ಐಪಿಎಲ್‌ 2023 | ಅತಿಹೆಚ್ಚು ವಿಕೆಟ್‌; ಇತಿಹಾಸ ಬರೆದ ಯುಜ್ವೇಂದ್ರ ಚಹಾಲ್

Date:

Advertisements

ರಾಜಸ್ಥಾನ ರಾಯಲ್ಸ್‌ ತಂಡದ ಅನುಭವಿ ಸ್ಪಿನ್ನರ್‌ ಯುಜ್ವೇಂದ್ರ ಚಹಾಲ್, ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.

ಐಪಿಎಲ್‌ 16ನೇ ಆವೃತ್ತಿಯಲ್ಲಿ ಗುರುವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ತಮ್ಮ ಮೊದಲ ಓವರ್‌ನಲ್ಲೇ ಕೆಕೆಆರ್ ನಾಯಕ ನಿತೀಶ್ ರಾಣಾ ಅವರ ವಿಕೆಟ್ ಪಡೆಯುವ ಮೂಲಕ ಚಹಾಲ್‌ ಹೊಸ ಮೈಲಿಗಲ್ಲು ನಿರ್ಮಿಸಿದರು.

ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲೂ ಭಾರತದ ಪರ ಅತಿಹೆಚ್ಚು ವಿಕೆಟ್‌ (91) ಪಡೆದ ದಾಖಲೆ ಚಹಾಲ್‌ ಹೆಸರಿನಲ್ಲಿದೆ.

ಕೋಲ್ಕತ್ತಾ ನೈಟ್‌ ರೈಡರ್ಸ್‌ ವಿರುದ್ಧ 4 ಓವರ್‌ ಬೌಲಿಂಗ್‌ ಮಾಡಿದ ಲೆಗ್‌ಸ್ಪಿನ್ನರ್‌ ಚಹಾಲ್‌, 25 ರನ್‌ ನೀಡಿ 4 ವಿಕೆಟ್‌ ಪಡೆದರು. ಆ ಮೂಲಕ ಐಪಿಎಲ್‌ನಲ್ಲಿ ತಮ್ಮ ಒಟ್ಟು ವಿಕೆಟ್‌ ಗಳಿಕೆಯನ್ನು 187ಕ್ಕೆ ಏರಿಸಿಕೊಂಡರು.

ಈ ಹಾದಿಯಲ್ಲಿ ಚಹಾಲ್‌, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಲ್ ರೌಂಡರ್ ಡ್ವೇನ್ ಬ್ರಾವೋ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಬ್ರಾವೋ 161 ಪಂದ್ಯಗಳಲ್ಲಿ 183 ವಿಕೆಟ್‌ ಪಡೆದರೆ, ಚಹಾಲ್‌ 143 ಪಂದ್ಯಗಳಲ್ಲೇ ಇತಿಹಾಸ ಬರೆದಿದ್ದಾರೆ. ಮೂರನೇ ಸ್ಥಾನದಲ್ಲಿ ಪಿಯೂಷ್‌ ಚಾವ್ಲಾ (174 ವಿಕೆಟ್‌,176 ಪಂದ್ಯ) ಅಮಿತ್‌ ಮಿಶ್ರಾ (172 ವಿಕೆಟ್‌,160 ಪಂದ್ಯ) ಹಾಗೂ ರವಿಚಂದ್ರನ್‌ ಅಶ್ವಿನ್‌ (171 ವಿಕೆಟ್‌,196 ಪಂದ್ಯ)  ನಂತರ ಸ್ಥಾನದಲ್ಲಿದ್ದಾರೆ.

ವಿಶೇಷವೆಂದರೆ ಆರ್​ಸಿಬಿ ಪರ ಅತ್ಯಧಿಕ ವಿಕೆಟ್ ಪಡೆದ ದಾಖಲೆ ಕೂಡ ಚಹಾಲ್ ಹೆಸರಿನಲ್ಲಿದೆ. 2014 ರಿಂದ 2021 ರವರೆಗೆ ಆರ್​ಸಿಬಿ ಪರ 113 ಪಂದ್ಯಗಳನ್ನಾಡಿದ್ದ ಯುಜ್ವೇಂದ್ರ ಚಹಾಲ್ ಒಟ್ಟು 139 ವಿಕೆಟ್ ಕಬಳಿಸಿದ್ದರು.

ಈ ಸುದ್ದಿ ಓದಿದ್ದೀರಾ?: ಐಪಿಎಲ್‌ 2023 | ಅಂತಿಮ ಎಸೆತದಲ್ಲಿ ʻನೋ ಬಾಲ್‌ ಡ್ರಾಮʼ; ಸೋತು ಗೆದ್ದ ಹೈದರಾಬಾದ್!

ರಾಜಸ್ಥಾನ ರಾಯಲ್ಸ್‌ ತಂಡಕ್ಕೆ 9 ವಿಕೆಟ್‌ಗಳ ಭರ್ಜರಿ ಜಯ

ಗುರುವಾರದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟ್ ಮಾಡಿದ್ದ ಆತಿಥೇಯ ಕೋಲ್ಕತ್ತಾ ನೈಟ್ ರೈಡರ್ಸ್, ನಿಗದಿತ 20 ಓವರ್‌ಗಳಲ್ಲಿ  8 ವಿಕೆಟ್‌ ನಷ್ಟದಲ್ಲಿ 149 ರನ್ ಗಳಿಸಿತು.

ಸಾಮಾನ್ಯ ಗುರಿ ಬೆನ್ನತ್ತಿದ ಸಂಜು ಸ್ಯಾಮ್ಸನ್‌ ಪಡೆಗೆ ಆರಂಭದಲ್ಲಿ ಕೊಂಚ ಆಘಾತ ಎದುರಾಗಿತ್ತು. ಆರಂಭಿಕ ಜೋಸ್ ಬಟ್ಲರ್, ಖಾತೆ ತೆರೆಯುವ ಮುನ್ನವೇ ರನೌಟ್‌ಗೆ ಬಲಿಯಾಗಿದ್ದರು. ಆದರೆ ಯುವ ಎಡಗೈ ಬ್ಯಾಟರ್‌ ಯಶಸ್ವಿ ಜೈಸ್ವಾಲ್ (98* ರನ್) ಮತ್ತು ನಾಯಕ ಸಂಜು ಸ್ಯಾಮ್ಸನ್ (48* ರನ್) ಭರ್ಜರಿ ಬ್ಯಾಟಿಂಗ್ ನೆರವಿನಿಂದ 13.1 ಓವರ್ ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು 151 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತ್ತು.

ಈ ಗೆಲುವಿನೊಂದಿಗೆ ಆರ್‌ಆರ್ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ, ಕೆಕೆಆರ್ 7ನೇ ಸ್ಥಾನಕ್ಕೆ ಕುಸಿಯಿತು. ಆ ಮೂಲಕ ಕೋಲ್ಕತ್ತಾ ತಂಡದ ಪ್ಲೇ- ಆಫ್ಸ್‌ ಹಾದಿ ಮತ್ತಷ್ಟು ಕಠಿಣವಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ರೀಡಾ ಮೈದಾನದಲ್ಲೂ ಆಪರೇಷನ್ ಸಿಂಧೂರ: ಪಾಕಿಸ್ತಾನದ ಕಾಲೆಳೆದ ಪ್ರಧಾನಿ ಮೋದಿ

ಭಾರತ ತಂಡ ಪಾಕಿಸ್ತಾನವನ್ನು ಸೋಲಿಸಿ ಏಷ್ಯಾ ಕಪ್ ಗೆದ್ದ ಬೆನ್ನಲ್ಲೇ ಪ್ರಧಾನಿ...

ಏಪ್ಯಾ ಕಪ್ ಫೈನಲ್ : ಪಾಕ್ ವಿರುದ್ಧ ಟೀಮ್ ಇಂಡಿಯಾಗೆ ರೋಚಕ ಜಯ; 9ನೇ ಬಾರಿ ಚಾಂಪಿಯನ್

ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ನಡೆದ ಏಪ್ಯಾ ಕಪ್ ಫೈನಲ್...

ಬಿಸಿಸಿಐ ನೂತನ ಅಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ ಮಿಥುನ್ ಮನ್ಹಾಸ್ ಆಯ್ಕೆ; ಯಾರಿವರು?

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ನೂತನ ಅಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ...

ಶೀತಲ್ ದೇವಿಗೆ ಐತಿಹಾಸಿಕ ಚಿನ್ನ; ವಿಶ್ವ ಪ್ಯಾರಾ ಆರ್ಚರಿಯಲ್ಲಿ ಭಾರತದ ಹೆಮ್ಮೆ

ದಕ್ಷಿಣ ಕೊರಿಯಾದ ಗ್ವಾಂಗ್ಜುನಲ್ಲಿ ನಡೆದ ವಿಶ್ವ ಪ್ಯಾರಾ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ...

Download Eedina App Android / iOS

X