ಮಂಡ್ಯ ಸಮ್ಮೇಳನ | ಜೋಶಿಯವರು ಸಾಹಿತ್ಯ ವೇದಿಕೆಯನ್ನು ರಾಡಿ ಎಬ್ಬಿಸಲು ಹೊರಟಿದ್ದಾರೆಯೇ?

Date:

ಪತ್ರಿಕೆಯೊಂದರ ಸಂದರ್ಶನದಲ್ಲಿ ಕಸಾಪ ಅಧ್ಯಕ್ಷ ಮಹೇಶ್‌ ಜೋಶಿಯವರು “26 ಮಠಾಧೀಶರು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಗೆ ಮನವಿ ಸಲ್ಲಿಸಿದ್ದಾರೆ” ಎಂದು ಹೇಳಿದ್ದಾರೆ. ಇವರಾಗಿಯೇ ಆಮಂತ್ರಿಸಿದ್ದಾರೋ ಅಥವಾ ಮಠಮಾನ್ಯಗಳೇ ಆಸಕ್ತಿ ವಹಿಸಿವೆಯೇ ಎಂಬುದು ಕನ್ನಡಿಗರಿಗೆ ಅರ್ಥವಾಗದ ಸಂಗತಿಯೇನಲ್ಲ.

- Advertisement -

ಈ ನಾಡಿನ ಸಂಸ್ಕೃತಿಯ ಪ್ರತೀಕವಾದ ಸಾಹಿತ್ಯ ಪರಿಷತ್‌ಗೆ ಆರಿಸಿ ಬಂದ ಸಾಹಿತ್ಯೇತರ ಸರ್ಕಾರಿ ವ್ಯಕ್ತಿಗಳು ಜಾತಿ ಬಲ, ಅಧಿಕಾರ ಬಲ, ಹಣ ಬಲ ಇತ್ಯಾದಿ ಲಾಬಿಗಳನ್ನು ನಡೆಸಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಚುನಾಯಿತರಾಗಿ ಬರುವ ಪ್ರಕ್ರಿಯೆಯೇ ನಮ್ಮ‌ ಕಾಲದ ಕೆಟ್ಟ ನೀತಿಯಾಗಿದೆ. ಇಂತಹ ದುರಂತದ ಕಾಲದಲ್ಲಿ ನಾವು ಅಂತಹ ಮಹನೀಯರಿಂದ ನಿರೀಕ್ಷೆಗಳನ್ನಿಟ್ಟುಕೊಳ್ಳುವುದೇ ಹಾಸ್ಯಾಸ್ಪದ. ಇನ್ನು ಈಗಿನ ಅಧ್ಯಕ್ಷ ಆರೆಸ್ಸೆಸ್ ಕೃಪಾಪೋಷಿತ ನಾಟಕ ಕಂಪನಿಯ ಮರಿ ನಟನೆಂಬುದು ಕನ್ನಡಿಗರಿಗೆ ಗೊತ್ತಿಲ್ಲವೇ? 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು ರಾಜಕೀಯದ ಭಾಗವೂ ಹೌದು. ಆರಂಭದ ಕಪ್ಪು-ಬಿಳುಪಿನ ನೆರಳುಗಳಿಂದ ಇಂದಿನ ಅಲ್ಟ್ರಾ-ಸ್ಯಾಚುರೇಟೆಡ್ ಪರದೆಯವರೆಗೆ, ಸಿನೆಮಾದ ಸೌಂದರ್ಯ, ತಂತ್ರಜ್ಞಾನ ಮತ್ತು ಅಧಿಕಾರ ರಾಜಕಾರಣವನ್ನು...

‘ಪಿತೃಪ್ರಭುತ್ವವನ್ನು ಧ್ವಂಸ ಮಾಡಿ’: ಮನುವಾದ ಮತ್ತು ಫ್ಯಾಸಿಸಂ ವಿರುದ್ಧ...

ಸ್ವತಂತ್ರ ಭಾರತ 80 ವರ್ಷಗಳನ್ನು ಪೂರೈಸುತ್ತಿರುವಾಗ, ನಾವು ಕೇಳಬೇಕಾಗಿದೆ, ಆ ಮನಸ್ಥಿತಿ ಹೋಗಿದೆಯೇ? ಇಲ್ಲ. ಪುಸ್ತಕವನ್ನು ಸುಡಲಾಗಿರಬಹುದು, ಆದರೆ ಮನುಸ್ಮೃತಿಯ ಮನಸ್ಥಿತಿ, ಮನುವಾದ, ಹೆಚ್ಚು ಅತ್ಯಾಧುನಿಕ ಮತ್ತು ಅದೃಶ್ಯ ರೂಪಗಳಲ್ಲಿ ಅಸ್ತಿತ್ವದಲ್ಲಿದೆ.  ಪುಣೆಯಲ್ಲಿ ನಡೆದ...

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಇವರು ಕಸಾಪಕ್ಕೆ ಬಂದು ವಕ್ಕರಿಸಿದ ದಿನದಿಂದ ಒಂದಲ್ಲಾ ಒಂದು ವಿವಾದಗಳನ್ನು ಸೃಷ್ಟಿಸುತ್ತಲೇ ಬಂದಿದ್ದಾರೆ. ಹಾವೇರಿಯಲ್ಲಿ ನಡೆದ ಸಮ್ಮೇಳನವನ್ನು ನೆನಪಿಸಿಕೊಳ್ಳಿ, ಅವರ ಸೈದ್ಧಾಂತಿಕ ನಿಲುವುಗಳು ಸಾಹಿತ್ಯದ ಒಳಗೊಳ್ಳುವ ಭಾಷೆಗೆ ಒಗ್ಗುವ ಗುಣವುಳ್ಳದ್ದಲ್ಲ. ಸಾಹಿತ್ಯ ಪರಿಷತ್ತಿನ ಎಲ್ಲ ನಿಯಮ‌ ಕಾನೂನುಗಳನ್ನು ಕೇಂದ್ರೀಕರಣಗೊಳಿಸುವ ಸರ್ವಾಧಿಕಾರಿ ಪ್ರಯತ್ನಗಳನ್ನು ಸಾಬೀತುಗೊಳಿಸಿದ್ದಾಗಿದೆ. ಈ ಬಾರಿಯ ಮಂಡ್ಯದಲ್ಲಿ ನಡೆಯುವ 87 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಮುಂಚೆಯೇ ಸಮ್ಮೇಳನಾಧ್ಯಕ್ಷರು ಸಾಹಿತ್ಯೇತರರಾಗಿರಬಾರದೇಕೆ? ಎಂಬ ಹೇಳಿಕೆ ನೀಡಿ ಮತ್ತೊಮ್ಮೆ ಚರ್ಚೆಯನ್ನು ಹುಟ್ಟುಹಾಕಿದ್ದಾರೆ. 

ಸಂಯುಕ್ತ ಕರ್ನಾಟಕ ನಡೆಸಿದ ಅವರ ಸಂದರ್ಶನದಲ್ಲಿ 26 ಮಠಾಧೀಶರುಗಳು (ಸರ್ವಾಧ್ಯಕ್ಷತೆಗೆ)  ಮನವಿ ಸಲ್ಲಿಸಿದ್ದಾರೆಂಬ ಮಾತನ್ನು ಹೇಳಿದ್ದಾರೆ. ಇವರಾಗಿಯೇ ಆಮಂತ್ರಿಸಿದ್ದಾರೋ ಅಥವಾ ಮಠಮಾನ್ಯರುಗಳೇ ಆಸಕ್ತಿ ವಹಿಸಿದ್ದಾರೋ ಎಂಬುದು ಕನ್ನಡಿಗರಿಗೆ ಅರ್ಥವಾಗದ ಸಂಗತಿಯೇನಲ್ಲ. ಆದರೆ ಸಂದರ್ಶಕ ಕೇಳಿದ ಎಲ್ಲ ಪ್ರಶ್ನೆಗಳಿಗೂ ನೇರವಾಗಿ ಉತ್ತರಿಸದೇ ಅಡ್ಡಗೋಡೆಯ ಮೇಲೆ ದೀಪವಿಡುವ ಚತುರ ಜೋಶಿ ಈಗಾಗಲೇ ಸಮ್ಮೇಳನದ ಅಧ್ಯಕ್ಷರನ್ನು ಆಯ್ಕೆ ಮಾಡಿದ್ದಿರಲೂಬಹುದು. ಬಹಿರಂಗಪಡಿಸದೇ ಚರ್ಚೆ ಮಾಡಿಕೊಳ್ಳುವವರು ಮಾಡಿಕೊಳ್ಳಲಿ ಎಂಬ ನಡೆಯಿದು. ಹಿಂದೆ ದೊಡ್ಡರಂಗೇಗೌಡರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ನೇಮಿಸಿದಾಗಲೂ ಇಂತಹುದೇ ಚರ್ಚೆ ಆಗಿತ್ತು. ಈಗಲೂ ಗಂಟಲು ಹರಿದುಕೊಳ್ಳುವವರು ಹರಿದುಕೊಳ್ಳಲಿ, ತನಗೇನು ಎಂಬ ದುರಹಂಕಾರ ಅವರ ಧೋರಣೆಯಲ್ಲಿದೆ.

ಇದನ್ನೂ ಓದಿ ಕರ್ನಾಟಕದಲ್ಲಿ ಸಾಹಿತಿಗಳಿಗೆ ಬರವಿದೆಯೇ? ಸಾಹಿತ್ಯ ಸಮ್ಮೇಳನಕ್ಕೆ ಸಾಹಿತಿಯೇ ಅಧ್ಯಕ್ಷರಾಗಲಿ; ಚಿಂತಕರ ಒತ್ತಾಯ

ಈ ಚರ್ಚೆಯ ಪರಿಣಾಮಗಳೇನೇ ಇರಲಿ ಈ ಬಾರಿಯಾದರೂ ಮಹಿಳಾ ಪ್ರತಿನಿಧೀಕರಣಕ್ಕೆ ಆದ್ಯತೆ ನೀಡಿ. ಕನ್ನಡ ನಾಡು ನುಡಿಗಾಗಿ ದುಡಿದ ಹಿರಿಯ ಡಾ. ಮಾಲತಿ ಪಟ್ಟಣಶೆಟ್ಟಿ, ಡಾ. ವೀಣಾ ಶಾಂತೇಶ್ವರ, ಸಬಿಹಾ ಭೂಮಿಗೌಡ ಮುಂತಾದ ಅನೇಕ ಲೇಖಕಿಯರಿದ್ದಾರೆ. ದನಿಯೇ ಇರದ ತಳಸಮುದಾಯದ ಸಾಹಿತಿಗಳಿದ್ದಾರೆ. ಅಂಥವರಿಗೆ ಅವಕಾಶ ಸಿಗುವಂತಾಗಬೇಕು. ನುಡಿಜಾತ್ರೆ ರಾಜಕೀಯದ ವೇದಿಕೆಯಾಗಬಾರದು. ಮಠಾಧೀಶರುಗಳಿಗೆ, ರಾಜಕಾರಣಿಗಳಿಗೆ, ಕಾರ್ಪೊರೇಟ್ ಧಣಿಗಳಿಗೆ ಬೇರೆ ವೇದಿಕೆಗಳಿವೆ. ಸಾಹಿತ್ಯದ ವೇದಿಕೆಯನ್ನು ರಾಡಿಗೊಳಿಸುವ ಈ ಹುನ್ನಾರ ಖಂಡಿತವಾಗಿ ಬೇಡ. 

WhatsApp Image 2025 11 17 at 5.18.15 PM
ರೇಣುಕಾ ನಿಡಗುಂದಿ
+ posts

ಲೇಖಕಿ, ದೆಹಲಿ ನಿವಾಸಿ

ಪೋಸ್ಟ್ ಹಂಚಿಕೊಳ್ಳಿ:

ರೇಣುಕಾ ನಿಡಗುಂದಿ
ರೇಣುಕಾ ನಿಡಗುಂದಿ
ಲೇಖಕಿ, ದೆಹಲಿ ನಿವಾಸಿ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಶೋಕ್ ಸಿಂಘಲ್: ಕೋಮುವಾದದ ರೂವಾರಿಯ ವೈಭವೀಕರಣ – ಮಾರಿಕೊಂಡ ಮಾಧ್ಯಮಗಳು

ಬೆಂಗಳೂರಿನಿಂದ ದೆಹಲಿಯವರೆಗೆ ನಡೆಯುತ್ತಿರುವ ಅಶೋಕ್ ಸಿಂಘಲ್ ಜನ್ಮಶತಮಾನೋತ್ಸವದ ಆಚರಣೆಗಳು ಭಾರತದ ಪ್ರಜಾಸತ್ತಾತ್ಮಕ...

ವಿರಾಟ್ ಕೊಹ್ಲಿ: ದಂತಕಥೆಯ ಪಯಣದ ಮತ್ತೊಂದು ಸುವರ್ಣ ಅಧ್ಯಾಯ

ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಜೀವಂತ ಭಾವನೆ ಎಂದು ನಂಬಿರುವ...

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ ಕಂಗಾಲಾದ ಬಡ ಕಾರ್ಮಿಕರು

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ ಶೂನ್ಯ ಜನವಸತಿ!

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು...