ಚಿಕ್ಕನಾಯನಹಳ್ಳಿ | ಕೊನೆಗೂ ಬರಕನಹಾಲ್ ಗ್ರಾಮಕ್ಕೆ ಬಂತು ಸರ್ಕಾರಿ ಬಸ್ : ಸಂಭ್ರಮದಿಂದ ಸ್ವಾಗತಿಸಿದ ಗ್ರಾಮಸ್ಥರು

Date:

Advertisements

ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿ ಬರಕನಹಾಲ್ ಗ್ರಾಮಕ್ಕೆ ಸ್ವಾತಂತ್ರ್ಯ ಬಂದು 7 ದಶಕಗಳನ್ನು ಕಳೆದರು ಬಸ್ ಸಂಪರ್ಕವಿಲ್ಲದೆ ವಿದ್ಯಾರ್ಥಿಗಳಿಗೆ, ರೈತರಿಗೆ, ಕಾರ್ಮಿಕರ ಸಂಚಾರಕ್ಕೆ ತೊಂದರೆಯಾಗಿತ್ತು. ಕೊನೆಗೂ ಈ ಗ್ರಾಮಕ್ಕೆ ಸರ್ಕಾರಿ ಬಸ್ ಸೇವೆ ಆರಂಭವಾಗಿದ್ದು ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಸ್ವಾತಂತ್ರ್ಯ ಪೂರ್ವದಿಂದಲೂ, ಈ ಗ್ರಾಮಕ್ಕೆ ಸಾರಿಗೆ ಸಂಪರ್ಕವಿಲ್ಲದೆ ಇಲ್ಲಿನ ನಿವಾಸಿಗಳು ತುಂಬಾ ತೊಂದರೆ ಅನುಭವಿಸಿದ್ದರು. ಹುಳಿಯಾರು, ಚಿಕ್ಕನಾಯಕನಹಳ್ಳಿ, ತಿಪಟೂರು, ತುಮಕೂರಿಗೆ ತೆರಲು ಸಾರಿಗೆ ಸಂಪರ್ಕವಿಲ್ಲದೆ ದಶಕಗಳಿಂದ ಇಲ್ಲಿನ ಜನ ಪಟ್ಟ ಯಾತನೆ ಅಷ್ಟಿಟಲ್ಲ. ಅನಿವಾರ್ಯವಿದ್ದಾಗ ಇಲ್ಲಿ ಜನ ಆಟೋ, ಟೆಂಪೋ ಗಳ ಮೊರೆಹೋಗಿದ್ದರು. ರೋಗಿಗಳು, ವೃದ್ಧರನ್ನು ಕರೆದುಕೊಂಡು ಹೋಗಲು ಊರಿನ ಬೈಕ್ ಕಾರು, ಉಳ್ಳವರನ್ನು ಆಶ್ರಯಿಸಿದ್ದರು.

1000549055

ಹುಳಿಯಾರು ಮಾರ್ಗದ ಮೂಲಕ ಬೆಂಗಳೂರಿನಿಂದ ಹೊಸದುರ್ಗಕ್ಕೂ, ಹೊಸದುರ್ಗದಿಂದ ಬೆಂಗಳೂರಿಗೂ ನಿತ್ಯ ನೂರಾರು ಬಸ್‌ಗಳು ಓಡಾಡುತ್ತವೆ. ಅದೇ ಮಾರ್ಗದ ಹೊಸದುರ್ಗದಿಂದ ಹುಳಿಯಾರು, ಬರಕನಹಾಲ್ ತಿಮ್ಮನಹಳ್ಳಿ, ಕಂದಿಕೆರೆ, ಸಾಲಕಟ್ಟೆ ಕ್ರಾಸ್, ಚಿಕ್ಕನಾಯಕನಹಳ್ಳಿ ಹೀಗೆ ಬೆಳಿಗ್ಗೆ 7 ಗಂಟೆಗೆ ಮತ್ತು ಸಂಜೆ ಸಮಯಕ್ಕೆ ಹಿಂತಿರುಗುವಂತೆ ಅದೇ ಮಾರ್ಗವಾದ ಸಾಲಕಟ್ಟೆ ಕ್ರಾಸ್, ಕಂದಿಕೆರೆ, ತಿಮ್ಮನಹಳ್ಳಿ, ಬರಕನಹಾಲ್, ಹುಳಿಯಾರು, ಹೊಸದುರ್ಗ ಬದಲಾಯಿಸಿದರೆ ಹತ್ತಾರು ಹಳ್ಳಿಗಳ ಜನರಿಗೆ ಅನುಕೂಲ ಕಲ್ಪಿಸಿದಂತಾಗುತ್ತದೆ ತುಮಕೂರಿನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜು ಅವರಿಗೆ ಸಾಮಾಜಿಕ ಹೋರಾಟಗಾರ ಸಬ್ಬೆನಹಳ್ಳಿ ಶ್ರೀನಿವಾಸ್ ಹಾಗೂ ಕೆ.ಡಿ.ಪಿ ನಾಮಿನಿ ಸದಸ್ಯ ಶಂಕರ್ ಬರಕನಹಾಲ್ ಮನವಿ ಸಲ್ಲಿಸಿದ್ದರು.

Advertisements
1000549040

ಮನವಿಗೆ ಸ್ಪಂದಿಸಿದ ಅಧಿಕಾರಿಗಳು ತಿಪಟೂರಿನಿಂದ ಚಿಕ್ಕನಾಯಕನಹಳ್ಳಿ ಕಂದಿಕೆರೆ, ತಿಮ್ಮನಹಳ್ಳಿ, ಬರಕನಹಾಲ್ ಮಾರ್ಗವಾಗಿ ಹುಳಿಯಾರಿಗೂ ಹುಳಿಯಾರಿನಿಂದ ಬರಕನಹಾಲ್ ಮಾರ್ಗವಾಗಿ ತಿಪಟೂರಿಗೂ ಬೆಳಗ್ಗೆ ಮತ್ತು ಸಂಜೆ ನೂತನ ಮಾರ್ಗ ಆರಂಭಿಸಿದ್ದು ಗ್ರಾಮಸ್ಥರು ಹರ್ಷಕ್ಕೆ ಕಾರಣವಾಗಿದೆ.

ಗ್ರಾಮಕ್ಕೆ ಬಸ್ ಸಂಪರ್ಕ ಕಲ್ಪಿಸಲು ಶ್ರಮಿಸಿದ್ದ ಎಲ್ಲರನ್ನೂ ಗ್ರಾಮಸ್ಥರು ಅಭಿನಂಧಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಮಾರ್, ಪಂಚಾಯತ್ ಸದಸ್ಯರಾದ ಜಗದೀಶ್, ಪುಷ್ಪ ಮಂಜುನಾಥ್ ಹಾಗೂ ಎಲ್ಲಾ ಗ್ರಾಮಸ್ಥರೂ ಸಿಹಿ ವಿತರಿಸಿ ಸಂಭ್ರಮ ಆಚರಿಸಿದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ಒಳ ಮೀಸಲಾತಿ : ಅಲೆಮಾರಿಗಳಿಗೆ ನ್ಯಾಯ ಸಮ್ಮತ ಪಾಲು ನೀಡಲು ಒತ್ತಾಯ

ಒಳ ಮೀಸಲಾತಿ ಕಲ್ಪಿಸುವಲ್ಲಿ ಸೂಕ್ಷ್ಮ, ಅತಿಸೂಕ್ಷ್ಮ ಅಲೆಮಾರಿಯ 59 ಸಮುದಾಯಗಳಿಗೆ ಆಗಿರುವ...

ಗುಬ್ಬಿ | ರೈತನ ಕೃಷಿ ಚಟುವಟಿಕೆಗೆ ಜೇನು ಸಾಕಾಣಿಕೆ ವರದಾನ : ಪುಷ್ಪಲತಾ

ರೈತರು ತಮ್ಮ ಕೃಷಿ ಚಟುವಟಿಕೆಯಲ್ಲಿ ಪ್ರಮುಖ ಘಟವಾದ ಪರಾಗಸ್ಪರ್ಶ ಕ್ರಿಯೆಗೆ...

ಮಂಗಳೂರು | ಆ. 23: ಅಲ್ ವಫಾ ಚಾರಿಟೇಬಲ್ ಟ್ರಸ್ಟ್‌ನಿಂದ 15 ಜೋಡಿಗಳ ಸರಳ ಸಾಮೂಹಿಕ ವಿವಾಹ

ಮಂಗಳೂರು ಭಾಗದಲ್ಲಿ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಅಲ್ ವಫಾ ಚಾರಿಟೆಬಲ್ ಟ್ರಸ್ಟ್...

ಗುಬ್ಬಿ | ಎಂ.ಎನ್.ಕೋಟೆ ಗ್ರಾಪಂ ಉಪಾಧ್ಯಕ್ಷರಾಗಿ ಸಿದ್ದಗಂಗಮ್ಮ ಅವಿರೋಧ ಆಯ್ಕೆ

ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಎಂ.ಎನ್.ಕೋಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ...

Download Eedina App Android / iOS

X