರಲ್ಲಿ ಅನುಮಾನವೇ ಬೇಡ. ಇಂತಹ ಕ್ಷುಲ್ಲಕ ವಿಷಯಗಳು ಇಂಡಿಯದಾದ್ಯಂತ ಇರುವ ಅಲ್ಪಸಂಖ್ಯಾತರ ನೆಮ್ಮದಿ ಕದಡುತ್ತಿದೆ. ಅಲ್ಪಸಂಖ್ಯಾತರ ಮೇಲೆ ಸ್ವಾತಂತ್ರ್ಯದ ನಂತರ ನಿರಂತರ ದಾಳಿಗಳಾಗಿವೆ. 2014ರಲ್ಲಿ ನರೇಂದ್ರ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲಂತೂ ಅಲ್ಪಸಂಖ್ಯಾತರ ಮೇಲೆ ನಡೆಯುವ ದಾಳಿಗಳ ಪ್ರಮಾಣ ರಾಕೆಟ್ ವೇಗವನ್ನು ಪಡೆದುಕೊಂಡಿದೆ.

ಮುಸ್ಲಿಮರು ಮತ್ತು ಕ್ರೈಸ್ತರು ನಮ್ಮ ದೇಶದ ಅಲ್ಪಸಂಖ್ಯಾತರೂ ಹೌದು. ದಮನಿತ ವರ್ಗವೂ ಹೌದು. ಈ ವರ್ಗಗಳು ಉನ್ನತಿ ಕಾಣುವುದಿರಲಿ, ಉಸಿರಾಡುವುದಕ್ಕೂ ಕಾಲಾವಕಾಶ ನೀಡದೇ ನಿರಂತರವಾಗಿ ತುಳಿತಕ್ಕೊಳಗಾಗಿ ಭಯದಿಂದಲೇ ಬದುಕುವ ವಾತಾವರಣ ಸೃಷ್ಟಿಯಾಗಿದೆ. ಈ ಸಮುದಾಯಗಳಲ್ಲಿ ಸಾಮೂಹಿಕ ಹತ್ಯಾಕಾಂಡಗಳಾಗಿವೆ. ರಾಜಕೀಯ ವ್ಯಕ್ತಿಗಳು ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವುದಕ್ಕೆ ಮಾಡುವ ಸಾಮಾನ್ಯ ಕೋಮು ಉದ್ರೇಕಿತ ಭಾಷಣಗಳು, ಇವರು ತೋರುವ ಹುಸಿ ಢಾಂಬಿಕತೆ, ಹುಸಿ ದೇಶಭಕ್ತಿಗಳಿಂದ ಮುಂದಾಗುವ ಅನಾಹುತಗಳ ಬಗ್ಗೆ ಇವರಿಗೆ ತಿಳಿದಿದೆಯೇ? ಆ ಅನಾಹುತಗಳಿಗೆ ಇವರು ಹೊಣೆಯಾಗುತ್ತಾರೆಯೇ?

ಇಂಡಿಯಾದ ಜನಸಾಮಾನ್ಯರ ಜೀವನ ಗುಡಿ-ಗುಂಡಾರ, ಚರ್ಚು, ಮಸೀದಿ, ಸನಾತನ ಧರ್ಮದ ಸುತ್ತವೇ ನಿಂತಿದೆಯೇ? ಜರ್ಮನಿಯ ವೆಲ್ತ್‌ ಹಂಗರ್‌ ಲೈಫ್‌ (Welthungerhilfe) ಎಂಬ ಸಂಸ್ಥೆಯು ಪ್ರಪಂಚದ 127 ದೇಶಗಳನ್ನು ಅಧ್ಯಯನ ಮಾಡಿ ಜಾಗತಿಕ ಹಸಿವು ಸೂಚ್ಯಂಕವನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಮುಕ್ಕೋಟಿ ಹಿಂದೂ ದೇವತೆಗಳಿರುವ, ಶೇಕಡಾ 79.80ರಷ್ಟು ಹಿಂದೂ ಧರ್ಮದವರೇ ಇರುವ ಇಂಡಿಯಾ ಒಕ್ಕೂಟವು 105ನೇ ಸ್ಥಾನವನ್ನು ಪಡೆದಿದೆ. ಹಸಿವಿನ ಸಮಸ್ಯೆ ಗಂಭೀರವಾಗಿರುವ 42 ರಾಷ್ಟ್ರಗಳಲ್ಲಿ ಇಂಡಿಯಾ ಒಕ್ಕೂಟಕ್ಕೂ ಸ್ಥಾನವಿದೆ. ಇಂಡಿಯಾ ಒಕ್ಕೂಟದಲ್ಲಿ ಐದು ವರ್ಷಕ್ಕಿಂತ ಕೆಳಗಿನ ಪ್ರಾಯದ ಶೇಕಡ 35.5ಕ್ಕೂ ಅಧಿಕ ಮಕ್ಕಳು ಕುಂಠಿತ ದೇಹ ಬೆಳವಣಿಗೆಯುಳ್ಳವರಾಗಿದ್ದಾರೆ. ಒಕ್ಕೂಟದ ಜನಸಂಖ್ಯೆಯ ಶೇಕಡಾ 13.7ರಷ್ಟು ಮಂದಿ ಪೌಷ್ಟಿಕತೆಯ ಕೊರತೆಯನ್ನು ಹೊಂದಿದ್ದಾರೆಂದು ವರದಿ ಹೇಳಿದೆ. ಇದು ಸನಾತನ ಹಿಂದೂಗಳು ಖುಷಿ ಪಡುವ ವಿಚಾರವೇ? ಒಂದು ಕಡೆ ತಿನ್ನೋ ಲಡ್ಡುವಿನಲ್ಲಿ ದನದ ಕೊಬ್ಬಿದೆ ಎಂದು ಕೋಮುವಾದ ಹಬ್ಬುತಿದೆ. ಇನ್ನೊಂದು ಕಡೆ ಜಗತ್ತಿನಾದ್ಯಂತ ಪ್ರತಿ ನಿಮಿಷಕ್ಕೆ 11 ಮಂದಿ ಹಸಿವಿನಿಂದ ಸಾವಿಗೀಡಾಗುತ್ತಿದ್ದಾರೆಂದು ಆಕ್ಸ್ ಫಾಮ್ ಸಂಸ್ಥೆಯ ವರದಿ ಹೇಳಿದೆ. ಪ್ರತಿ ನಿಮಿಷ ಹಸಿವಿನಿಂದ ಸಾಯುವ ಹನ್ನೊಂದು ಮಂದಿಯಲ್ಲಿ ಇಂಡಿಯಾ ಒಕ್ಕೂಟದವರು ಇದ್ದಾರೆ ಎಂಬ ಪರಿಜ್ಞಾನವಿರಲಿ.

ವಿಶ್ವಸಂಸ್ಥೆ ವರದಿ, ಯುಎನ್‌ ವರದಿ, ತೀವ್ರ ಬಡತನ, 110 ಕೋಟಿ ಬಡವರು, ಭಾರತದಲ್ಲಿ ಬಡವರು, ಬಡತನ, United Nations Report, UN Report, Extreme Poverty, 110 Crore Poor, Poor in India, Poverty,

ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬಿರುವುದಕ್ಕೆ ಅಸಂಖ್ಯಾತ ಹಿಂದೂಗಳಿಗೆ ಅವಮಾನವಾಗಿದೆ. ಇಂಥವುಗಳನ್ನು ತಡೆಯಲು “SANATHANA PROTECTION BOARD” ನ ದೇಶದಾದ್ಯಂತ ನಿರ್ಮಾಣ ಮಾಡೋಕೆ ನಿಂತಿದ್ದೀರಾ ಅಲ್ವೇ? ಬಿಜೆಪಿಯಿಂದಾದ ಕೊಲೆ, ಸುಲಿಗೆ, ದುರಾಡಳಿತ, ಹತ್ಯಾಕಾಂಡ, ಅಸ್ಪೃಶ್ಯತೆ, ಕೋಮುವಾದ, ಹಸಿವು, ಬಡತನ, ನೈರ್ಮಲ್ಯದ ಕೊರತೆ, ಜಿಡಿಪಿ ಕುಸಿತ ಇದಕ್ಕೆಲ್ಲ ಯಾರನ್ನು ಹೊಣೆ ಮಾಡುತ್ತೀರಿ? ಇದನ್ನು ತಡೆಯಲು ಯಾವ ಬೋರ್ಡನ್ನು ನಿರ್ಮಿಸುತ್ತೀರಿ? ಇವುಗಳೆಲ್ಲ ನಮ್ಮ ಒಕ್ಕೂಟದಲ್ಲಿ ಇರುವುದು ವಾಸ್ತವ, ಇವುಗಳನ್ನು ಸರಿಪಡಿಸಲು ನೀವು ಕೈಗೊಂಡಿರುವ ಕ್ರಮಗಳೇನು?

ಉತ್ತರ ಕೇರಳದ ಜಿಲ್ಲೆಯ ಕುಟ್ಟಿಪುರಂನಲ್ಲಿ ಅಸ್ಸಾಂ ಮೂಲದ ವ್ಯಕ್ತಿಯೊಬ್ಬರು ಐದು ದಿನಗಳಿಂದ ಊಟ ಸಿಗದೆ ಹಸಿವಿನಿಂದ ಬಸ್ ನಿಲ್ದಾಣದ ಮೆಟ್ಟಿಲುಗಳ ಮೇಲೆ ಕುಳಿತು ಸತ್ತ ಬೆಕ್ಕಿನ ಮಾಂಸವನ್ನು ತಿನ್ನುತ್ತಿದ್ದದ್ದು ಕಳೆದ ಫೆಬ್ರವರಿಯಲ್ಲಿ ಸುದ್ದಿಯಾಗಿತ್ತು. ಈ ಸುದ್ದಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು? ಇದಕ್ಕೆಲ್ಲ ಯಾರಯ್ಯ ಹೊಣೆ? ʼನವಕುಸಿತʼ ಭಾರತದಲ್ಲಿ ಬಳಸಿರುವ ಸ್ಪೇಸ್ ಟೆಕ್ನಾಲಜಿಯಲ್ಲಿ ಇದೆಲ್ಲಾ ಹೇಗೆ ಸಾಧ್ಯ? ಪುರಾಣವೆಂಬುದು ಪುಂಡರಗೋಷ್ಠಿಯ ಹಾಗೆ, ರಾಜಕೀಯ ಎಂಬುದು ಧರ್ಮ ಧರ್ಮಗಳ ಮಧ್ಯೆ ಒಡಕುಂಟುಮಾಡುವ ಕೋಮು ಕ್ರಿಮಿಗಳ ಅಡ್ಡವಾಗಿದೆ. ಗರ್ಭಗುಡಿ ಸಂಸ್ಕೃತಿಯುಳ್ಳ ಬಿಜೆಪಿಯವರ ಜೊತೆ ಮೈತ್ರಿ ಮಾಡಿಕೊಂಡ ನಿಮ್ಮಿಂದ ಮತ್ತಿನ್ನೇನನ್ನು ನಿರೀಕ್ಷಿಸಲು ಸಾಧ್ಯ? ಸತ್ತ ಹೆಣಗಳ ಮಾಂಸದಿಂದ ರಣಹದ್ದುಗಳು ಹೊಟ್ಟೆ ತುಂಬಿಸಿಕೊಳ್ಳುವ ಹಾಗೆ ಧರ್ಮ ರಾಜಕಾರಣವೆಂಬ ಕೂಪಕ್ಕೆ ಜನಸಾಮಾನ್ಯರನ್ನು ಬಲಿಕೊಟ್ಟು ಅವರ ಹೆಣಗಳ ಮೇಲೆ ಧರ್ಮ ರಾಜಕೀಯ ಮಾಡುವುದು ಸರಿಯೇ? ನಾಡಿನ ಪ್ರಗತಿ ಕಡೆಗೆ ಗಮನಹರಿಸಿ. ಧರ್ಮರಾಜಕಾರಣ ಮಾಡಿದ್ದು ಸಾಕು. ಆಂಧ್ರಪ್ರದೇಶದ ಜನ ನಿಮ್ಮಿಂದ ನಿರೀಕ್ಷಿಸಿದ್ದು ಪ್ರಜಾ ಸೇವೆಯನ್ನೇ ಹೊರತು ನಿಮ್ಮ ಢಾಂಬಿಕ ಧಾರ್ಮಿಕತೆಯನ್ನಲ್ಲ ಸ್ವಾಮಿ.

ಇದನ್ನೂ ಓದಿ ಬ್ರೇಕಿಂಗ್ ನ್ಯೂಸ್‌ | ಮಾಜಿ ಸಚಿವ ಜೋಶಿ ಕುಟುಂಬದ ವಿರುದ್ಧ ಬಿಜೆಪಿ ಮುಖಂಡೆ ಇಂದಲೇ ದೂರು; FIRನಲ್ಲಿ ಅಮಿತ್ ಶಾ ಹೆಸರು ಉಲ್ಲೇಖ

ಮತ್ತೊಮ್ಮೆ ಕೇರಳದಲ್ಲಿ ನಡೆದ ಘಟನೆ ನೆನಪಿಸಿಕೊಳ್ಳಿ! ಹಸಿದವನಿಗೆ ಹಸಿವನ್ನು ತಣಿಸಿಕೊಳ್ಳುವುದು ಮುಖ್ಯವೇ ಹೊರತು ನಿಮ್ಮ ಪೊಳ್ಳು ಧರ್ಮವಲ್ಲ. ದನದ ಮಾಂಸ ತಿನ್ನುವುದು ಅಪರಾಧವಲ್ಲ, ಅದೇನು ರಾಷ್ಟ್ರೀಯ ಪ್ರಾಣಿಯಲ್ಲ, ಸಂರಕ್ಷಿತ ಅಭಯಾರಣ್ಯ ಪ್ರಾಣಿಯೂ ಅಲ್ಲ, ಅಳಿವಿನಂಚಿನಲ್ಲಿರುವ ಪ್ರಾಣಿಯಂತು ಅಲ್ಲವೇ ಅಲ್ಲ. 2023ರ ವರದಿಯ ಪ್ರಕಾರ ಭಾರತದಿಂದ 1.42 ಮಿಲಿಯನ್ ಮೆಟ್ರಿಕ್ ಟನ್ ಗೋಮಾಂಸ ವಿದೇಶಕ್ಕೆ ರಫ್ತಾಗುತ್ತದೆ. ಪ್ರಪಂಚದಲ್ಲಿಯೇ ಗೋಮಾಂಸ ರಫ್ತಿನಲ್ಲಿ ಮೂರನೇ ಸ್ಥಾನದಲ್ಲಿದ್ದೇವೆ. ಇದೇ ವಾಸ್ತವ. ನಾಡು ಅಪೌಷ್ಟಿಕತೆಯಿಂದ, ಅಜ್ಞಾನದಿಂದ ಬಳಲುತ್ತಿದೆ. ಬೇರೆ ದೇಶಕ್ಕೆ ರಫ್ತು ಮಾಡುವ ದನದ ಮಾಂಸವನ್ನು ಇಲ್ಲಿಯ ಜನರಿಗೆ ನೀಡುವುದರಿಂದ ನಮ್ಮವರು ಪೌಷ್ಟಿಕತೆಯಿಂದ ಬಾಳುತ್ತಾರೆ.

ದರ್ಶನ್ ದಡದಪುರ
ದರ್ಶನ್ ದಡದಪುರ
+ posts

ವಿದ್ಯಾರ್ಥಿ, ಮಳವಳ್ಳಿ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ದರ್ಶನ್ ದಡದಪುರ
ದರ್ಶನ್ ದಡದಪುರ
ವಿದ್ಯಾರ್ಥಿ, ಮಳವಳ್ಳಿ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಹಕಾರ ಖಾತೆ | ಡಿಕೆ ಶಿವಕುಮಾರ್ ಗುಂಪಿಗೋ, ಜಾರಕಿಹೊಳಿ ಗುಂಪಿಗೋ?

ಕೆ.ಎನ್. ರಾಜಣ್ಣ ಅವರ ಸಹಕಾರ ಖಾತೆ ತೆರವಾಗಿದೆ. ಯಾರಿಗೆ ಎನ್ನುವುದು ಪ್ರಶ್ನೆಯಾಗಿದೆ....

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

Download Eedina App Android / iOS

X