ಪತ್ರಿಕೆಯೊಂದರ ಸಂದರ್ಶನದಲ್ಲಿ ಕಸಾಪ ಅಧ್ಯಕ್ಷ ಮಹೇಶ್ ಜೋಶಿಯವರು “26 ಮಠಾಧೀಶರು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಗೆ ಮನವಿ ಸಲ್ಲಿಸಿದ್ದಾರೆ” ಎಂದು ಹೇಳಿದ್ದಾರೆ. ಇವರಾಗಿಯೇ ಆಮಂತ್ರಿಸಿದ್ದಾರೋ ಅಥವಾ ಮಠಮಾನ್ಯಗಳೇ ಆಸಕ್ತಿ ವಹಿಸಿವೆಯೇ ಎಂಬುದು ಕನ್ನಡಿಗರಿಗೆ ಅರ್ಥವಾಗದ ಸಂಗತಿಯೇನಲ್ಲ.
ಈ ನಾಡಿನ ಸಂಸ್ಕೃತಿಯ ಪ್ರತೀಕವಾದ ಸಾಹಿತ್ಯ ಪರಿಷತ್‌ಗೆ ಆರಿಸಿ ಬಂದ ಸಾಹಿತ್ಯೇತರ ಸರ್ಕಾರಿ ವ್ಯಕ್ತಿಗಳು ಜಾತಿ ಬಲ, ಅಧಿಕಾರ ಬಲ, ಹಣ ಬಲ ಇತ್ಯಾದಿ ಲಾಬಿಗಳನ್ನು ನಡೆಸಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಚುನಾಯಿತರಾಗಿ ಬರುವ ಪ್ರಕ್ರಿಯೆಯೇ ನಮ್ಮ ಕಾಲದ ಕೆಟ್ಟ ನೀತಿಯಾಗಿದೆ. ಇಂತಹ ದುರಂತದ ಕಾಲದಲ್ಲಿ ನಾವು ಅಂತಹ ಮಹನೀಯರಿಂದ ನಿರೀಕ್ಷೆಗಳನ್ನಿಟ್ಟುಕೊಳ್ಳುವುದೇ ಹಾಸ್ಯಾಸ್ಪದ. ಇನ್ನು ಈಗಿನ ಅಧ್ಯಕ್ಷ ಆರೆಸ್ಸೆಸ್ ಕೃಪಾಪೋಷಿತ ನಾಟಕ ಕಂಪನಿಯ ಮರಿ ನಟನೆಂಬುದು ಕನ್ನಡಿಗರಿಗೆ ಗೊತ್ತಿಲ್ಲವೇ?
ಇವರು ಕಸಾಪಕ್ಕೆ ಬಂದು ವಕ್ಕರಿಸಿದ ದಿನದಿಂದ ಒಂದಲ್ಲಾ ಒಂದು ವಿವಾದಗಳನ್ನು ಸೃಷ್ಟಿಸುತ್ತಲೇ ಬಂದಿದ್ದಾರೆ. ಹಾವೇರಿಯಲ್ಲಿ ನಡೆದ ಸಮ್ಮೇಳನವನ್ನು ನೆನಪಿಸಿಕೊಳ್ಳಿ, ಅವರ ಸೈದ್ಧಾಂತಿಕ ನಿಲುವುಗಳು ಸಾಹಿತ್ಯದ ಒಳಗೊಳ್ಳುವ ಭಾಷೆಗೆ ಒಗ್ಗುವ ಗುಣವುಳ್ಳದ್ದಲ್ಲ. ಸಾಹಿತ್ಯ ಪರಿಷತ್ತಿನ ಎಲ್ಲ ನಿಯಮ ಕಾನೂನುಗಳನ್ನು ಕೇಂದ್ರೀಕರಣಗೊಳಿಸುವ ಸರ್ವಾಧಿಕಾರಿ ಪ್ರಯತ್ನಗಳನ್ನು ಸಾಬೀತುಗೊಳಿಸಿದ್ದಾಗಿದೆ. ಈ ಬಾರಿಯ ಮಂಡ್ಯದಲ್ಲಿ ನಡೆಯುವ 87 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಮುಂಚೆಯೇ ಸಮ್ಮೇಳನಾಧ್ಯಕ್ಷರು ಸಾಹಿತ್ಯೇತರರಾಗಿರಬಾರದೇಕೆ? ಎಂಬ ಹೇಳಿಕೆ ನೀಡಿ ಮತ್ತೊಮ್ಮೆ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.
ಸಂಯುಕ್ತ ಕರ್ನಾಟಕ ನಡೆಸಿದ ಅವರ ಸಂದರ್ಶನದಲ್ಲಿ 26 ಮಠಾಧೀಶರುಗಳು (ಸರ್ವಾಧ್ಯಕ್ಷತೆಗೆ) ಮನವಿ ಸಲ್ಲಿಸಿದ್ದಾರೆಂಬ ಮಾತನ್ನು ಹೇಳಿದ್ದಾರೆ. ಇವರಾಗಿಯೇ ಆಮಂತ್ರಿಸಿದ್ದಾರೋ ಅಥವಾ ಮಠಮಾನ್ಯರುಗಳೇ ಆಸಕ್ತಿ ವಹಿಸಿದ್ದಾರೋ ಎಂಬುದು ಕನ್ನಡಿಗರಿಗೆ ಅರ್ಥವಾಗದ ಸಂಗತಿಯೇನಲ್ಲ. ಆದರೆ ಸಂದರ್ಶಕ ಕೇಳಿದ ಎಲ್ಲ ಪ್ರಶ್ನೆಗಳಿಗೂ ನೇರವಾಗಿ ಉತ್ತರಿಸದೇ ಅಡ್ಡಗೋಡೆಯ ಮೇಲೆ ದೀಪವಿಡುವ ಚತುರ ಜೋಶಿ ಈಗಾಗಲೇ ಸಮ್ಮೇಳನದ ಅಧ್ಯಕ್ಷರನ್ನು ಆಯ್ಕೆ ಮಾಡಿದ್ದಿರಲೂಬಹುದು. ಬಹಿರಂಗಪಡಿಸದೇ ಚರ್ಚೆ ಮಾಡಿಕೊಳ್ಳುವವರು ಮಾಡಿಕೊಳ್ಳಲಿ ಎಂಬ ನಡೆಯಿದು. ಹಿಂದೆ ದೊಡ್ಡರಂಗೇಗೌಡರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ನೇಮಿಸಿದಾಗಲೂ ಇಂತಹುದೇ ಚರ್ಚೆ ಆಗಿತ್ತು. ಈಗಲೂ ಗಂಟಲು ಹರಿದುಕೊಳ್ಳುವವರು ಹರಿದುಕೊಳ್ಳಲಿ, ತನಗೇನು ಎಂಬ ದುರಹಂಕಾರ ಅವರ ಧೋರಣೆಯಲ್ಲಿದೆ.
ಇದನ್ನೂ ಓದಿ ಕರ್ನಾಟಕದಲ್ಲಿ ಸಾಹಿತಿಗಳಿಗೆ ಬರವಿದೆಯೇ? ಸಾಹಿತ್ಯ ಸಮ್ಮೇಳನಕ್ಕೆ ಸಾಹಿತಿಯೇ ಅಧ್ಯಕ್ಷರಾಗಲಿ; ಚಿಂತಕರ ಒತ್ತಾಯ
ಈ ಚರ್ಚೆಯ ಪರಿಣಾಮಗಳೇನೇ ಇರಲಿ ಈ ಬಾರಿಯಾದರೂ ಮಹಿಳಾ ಪ್ರತಿನಿಧೀಕರಣಕ್ಕೆ ಆದ್ಯತೆ ನೀಡಿ. ಕನ್ನಡ ನಾಡು ನುಡಿಗಾಗಿ ದುಡಿದ ಹಿರಿಯ ಡಾ. ಮಾಲತಿ ಪಟ್ಟಣಶೆಟ್ಟಿ, ಡಾ. ವೀಣಾ ಶಾಂತೇಶ್ವರ, ಸಬಿಹಾ ಭೂಮಿಗೌಡ ಮುಂತಾದ ಅನೇಕ ಲೇಖಕಿಯರಿದ್ದಾರೆ. ದನಿಯೇ ಇರದ ತಳಸಮುದಾಯದ ಸಾಹಿತಿಗಳಿದ್ದಾರೆ. ಅಂಥವರಿಗೆ ಅವಕಾಶ ಸಿಗುವಂತಾಗಬೇಕು. ನುಡಿಜಾತ್ರೆ ರಾಜಕೀಯದ ವೇದಿಕೆಯಾಗಬಾರದು. ಮಠಾಧೀಶರುಗಳಿಗೆ, ರಾಜಕಾರಣಿಗಳಿಗೆ, ಕಾರ್ಪೊರೇಟ್ ಧಣಿಗಳಿಗೆ ಬೇರೆ ವೇದಿಕೆಗಳಿವೆ. ಸಾಹಿತ್ಯದ ವೇದಿಕೆಯನ್ನು ರಾಡಿಗೊಳಿಸುವ ಈ ಹುನ್ನಾರ ಖಂಡಿತವಾಗಿ ಬೇಡ.

ರೇಣುಕಾ ನಿಡಗುಂದಿ
ಲೇಖಕಿ, ದೆಹಲಿ ನಿವಾಸಿ
ಸಾಹಿತ್ಯ ಕ್ಷೇತ್ರವು ಕೂಡ ರಾಜಕೀಯವಾಗಿ ಕಲೆಗೆ ಬೆಲೆ ಇಲ್ಲದೆ ಆಗಿದೆ . ಹಾಗೂ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರಗಳನ್ನು ವ್ಯವಹಾರವಾಗಿ ಮಾಡಿಕೊಂಡಿದ್ದಾರೆ . ಇಲ್ಲಿ ನಿಜವಾದ ಕಲೆ ಹಾಗೂ ಸಾಹಿತ್ಯಕ್ಕೆ ಗೌರವ ಬೆಲೆ ಇಲ್ಲದೆ ಆಗಿದೆ. ಈ ಎಲ್ಲ ವಿಷಯಗಳು ನಾಡಿನ ಬಹುತೇಕ ಕವಿ , ಕಲಾವಿದರಿಗೆ , ಬರಹಗಾರರಿಗೆ ಬೇಸರ ತಂದಿದೆ. ಹೆಚ್ಚಿನ ಸಾಹಿತ್ಯ ಬೇಸರ ವಿಷಯಕ್ಕಾಗಿ ಕರೆ ಮಾಡಿ – 7483146697
ಹನಿ ಗುಬ್ಬಿ
ಸಾಹಿತಿಗಳು ಮತ್ತು ನಿರ್ದೇಶಕರು
ನಾಡಿನ ಪ್ರಖ್ಯಾತ ಕವಿಗಳು ಗುಬ್ಬಿ
ಮಹೇಶ ಜೂಷಿ ಯವರು ಕನ್ನಡ ಸಾಹಿತ್ಯ ಪರಿಷತ್ತು ನಲ್ಲಿ ಬಹಳ ಒಳ್ಳೆಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಕೆಲವು ಎಡಪಂಥೀಯ ವಿಚಾರಧಾರೆಯ ಸಾಹಿತಿಗಳಿಗೆ, ಕೆಲವು ಈ ಪಂಥದ ಪತ್ರಕತ್ರರಿಗೂ ಪಾಪ ಇದು ಪಥ್ಯವಾಗುತಿಲ್ಲ. ಎಲ್ಲದಕ್ಕೂ ಸಂಘ ಪರಿವಾರದ ನಂಟು ಹಚುವುದು ಸರಿ ಯಲ.
ಎಡ ಪಂತೀಯ ರಿಗೆ ನಮ್ಮಹಿಂದೂ ಸಂಸ್ಕೃತಿ ಮತ್ತು ಹಿಂದೂ ಗಳೆಂದರೆ (ಅವರೂ ಕೂಡಾ ಹಿಂದೂಗಳು )ವಿರೋಧ ಮಾಡುವುದು ಅವರಿಗೆ ಅಭ್ಯಾಸ ಏಕೆಂದರೆ RSS ಮತ್ತು ಹಿಂದುತ್ವ ವಿರೋಧಿಸಿದರೆ ಅವರೊಬ್ಬ ವಿಚಾರ ವಾದಿ ಎಂಬ ಭ್ರಮೆ.
ಸಾಹಿತ್ಯೇತರನ್ನು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡುವುದು ಖಂಡಿತವಾಗಿಯೂ ಹಾಸ್ಯಾಸ್ಪದ. ಕನ್ನಡ ನಾಡಿನ ಹಿರಿಮೆ ಗರಿಮೆಯನ್ನು ಎತ್ತಿ ಹಿಡಿಯುವ ಕನ್ನಡ ಸಾಹಿತ್ಯದ ತೇರನ್ನು ಎಳೆಯುವ ಸಾಕಷ್ಟು ಜನ ಸಾಹಿತಿಗಳು ಕರ್ನಾಟಕದಲ್ಲಿರುವಾಗ ಸಾಹಿತ್ಯೇತರರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ವಿಷಯ ಕೈಬಿಡುವುದು ಒಳ್ಳೆಯದು. ಹಾಗೂ ಮಹಿಳಾ ಸಾಹಿತಿಗಳನ್ನು ಆಯ್ಕೆ ಮಾಡುವುದು ಒಳಿತು. ಈಗಾಗಲೇ ನಡೆದಿರುವ ಸಾಹಿತ್ಯ ಸಮ್ಮೇಳನಗಳನ್ನು ಗಮನಿಸಿದಾಗ ಪುರುಷ ಪ್ರಾಧಾನ್ಯತೆ ಎದ್ದು ಕಾಣುವುದು . ಅದಾಗಿಯೂ ಈ ಸಮ್ಮೇಳನದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವುದರಿಂದ ಅವರಿಗೂ ಅವಕಾಶವನ್ನು ನೀಡಿದಂತಾಗುವುದು. ಮಹಿಳಾ ಸಾಹಿತಿಗಳನ್ನೇ ಮಂಡ್ಯ ಜಿಲ್ಲೆಯ ಸಾಹಿತ್ಯ ಸಮ್ಮೇಳನಕ್ಕೆ ಆಯ್ಕೆ ಮಾಡುವುದು ಸೂಕ್ತ ಎಂಬುದು ನನ್ನ ಅಭಿಪ್ರಾಯ.
ಡಾ. ಬಿ ಟಿ ಮಂಜುನಾಥ ಬಾಗೂರು ಹೊಸದುರ್ಗ
We always against changes we don’t accept any changes and we are not open for improvement in any case. As per me Mr. Joshi has done good job in Parishath let us join hands with him
ಕನ್ನಡ ಸಾಹಿತ್ಯ ಕ್ಷೇತ್ರ ಈಗ ಎಡ ಬಲ ವಿಚಾರಗಳ ಮಧ್ಯೆ ಸಿಕ್ಕಿಕೊಂಡು ನಲುಗುತ್ತಿದೆ. ಪ್ರಗತಿಪರ ಎಂದು ಹೇಳಿಕೊಳ್ಳುವ ಎಡಚರು ಮತ್ತು ವಾಸ್ತವಿಕ ಎಂದು ಹೇಳಿಕೊಳ್ಳುವ ಬಲ ಪಂಥೀಯರು ಇಬ್ಬರು ಸೇರಿ ರಾಡಿ ಎಬ್ಬಿಸುತ್ತಿದಾರೆ.ಇದು ಖಂಡಿತ ರಾಜಕೀಯ ಪ್ರಭಾವ. ಬಿಎಂಶ್ರೀ,ಕುವೆಂಪು,ಮಾಸ್ತಿ,ಕಾರಂತ,ಬೇಂದ್ರೆ ಅವರುಗಳ ಕೊಡುಗೆ ಕನ್ನಡ ಸಾಹಿತ್ಯವನ್ನು ಸಿರಿವಂತ ಮಾಡಿದ್ದಾರೆ ಇವರುಗಳು ಅದನ್ನು ಹಾಳುಮಾಡಿ ನಗೆಪಾಟಲಿಗೆ ಗುರಿಮಾಡುತ್ತಿದ್ದಾರೆ. ಅತ್ಯಂತ ವಿಷಾದಕರ ಸಂಗತಿ.
This kind of writers should not create unnecessary politics.
Where were the days of great people when only persons of literature would be invited for liter festivals and not religious persons?
ಎಷ್ಟೋ ಜನ ಹಿರಿಯ ಸಾಹಿತಿಗಳು ಇರುವಾಗ ಜೋಶಿ ಅವರು ಮಠಾಧ್ಯಕ್ಷರಿಗೆ ರಾಜಕಾರಣಿಗಳಿಗೆ ಆದ್ಯತೆ ನೀಡುತ್ತಿರುವುದಾದರು ಏಕೆ? 🤔 ಇಲ್ಲಿಯವರೆಗೂ ಬೆರಳೆಣಿಕೆಯ ಸಂಖ್ಯೆಯಷ್ಟು ಮಹಿಳಾ ಅಧ್ಯಕ್ಷರಾಗಿದ್ದಾರೆ ಸ್ತ್ರೀ ಲೇಖಕಿಯರಿಗೆ ಏಕೆ ಸಮ್ಮೇಳನದ ಅಧ್ಯಕ್ಷತೆ ನೀಡಬಾರದು..
ಸಾಹಿತ್ಯ ವಲಯವನ್ನು ಮಠ ರಾಜಕಾರಣಕ್ಕೆ ಒಳಪಡಿಸಿ ಸಾಹಿತ್ಯಕ್ಕಿರುವ ಘನತೆಯನ್ನು ಕಳೆಯಬೇಡಿ
The article starts with a sentence that Joshi is from RSS. The intentions of the author is very clear to smear some black paint on him. A person’s caste, region, institutions are not important. What he does is important.
Criticize his actions, if they are not proper.
Do mean to say only Marxists and socialists are to be there??