ಐಪಿಎಲ್‌ 2023 | ಅಂತಿಮ ಎಸೆತದಲ್ಲಿ ʻನೋ ಬಾಲ್‌ ಡ್ರಾಮʼ; ಸೋತು ಗೆದ್ದ ಹೈದರಾಬಾದ್!

Date:

ನಾಟಕೀಯ ತಿರುವು ಪಡೆದ ಜಿದ್ದಾಜಿದ್ದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಹೈದರಾಬಾದ್‌ 4 ವಿಕೆಟ್‌ಗಳ ವೀರೋಚಿತ ಜಯ ಸಾಧಿಸಿದೆ.

- Advertisement -

ಜೈಪುರದಲ್ಲಿ ಭಾನುವಾರ ನಡೆದ ಡಬಲ್‌ ಹೆಡ್ಡರ್‌ʼನ ಎರಡನೇ ಪಂದ್ಯ ಆತಿಥೇಯ ರಾಜಸ್ಥಾನ ರಾಯಲ್ಸ್‌ ತಂಡದ ಪಾಲಿಗೆ ʻಕೈಗೆ ಬಂದ ತುತ್ತು ಬಾಯಿಗೆ ಇಲ್ಲʼ ಎಂಬಂತಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ವಿಕೆಟ್-ನೋಬಾಲ್-ಸಿಕ್ಸರ್!

215 ರನ್‌ ಗುರಿ ಬೆನ್ನಟ್ಟುವ ವೇಳೆ ಹೈದರಾಬಾದ್‌ ಗೆಲುವಿಗೆ ಅಂತಿಮ ಎಸೆತದಲ್ಲಿ 5 ರನ್‌ಗಳ ಅಗತ್ಯವಿತ್ತು. ಸ್ಟ್ರೈಕ್‌ನಲ್ಲಿದ್ದ ಸಮದ್‌ ಲಾಂಗ್‌ ಆಫ್‌ಗೆ ಬಾರಿಸಿದ್ದ ಚೆಂಡನ್ನು ಕ್ಷೇತ್ರರಕ್ಷಣೆಯಲ್ಲಿದ್ದ ಜಾಸ್‌ ಬಟ್ಲರ್‌ ಸುಲಭವಾಗಿಯೇ ಕ್ಯಾಚ್‌ ಹಿಡಿದಿದ್ದರು.

ರಾಯಲ್ಸ್‌ ಪಾಳಯದಲ್ಲಿ ವಿಜಯೋತ್ಸವ ಪ್ರಾರಂಭವಾಗುತ್ತಲೇ ಮೈದಾನದಲ್ಲಿ ʻನೋ ಬಾಲ್‌ ಸೈರನ್‌ʼ ಮೊಳಗಿತ್ತು. ಸಂದೀಪ್‌ ಶರ್ಮಾ ಎಸೆದ ಅಂತಿಮ ಎಸೆತ ನೋ ಬಾಲ್‌ ಏಂಬುದು ರೀಪ್ಲೇನಲ್ಲಿ ಸ್ಪಷ್ಟವಾಗಿತ್ತು. ಹೀಗಾಗಿ ಶರ್ಮಾ ಹೆಚ್ಚುವರಿಯಾಗಿ ಬೌಲ್‌ ಮಾಡಬೇಕಾಯಿತು.

ಫ್ರೀ ಹಿಟ್‌ ಅವಕಾಶವಿದ್ದ ಎಸೆತದಲ್ಲಿ ಹೈದರಾಬಾದ್‌ ಗೆಲುವಿಗೆ  4 ರನ್‌ಗಳ ಅಗತ್ಯವಿತ್ತು. ಮೂರು ರನ್‌ ಪಡೆದರೆ ಪಂದ್ಯ ಟೈ ಆಗುತ್ತಿತ್ತು. ಆದರೆ ಯಾವುದರ ತೆಲನೋವು ಬೇಡ ಎಂಬಂತೆ ಸಂದೀಪ್‌ ಶರ್ಮಾ ಎಸೆದ ಬಹುತೇಕ ಯಾರ್ಕರ್‌ ಎಸೆತವನ್ನು ಸಮದ್‌ ಸುಂದರವಾಗಿ ಸಿಕ್ಸರ್‌ಗೆ ಅಟ್ಟಿದರು. ಅಲ್ಲಿಗೆ ರಾಜಸ್ಥಾನ ‘ಗೆದ್ದ’ ಪಂದ್ಯವನ್ನು ಯಾರೂ ನಿರೀಕ್ಷಿಸದ ರೀತಿಯಲ್ಲಿ ಹೈದರಾಬಾದ್‌ ತನ್ನದಾಗಿಸಿಕೊಂಡಿತು.

‌

ಅಂತಿಮ ಎಸೆತ ನೋಬಾಲ್‌ ಅಲ್ಲದೆ ಒಂದು ರನೌಟ್‌ ಅವಕಾಶ ಮತ್ತು ಎರಡು ಸುಲಭ ಕ್ಯಾಚ್‌ (ಮೆಕಾಯ್‌ ಮತ್ತು ಸಂಜು ಸ್ಯಾಮ್ಸನ್‌) ಅವಕಾಶಗಳನ್ನು ಕೈಚೆಲ್ಲಿದ್ದು ರಾಜಸ್ಥಾನ ಪಾಲಿಗೆ ಮುಳುವಾಯಿತು.

ಅಂತಿಮ ಎರಡು ಓವರ್‌ಗಳಲ್ಲಿ 43 ರನ್‌!

18 ಓವರ್‌ಗಳ ಮುಕ್ತಾಯಕ್ಕೆ ಹೈದರಾಬಾದ್‌ ತಂಡ 5 ವಿಕೆಟ್‌ ನಷ್ಟದಲ್ಲಿ 174 ರನ್‌ಗಳಿಸಿತ್ತು. ಇನ್ನುಳಿದ ಕೊನೆಯ 12 ಎಸೆತಗಳಲ್ಲಿ 41 ರನ್‌ಗಳಿಸಬೇಕಾದ ಕಠಿಣ ಗುರಿ ಎಸ್‌ಆರ್‌ಎಚ್‌ ಮುಂದಿತ್ತು. ಆದರೆ 19ನೇ ಓವರ್‌ ಎಸೆದ ಕುಲ್ದಿಪ್‌ ಯಾದವ್‌ ಅವರ ಮೊದಲ ಮೂರು ಎಸೆತಗಳನ್ನು ಫಿಲಿಪ್ಸ್‌ ಹ್ಯಾಟ್ರಿಕ್‌ ಸಿಕ್ಸರ್‌ಗೆ ಟ್ಟಿದರು. ನಂತರದ ಎಸೆತದಲ್ಲಿ ಬೌಂಡರಿಯೂ ದಾಖಲಾಯಿತು. ಹೀಗಾಗಿ ಕೊನೆಯ ಓವರ್‌ನಲ್ಲಿ ಗೆಲುವಿನ ಗುರಿ 17 ಆಗಿತ್ತು.  

ಇದಕ್ಕೂ ಮೊದಲು ತವರು ಅಭಿಮಾನಿಗಳೆದುರು ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಆರ್‌ಆರ್‌ ತಂಡ ಆರಂಭಿಕ ಜಾಸ್‌ ಬಟ್ಲರ್‌ 95 ರನ್‌ (59 ಎಸೆತ 4×10, 6×4) ಮತ್ತು ನಾಯಕ ಸಂಜು ಸ್ಯಾಮ್ಸನ್‌ ಗಳಿಸಿದ ಬಿರುಸಿನ ಅರ್ಧಶತಕಗಳ (66 ರನ್‌, 38 ಎಸೆತ, 4×4, 6×5) ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟದಲ್ಲಿ 214 ರನ್‌ ಗಳಿಸಿತ್ತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತಕ್ಕೆ ಚಿನ್ನ ತಂದ ಮಹಿಳೆಯರು: ಏಷ್ಯನ್‌ ಗೇಮ್ಸ್‌ನಲ್ಲಿ ಮಹಿಳಾ ಕ್ರಿಕೆಟ್‌ ಕಲಿಗಳ ಸಾಧನೆ

ಜಪಾನ್‌ನ ಐಚಿ–ನಾಗೋಯಾದಲ್ಲಿ ನಡೆಯುತ್ತಿರುವ 2026ನೇ ಸಾಲಿನ ಪ್ರತಿಷ್ಠಿತ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ...

ಏಷ್ಯನ್ ಗೇಮ್ಸ್: ಸ್ಕೀಟ್ ಶೂಟಿಂಗ್, ಸಾಫ್ಟ್ ಟೆನಿಸ್‌ನಲ್ಲಿ ಭಾರತಕ್ಕೆ ಕಂಚು; ಪದಕದತ್ತ ಮೀರಾಬಾಯಿ ದಾಪುಗಾಲು

ಜಪಾನ್‌ನ ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನ ನಾಲ್ಕನೇ ದಿನವಾದ ಬುಧವಾರ...

ಏಷ್ಯನ್ ಗೇಮ್ಸ್: ಶ್ರೀಲಂಕಾ ಮಣಿಸಿ ಸತತ ಎರಡನೇ ಬಾರಿಗೆ ಚಿನ್ನ ಗೆದ್ದ ಭಾರತದ ವನಿತೆಯರು

ಜಪಾನ್‌ನಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಕ್ರಿಕೆಟ್...

ಸೋತರೂ ಎಲ್ಲರ ಹೃದಯ ಗೆದ್ದ ಸುಚಿಕಾ: 700 ಗ್ರಾಂ ಹಿನ್ನಡೆಯಿಂದ ತಪ್ಪಿದ ಚಿನ್ನ

ಮಹಿಳೆಯರ ಸಾಂಪ್ರದಾಯಿಕ 60 ಕೆ.ಜಿ ವಿಭಾಗದ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ (ಎಂಎಂಎ)...