ಸುದ್ದಿವಿವರ | ಸೊಳ್ಳೆಬತ್ತಿಯ ಹೊಗೆ ತಂಬಾಕಿನಷ್ಟೇ ಹಾನಿಕಾರಕ!

Date:

Advertisements
ಅಕಾಲಿಕವಾಗಿ ಸುರಿದ ಮಳೆಯಿಂದ ಸೊಳ್ಳೆಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಅವುಗಳ ಕಾಟವೂ ಹೆಚ್ಚಾಗಿದೆ. ನಿದ್ದೆ ಮಾಡಲು ಬಿಡುತ್ತಿಲ್ಲ. ಡೆಂಗ್ಯೂ, ಮಲೇರಿಯಾದಿಂದ ದೂರ ಉಳಿಯಲು, ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳಲು ಜನರು ಸೊಳ್ಳೆ ಬತ್ತಿ, 'ನೋ ಸ್ಮೋಕ್ ಕಾಯಿಲ್'ಗಳನ್ನು ಬಳಸುತ್ತಿದ್ದಾರೆ. ಆದರೆ, ಅವೆಷ್ಟು ಮಾರಕ ಗೊತ್ತೇ? ಇಲ್ಲಿದೆ ವಿವರ...

ಸೊಳ್ಳೆಗಳ ಕಾಟದಿಂದ ಮುಕ್ತಿ ಪಡೆಯಬೇಕು. ಸೊಳ್ಳೆ ಕಾಯಿಲ್ ತರಬೇಕು. ಅದೋ ಒಂದು ವಾರಕ್ಕೆ ಮುಕ್ತಾಯ ಆಗುತ್ತೆ. ಹಾಗೆಯೇ ಅದರ ಬೆಲೆ ಬಲು ದುಬಾರಿ ಕೂಡ. ಹೀಗಾಗಿ, ಒಂದು ಡಬ್ಬಿಯಲ್ಲಿ ಐದಾರು ಸುರುಳಿ ಮತ್ತು ಒಂದೆರಡು ವಾರ ಮತ್ತೆ ಮತ್ತೆ ಬಳಸಬಹುದಾದ ಸೊಳ್ಳೆ ಬತ್ತಿ ಬಳಕೆದಾರರು ಹೆಚ್ಚು. ಪ್ರತಿ ನಿತ್ಯ ಸೊಳ್ಳೆ ಬತ್ತಿ ಹೊಗೆ ಉಸಿರಾಡುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರುವುದು ಮಾತ್ರ ಖಂಡಿತ. ಅದಲ್ಲದೆ ಇವುಗಳಿಂದ ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ (ಸಿಒಪಿಡಿ) ಎದುರಾಗಬಹುದು.

ಸೊಳ್ಳೆ ಬತ್ತಿ ಹೊಗೆ ಎಷ್ಟು ಸಿಗರೇಟ್‌ಗೆ ಸಮ

ಸೊಳ್ಳೆಗಳ ನಾಶಕ್ಕೆ ಬಳಸುವ ಸೊಳ್ಳೆ ಬತ್ತಿಯ ಹೊಗೆಯು ಸಿಗರೇಟ್ ಹೊಗೆಯಷ್ಟೇ ಅಪಾಯಕಾರಿ. ಒಂದು ಸೊಳ್ಳೆ ಸುರುಳಿಯನ್ನು ಸುಡುವುದರಿಂದ ಉತ್ಪತ್ತಿಯಾಗುವ ಕಣಗಳು 75 ರಿಂದ 137 ಸಿಗರೇಟ್‌ಗಳಿಗೆ ಸಮ. ಸೊಳ್ಳೆ ನಿವಾರಕ ಸುರುಳಿಗಳು ಮತ್ತು ಅಗರಬತ್ತಿಗಳಲ್ಲಿ ಕ್ಯಾನ್ಸರ್ ಕಾರಕ ಪದಾರ್ಥಗಳಿವೆ. ಸೊಳ್ಳೆ ಬತ್ತಿಯಹೊಗೆಯು ಸಿಗರೇಟ್‌ಗಳನ್ನು ಉಸಿರಾಡುವುದಕ್ಕೆ ಸಮಾನವಾಗಿರುತ್ತದೆ. ಕ್ವಿಲ್‌ನಲ್ಲಿ ಕಂಡುಬರುವ ಪೈರೆಥ್ರಿನ್ ಒಂದು ಕೀಟನಾಶಕವಾಗಿದ್ದು ಅದು ಶ್ವಾಸಕೋಶವನ್ನು ಹಾನಿಗೊಳಿಸುತ್ತದೆ.

Advertisements

ಒಳಾಂಗಣ ಮಾಲಿನ್ಯ ಅಂದರೇನು?

‘ಬ್ರಿಟಿಷ್ ಜನರಲ್ ಮೆಡಿಕಲ್’ ನಡೆಸಿದ ಅಧ್ಯಯನದ ಪ್ರಕಾರ, 2019ರಲ್ಲಿ ಒಂದು ಲಕ್ಷ ಜನರು ಸಿಒಪಿಡಿಗೆ ಬಲಿಯಾಗಿದ್ದಾರೆ. ಒಳಾಂಗಣ ವಾಯು ಮಾಲಿನ್ಯ ಅಂದರೆ, ಧೂಳು, ಹೊಗೆ, ತಲೆಹೊಟ್ಟು, ಬ್ಯಾಕ್ಟೀರಿಯಾ, ಸೂಕ್ಷ್ಮಜೀವಿಗಳು, ವೈರಸ್‌ಗಳು, ಸೊಳ್ಳೆ ಬತ್ತಿ ಹೊಗೆಯಂತಹ ಹಾನಿಕಾರಕ ಮಾಲಿನ್ಯದಿಂದಾಗಿ ವಿಶ್ವದಾದ್ಯಂತ 4.3 ದಶ ಲಕ್ಷ ಜನರು ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ಹೇಳುತ್ತದೆ.

ಒಳಾಂಗಣ ಮಾಲಿನ್ಯವು ಮನೆಕೆಲಸ ಮತ್ತು ಮನೆಯಲ್ಲೆ ಹೆಚ್ಚಾಗಿ ತಂಗುವ ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಉಸಿರಾಟದ ಕಾಯಿಲೆ ಮತ್ತು ಮರಣದ ಹೆಚ್ಚಳಕ್ಕೂ ಕಾರಣವಾಗುತ್ತದೆ.

ಸೊಳ್ಳೆಬತ್ತಿ ಹೊಗೆ ತಂದೊಡ್ಡುವ ಕಾಯಿಲೆಗಳು?

ಶ್ವಾಸಕೋಶದ ಕ್ಯಾನ್ಸರ್, ವಾಕರಿಕೆ ಮತ್ತು ವಾಂತಿ, ಕೆಮ್ಮುವಿಕೆ, ಅಸ್ತಮಾ, ಶ್ವಾಸಕೋಶದ ಕಾಯಿಲೆ (ಸಿಒಪಿಡಿ), ಪ್ರತಿನಿತ್ಯ ತಲೆನೋವಿಗೆ ಕಾರವಾಗುತ್ತದೆ. ಅಲ್ಲದೆ, ಹೃದಯದ ಮೇಲೆ ಪರಿಣಾಮ ಬೀರುತ್ತದೆ. ಇಂತಹ ಸೊಳ್ಳೆಬತ್ತಿಗಳಿಂದ ಗರ್ಭಿಣಿಯರು ದೂರ ಉಳಿಯುವುದು ಅತ್ಯಗತ್ಯ.

ಈ ಸುದ್ದಿ ಓದಿದ್ದೀರಾ?: ತಾಯಿ, ಮಗು ಸಾವು ಸೂಚ್ಯಂಕ; 10 ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ ಅಗ್ರಸ್ಥಾನ

ಮಸ್ಕಿಟೋ ಕಾಯಿಲ್‌’ ಎಷ್ಟು ಅಪಾಯಕಾರಿ?

‘ನೋ ಸ್ಮೋಕ್ ಕಾಯಿಲ್’ಗಳೂ ಮಾರುಕಟ್ಟೆಗೆ ಬಂದಿವೆ. ಅವುಗಳಲ್ಲಿ ಯಾವುದೇ ಹೊಗೆ ಇಲ್ಲ. ಆದರೆ, ಬಹಳಷ್ಟು ಕಾರ್ಬನ್ ಮಾನಾಕ್ಸೈಡ್ ಬಿಡುಗಡೆಯಾಗುತ್ತದೆ. ಇದು ಶ್ವಾಸಕೋಶವನ್ನು ಹಾನಿಗೊಳಿಸುತ್ತದೆ. ಅಷ್ಟೇ ಅಲ್ಲ, ಮಾರುಕಟ್ಟೆಯಲ್ಲಿ ಸಿಗುವ ಸೊಳ್ಳೆ ನಿವಾರಕ ಯಂತ್ರಗಳು ಆರೋಗ್ಯಕ್ಕೆ ಹಾನಿಕಾರಕ. ಮುಚ್ಚಿದ ಕೋಣೆಯಲ್ಲಿ ಕಾಯಿಲ್‌ಗಳಿಂದ ಹೊರಬರುವ ಹೊಗೆಯನ್ನು ಉಸಿರಾಡುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ.

ಹಾಗಿದ್ದರೆ ಸೊಳ್ಳೆಗಳಿಂದ ಮುಕ್ತಿ ಹೇಗೆ?

ಪ್ರತಿನಿತ್ಯ ಮಲಗುವ ಮುನ್ನ ಬೇವಿನ ಎಣ್ಣೆ ಹಚ್ಚಿ ಮಲಗುವುದು ಉತ್ತಮ. ಇದರಿಂದ ಯಾವುದೇ ಹಾನಿಕಾರಕ ಸಮಸ್ಯೆ ಎದುರಾಗುವುದಿಲ್ಲ. ಹಾಸಿಗೆ ಮೇಲೆ, ಕಿಟಕಿಗಳಿಗೆ ಸೊಳ್ಳೆ ಪರದೆ ಬಳಸುವುದು. ಮನೆ ಮುಂದೆ, ಕುಂಡಗಳಲ್ಲಿ, ಟಬ್‌ಗಳಲ್ಲಿ ಮೂರು ದಿನಕ್ಕಿಂತ ಹೆಚ್ಚಿನ ದಿನ ನೀರು ಸಂಗ್ರಹವಾಗಿರದಂತೆ ಕಾಪಾಡಿಕೊಳ್ಳುವುದು. ಪೂರ್ಣ ತೋಳಿನ ಬಟ್ಟೆಗಳನ್ನು ಧರಿಸುವುದು ಅಗತ್ಯವಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊರೋನಾ ಸಮಯದಲ್ಲಿ ತಬ್ಲಿಘಿ ಸಭೆ: 70 ಜನರ ವಿರುದ್ಧದ FIR ರದ್ದು; ಕೋರ್ಟ್‌ ಆದೇಶ

ದೇಶದಲ್ಲಿ ಕೊರೋನಾ ಆಕ್ರಮಣ ಆರಂಭವಾಗಿದ್ದ ಸಮಯ 2020ರ ಮಾರ್ಚ್‌ನಲ್ಲಿ ದೆಹಲಿಯಲ್ಲಿ ತಬ್ಲಿಘಿ...

ದಾವಣಗೆರೆ | ಹೃದಯಾಘಾತಕ್ಕೆ ಯುವಕ ಬಲಿ

ದಾವಣಗೆರೆಯ ಉದ್ಯಮಿಯೊಬ್ಬರ ಪುತ್ರ ಕಾಲೇಜು ವಿದ್ಯಾರ್ಥಿ ಹೃದಯಾಘಾತದಿಂದ (Heart Attack) ಕುಸಿದು...

ಮಹಿಳೆಯರನ್ನು ಗರ್ಭಕೋಶ ಕ್ಯಾನ್ಸರ್‌ನಿಂದ ರಕ್ಷಿಸಲು ಎಚ್‌ಪಿವಿ ಲಸಿಕೆ ಅತ್ಯಗತ್ಯ: ಡಾ. ಮಂಗಳ

ಮಹಿಳೆಯರಲ್ಲಿ ಗರ್ಭಕೋಶದ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತಿದೆ. ಈ ಸಮಸ್ಯೆಯಿಂದ ರಕ್ಷಣೆ ಪಡೆಯಲು...

ಕೋವಿಡ್ ಲಸಿಕೆಗೂ ಹಠಾತ್ ಸಾವುಗಳಿಗೂ ಯಾವುದೇ ಸಂಬಂಧವಿಲ್ಲ: ಆರೋಗ್ಯ ಸಚಿವಾಲಯ

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮತ್ತು ರಾಷ್ಟ್ರೀಯ ರೋಗ ನಿಯಂತ್ರಣ...

Download Eedina App Android / iOS

X