ವಿಶ್ವಸಂಸ್ಥೆ (ಯುಎನ್) ತನ್ನ ನೂತನ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡಿದೆ. ಜಗತ್ತಿನ ಎಲ್ಲ ದೇಶಗಳಲ್ಲಿಯೂ ಒಟ್ಟು 110 ಕೋಟಿ ಜನರು ತೀವ್ರ ಬಡತನದಲ್ಲಿ ವಾಸುತ್ತಿದ್ದಾರೆ. ಅವರಲ್ಲಿ, ಅರ್ಧದಷ್ಟು ಜನರು ತಮ್ಮ ಬದುಕಿನ ಬವಣೆಗಾಗಿ ಸಂಘರ್ಷ ಅನುಭಿವಿಸುತ್ತಿದ್ದಾರೆ. ಈ ಒಟ್ಟು ಬಡವರಲ್ಲಿ ಸರಿಸುಮಾರು 22% ಬಡವರು ಭಾರತದಲ್ಲಿದ್ದಾರೆ.
ಯುಎನ್ ಡೆವಲಪ್‌ಮೆಂಟ್ ಪ್ರೋಗ್ರಾಂ (ಯುಎನ್‌ಡಿಪಿ) ಗುರುವಾರ ಪ್ರಕಟಿಸಿದ ಸೂಚ್ಯಂಕದ ಪ್ರಕಾರ, ‘ಬಹು ಆಯಾಮದ ಬಡತನ’ದ ಎಲ್ಲ ಸೂಚಕಗಳಲ್ಲಿ ಯುದ್ಧದ ಬಿಕ್ಕಟ್ಟನ್ನು ಎದುರಿಸುತ್ತಿರುವ ದೇಶಗಳ ಜನರು ಹೆಚ್ಚು ಅಭಾವವನ್ನು ಅನುಭವಿಸುತ್ತಿವೆ. ಎಲ್ಲ ದೇಶಗಳಲ್ಲಿಯೂ ಪೋಷಣೆ, ವಿದ್ಯುತ್ ಸಂಪರ್ಕ, ನೀರು ಹಾಗೂ ನೈರ್ಮಲ್ಯದಂತಹ ಮೂಲಭೂತ ಸೌಲಭ್ಯಗಳ ವಿಚಾರದಲ್ಲಿ ಹೆಚ್ಚು ತೀವ್ರವಾದ ಅಸಮಾನತೆ ಎದ್ದುಕಾಣುತ್ತಿದೆ.
ಬಹುಆಯಾಮದ ಬಡತನ ಸೂಚ್ಯಂಕದ ಪ್ರಕಾರ, 112 ದೇಶಗಳ 630 ಕೋಟಿ ಜನರಲ್ಲಿ 110 ಕೋಟಿ ಜನರು ತೀವ್ರ ಬಡತನವನ್ನು ಎದುರಿಸುತ್ತಿದ್ದಾರೆ. ಅವರಲ್ಲಿ, 45.5 ಕೋಟಿ ಜನರು ತಮ್ಮ ಬದುಕು, ಬವಣೆ, ಜೀವನ ದೂಡುವುದಕ್ಕೂ ಸಂಘರ್ಷ ನಡೆಸುತ್ತಿದ್ದಾರೆ.
“ಇತ್ತೀಚಿನ ವರ್ಷಗಳಲ್ಲಿ ಯುದ್ಧ, ಘರ್ಷಣೆಗಳು ತೀವ್ರಗೊಂಡಿವೆ ಮತ್ತು ಹೆಚ್ಚುತ್ತಿವೆ. ಸಾವು-ನೋವುಗಳಿಂದ ಬಡತನದ ಪ್ರಮಾಣವು ಹೊಸ ಗರಿಷ್ಠ ಮಟ್ಟವನ್ನು ತಲುಪಿದೆ. ಪರಿಣಾಮ, ಲಕ್ಷಾಂತರ ಜನರನ್ನು ಸ್ಥಳಾಂತರವಾಗುತ್ತಿದ್ದಾರೆ. ಅವರ ಜೀವನ ಮತ್ತು ಜೀವನೋಪಾಯಗಳಿಗೆ ವ್ಯಾಪಕ ಸಮಸ್ಯೆ, ಅಡ್ಡಿ-ಆತಂಕಗಳು ಎದುರಾಗುತ್ತಿವೆ” ಎಂದು ಯುಎನ್‌ಡಿಪಿ ತಂಡದಲ್ಲಿದ್ದ ಅಚಿಮ್ ಸ್ಟೈನರ್ ಹೇಳಿದ್ದಾರೆ.
18 ವರ್ಷದೊಳಗಿನ ಸುಮಾರು 58.4 ಕೋಟಿ ಅಪ್ರಾಪ್ತರು ತೀವ್ರ ಬಡತನದೊಳಗೆ ಬೆಳೆಯುತ್ತಿದ್ದಾರೆ. ಇದು ಪ್ರಪಂಚದಾದ್ಯಂತ ಇರುವ 27.9% ಮಕ್ಕಳ ಪೈಕಿ, 13.5% ಮಕ್ಕಳು ಬಡತನದ ಬೇಗೆಯಲ್ಲಿ ಬೇಯುತ್ತಿದ್ದಾರೆ ಎಂದು ಸಮೀಕ್ಷೆ ಸೂಚಿಸುತ್ತಿದೆ. ಅಲ್ಲದೆ, ಯುದ್ಧ ಪೀಡಿತ ರಾಷ್ಟ್ರಗಳಲ್ಲಿ ಮಕ್ಕಳ ಮರಣ ಪ್ರಮಾಣವು 8% ಇದ್ದು, ಶಾಂತಿಯುತ ದೇಶಗಳಲ್ಲಿ 1.1% ಇದೆ.
ವಿಶ್ವದ ಬಡವರ ಪೈಕಿ 83.2% ಜನರು ಆಫ್ರಿಕಾ ಮತ್ತು ದಕ್ಷಿಣ ಏಷ್ಯಾ (ಬಾಂಗ್ಲಾದೇಶ, ಭೂತಾನ್, ಭಾರತ, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾದಂತಹ ರಾಷ್ಟ್ರಗಳು) ಭಾಗಗಳಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿ ಗಮನ ಸೆಳೆದಿದೆ.
ಈ ವರದಿ ಓದಿದ್ದೀರಾ?: ಭಾರತ ಹಸಿವು ಮುಕ್ತ ಆಗೋದು ಯಾವಾಗ ಮೋದಿಜೀ?
‘ಆಕ್ಸ್‌ಫರ್ಡ್ ಪಾವರ್ಟಿ ಮತ್ತು ಹ್ಯೂಮನ್ ಡೆವಲಪ್‌ಮೆಂಟ್ ಇನಿಶಿಯೇಟಿವ್’ (OPHI) ಜೊತೆಗೂಡಿ ‘ಬಹು ಆಯಾಮದ ಬಡತನ’ ಮಟ್ಟವನ್ನು ಯುಎನ್‌ಡಿಪಿ ನಿರ್ಣಯಿಸಿದೆ. ಮೂಲ ಸೌಕರ್ಯಗಳಾದ ವಸತಿ, ನೈರ್ಮಲ್ಯ, ವಿದ್ಯುತ್, ಅಡುಗೆ ಇಂಧನ, ಪೋಷಣೆ ಹಾಗೂ ಮಕ್ಕಳ ಶಾಲಾ ಹಾಜರಾತಿಯಂತಹ ಹಲವಾರು ಸೂಚಕಗಳನ್ನು ಬಳಸಿಕೊಂಡು ಸಮೀಕ್ಷಾ ವರದಿಯನ್ನು ಸಿದ್ದಪಡಿಸಿದೆ.
“ಸಂಘರ್ಷ ಪೀಡಿತ ದೇಶಗಳಲ್ಲಿನ ಬಡವರು ಮೂಲಭೂತ ಅಗತ್ಯಗಳಿಗಾಗಿ ಹೆಚ್ಚು ಹೋರಾಟವು ನಡೆಸುವಂತಾಗಿದೆ. ಅಲ್ಲದೆ, ಅವರು ಹತಾಶರಾಗಿದ್ದಾರೆ” ಯುಎನ್‌ಡಿಪಿ ಮುಖ್ಯ ಅಂಕಿಅಂಶಶಾಸ್ತ್ರಜ್ಞ ಯಾಂಚುನ್ ಜಾಂಗ್ ಹೇಳಿದ್ದಾರೆ.
ಭಾರತದ 140 ಕೋಟಿ ಜನಸಂಖ್ಯೆಯ ಪೈಕಿ 23.4 ಕೋಟಿ ಜನರು ಅಂತ್ಯಂತ ಬಡತನದಲ್ಲಿ ಬದುಕುತ್ತಿದ್ದಾರೆ. ಅಂದರೆ, ಇಡೀ ಪ್ರಪಂಚದ ಒಟ್ಟು ಬಡವರಲ್ಲಿ 22% ಬಡವರು ಭಾರತದಲ್ಲಿಯೇ ಇದ್ದಾರೆ. ನಂತರದ ಸ್ಥಾನಗಳಲ್ಲಿ ಪಾಕಿಸ್ತಾನ, ಇಥಿಯೋಪಿಯಾ, ನೈಜೀರಿಯಾ ಹಾಗೂ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯಗಳಿವೆ. ಈ ಐದು ದೇಶಗಳಲ್ಲಿ ಸುಮಾರು 45 ಕೋಟಿ ಬಡವರಿದ್ದಾರೆ.
ನೀವು ಅತ್ಯಂತ ಉತ್ಸಾಹದಿಂದ ನಮ್ಮ ದೇಶದ ಸಂಖ್ಯೆಯನ್ನು ಪ್ರಕಟಿಸಿರುವುದರ ಹಿಂದಿನ ಮರ್ಮ ಅರ್ಥವಾಗುವಂಥದ್ದು… ಮೊದಲು ತಮ್ಮ ಸಮುದಾಯದ ಸಂಖ್ಯಾಬಲವನ್ನು ಹೆಚ್ಚಿಸಿಕೊಳ್ಳಬೇಕೆಂಬ ಒಂದೇ ದುರುದ್ದೇಶದಿಂದ ನಿಯಂತ್ರಣವಿಲ್ಲದೇ ಪ್ರಾಣಿಗಳಂತೆ ಹಡೆಯುವುದೇ ತಮ್ಮ ಕಾಯಕವನ್ನಾಗಿಸಿಕೊಂಡಿರುವವರಿಗೆ ತಿಳಿ ಹೇಳಿ.. ಆಗ ಬಡತನ ಸುಧಾರಿಸಲು ಹೆಚ್ಚಿನ ಸಮಯ ಬೇಕಾಗುವುದಿಲ್ಲ.. ನೀವೂ ಸಹ ಉದ್ದೇಶಪೂರ್ವಕವಾಗಿ ಇಂತಹ ಸುದ್ದಿಗಳನ್ನು ಪ್ರಕಟಿಸುವ ಪ್ರಮೇಯ ಒದಗಿ ಬರುವುದಿಲ್ಲ.
ಫೇಕೂ ಸಾಧನೇ