ಅಕ್ಟೋಬರ್ 20ರಂದು ಮೀಸಲಾತಿ ಜನಕ ಛತ್ರಪತಿ ಶಾಹು ಮಹಾರಾಜ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಹೆಸರಿನಲ್ಲಿ ಶಾಹು-ಅಂಬೇಡ್ಕರ್ ಪರ್ವ ಎಂಬ ವಿಚಾರ ಸಂಕಿರಣ ಬೀಳಗಿ ಪಟ್ಟಣದಲ್ಲಿ ಜರುಗಲಿದೆ ಎಂದು ಸತ್ಯಶೋಧಕ ಸಂಘದ ರಾಜ್ಯಾಧ್ಯಕ್ಷ ಪರಶುರಾಮ ಮಹಾರಾಜನವರ ಹೇಳಿದರು.
ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದ ಜಿಎಲ್‌ಬಿಸಿಐಬಿಯಲ್ಲಿ ಸತ್ಯಶೋಧಕ ಸಂಘದಿಂದ ಛತ್ರಪತಿ ಶಾಹು ಮಹಾರಾಜ ಹಾಗೂ ಬಿ ಆರ್ ಅಂಬೇಡ್ಕರ್ ಜಯಂತಿಯ ಅಂಗವಾಗಿ ಅ.20ರಂದು ಬೀಳಗಿಯ ಅಂಜುಮನ್ ಶಾದಿಮಹಲ್‌ನಲ್ಲಿ ನಡೆಯಲಿರುವ ಶಾಹು-ಅಂಬೇಡ್ಕರ್ ಪರ್ವ ಕಾರ್ಯಕ್ರಮದ ಅಂಗವಾಗಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
“ಮೀಸಲಾತಿ ತೆಗೆದುಕೊಳ್ಳದೇ ಇರುವವರು ಭಾರತ ದೇಶದಲ್ಲಿ ಯಾರೂ ಉಳಿದಿಲ್ಲ. ಮೀಸಲಾತಿ ಬಡತನ ನಿರ್ಮೂಲಣೆ ಮಾಡಲು ಇರುವ ಸಂವಿಧಾನಾತ್ಮಕ ಕಾರ್ಯಕ್ರಮವಲ್ಲ. ಎಸ್‌ಸಿ/ಎಸ್‌ಟಿ/ಓಬಿಸಿ ಅಂದರೆ ಏನೆನ್ನುವುದನ್ನು ತಿಳಿಸುವದು, ಹಾಗೂ ಈ ಕಾರ್ಯಕ್ರಮ ಮಿಸಲಾತಿ-ಸಾಮಾಜಿಕ ಪ್ರಾತಿನಿಧ್ಯ ಮತ್ತು ಖಾಸಗೀಕರಣದ ಸವಾಲುಗಳನ್ನು ಮನದಟ್ಟು ಮಾಡುವ ವಿಚಾರ ಸಂಕಿರಣದ ಕಾರ್ಯಕ್ರಮವಾಗಿದೆ. ವಿಶೇಷವಾಗಿ ಈ ಕಾರ್ಯಕ್ರದಲ್ಲಿ ನೌಕರರು ಮತ್ತು ವಿದ್ಯಾರ್ಥಿಗಳಿಗೆ ಹೇಚ್ಚು ಅನುಕೂಲಕರವಾಗಲಿದೆ” ಎಂದರು.
ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಬಸವರಾಜ ಹಳ್ಳದಮನಿ ಮಾತನಾಡಿ, “ಈ ವಿಚಾರ ಸಂಕಿರಣದ ಉದ್ಘಾಟನೆಯನ್ನು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಜೆ ಟಿ ಪಾಟೀಲ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಹಾಗೂ ಅಹಿಂದ ಜಿಲ್ಲಾಧ್ಯಕ್ಷ ಡಾ. ಸಾಗರ ತೆಕ್ಕೆನ್ನವರ, ವಿಶೇಷ ಉಪನ್ಯಾಸವನ್ನು ಸತ್ಯಶೋಧಕ ಸಂಘದ ರಾಜ್ಯಾಧ್ಯಕ್ಷ ಪರಶುರಾಮ ಮಹಾರಾಜನವರ, ಮುಖ್ಯ ಅತಿಥಿಗಳಾಗಿ ಯುವ ಮುಖಂಡರಾದ ಬಸವಪ್ರಭು ಸರನಾಡಗೌಡರ, ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ ಎನ್ ಪಾಟೀಲ, ಜಿ.ಪಂ. ಮಾಜಿ ಅಧ್ಯಕ್ಷ ಯಮನಪ್ಪ ರೊಳ್ಳಿ, ಜಿ.ಪಂ. ಮಾಜಿ ಸದಸ್ಯ ಹನಮಂತ ಕಾಖಂಡಕಿ, ತಾ.ಪಂ. ಮಾಜಿ ಅಧ್ಯಕ್ಷ ಶ್ರೀಶೈಲ ಸೂಳಿಕೇರಿ, ಅಬುಶಮಾ ಖಾಜಿ ಸೆರಿದಂತೆ ಇನ್ನೂ ಅನೇಕ ಮುಖಂಡರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಕುರಿಪಾಳ್ಯದಲ್ಲಿ ಮನೆಕುಸಿತ : ನಿರಾಶ್ರಿತರನ್ನು ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲು ಡಿಸಿ ಸೂಚನೆ
ಈ ಸಂದರ್ಭದಲ್ಲಿ ಟಿಎಪಿಸಿಎಂಎಸ್ ನಿರ್ದೇಶಕ ರಾಜು ಬೋರ್ಜಿ, ತಾಲೂಕು ಅಹಿಂದ ಅಧ್ಯಕ್ಷ ಸಿದ್ದು ಸಾರಾವರಿ, ಚಿನ್ನಪ್ಪ ಬಂಡಿವಡ್ಡರ, ಕೊರ್ತಿ ಗ್ರಾ.ಪಂ. ಸದಸ್ಯ ಶಿವು ಚಲವಾದಿ, ಶಿಖಂದರ ಹುದ್ದಾರ, ಖಾಶಿಮಲಿ ಗೋತೆ, ಮಹಮದ್ ರಫೀಕ ಮುಜಾವರ, ತಹಶೀಲ್ದಾರ್ ಸ್ವಾಜಾಮೈನುದ್ದೀನ, ಸಂತೋಷ ಕೋಟಿ ಸೇರಿದಂತೆ ಇತರರು ಇದ್ದರು.