ಮೈಸೂರು ತಾಲೂಕಿನ ನಾಗವಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ‘ಹಸಿರು ದಳ ಮತ್ತು ಆಶ್ರಯ ಹಸ್ತ ಟ್ರಸ್ಟ್ ಸಹಯೋಗದೊಂದಿಗೆ ನೂತನವಾಗಿ ನಿರ್ಮಿಸಿರುವ ʼಸುಸ್ಥಿರ ಘನತ್ಯಾಜ್ಯ ನಿರ್ವಹಣಾ ಘಟಕʼವನ್ನು ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ ಉದ್ಘಾಟಿಸಿದರು.
ಜಿ ಟಿ ದೇವೇಗೌಡ ಮಾತನಾಡಿ, “ಗ್ರಾಮದ ಸ್ವಚ್ಛತೆ ಕಡೆಗೆ ಗಮನ ಕೊಡಬೇಕು. ಎಲ್ಲೆಂದರಲ್ಲಿ ಕಸ ಎಸೆಯುವುದು, ಸುರಿಯುವುದು ತಪ್ಪು. ಆದ್ದರಿಂದ ರೋಗರುಜಿನಗಳು ಹರಡುತ್ತವೆ. ಗ್ರಾಮದ ಸ್ವಚ್ಛತೆ ಹದಗೆಡುತ್ತದೆ. ಹಾಗಾಗಿ ಗ್ರಾಮಸ್ಥರು ಸುಸ್ಥಿರ ಘನತ್ಯಾಜ್ಯ ಘಟಕದ ಉಪಯೋಗ ಪಡೆದುಕೊಳ್ಳಬೇಕು” ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯತ್ ಸಿಇಒ ಕೆ ಎಂ ಗಾಯತ್ರಿ ಮಾತನಾಡಿ, “ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ತೆರೆಯಲಾಗಿದೆ. ಆದಷ್ಟು ಕಸ ವಿಂಗಡಿಸಿ ವಿಲೇವಾರಿ ಮಾಡಲು ಸಹಕರಿಸಬೇಕು. ಗ್ರಾಮ ಪಂಚಾಯಿತಿ ಕಸ ಸಂಗ್ರಹ ಕೂಡ ಆಯಾ ಸಮಯಕ್ಕೆ ನಿಯೋಜನೆ ಮಾಡಿ, ಸಂಗ್ರಹಿಸಿದ ಕಸವನ್ನು ತ್ಯಾಜ್ಯ ಘಟಕದ ನೆರವಿನಿಂದ ವಿಲೇವಾರಿ ಮಾಡಬೇಕು. ಗ್ರಾಮ ಪಂಚಾಯಿತಿಗಳೂ ಕೂಡಾ ಸ್ವಚ್ಛತೆಯ ಕಡೆಗೆ ಗಮನಕೊಟ್ಟು ಎಲ್ಲಿಯೂ ಕಸ ಸಂಗ್ರಹವಾಗದಂತೆ ನೋಡಿಕೊಳ್ಳಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಸುಧಾರಣಾ ಕ್ರಮ ಕೈಗೊಳ್ಳಿ; ಜಿಲ್ಲಾಧಿಕಾರಿ ಶಿಲ್ಪಾನಾಗ್
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಿ ಕೃಷ್ಣ, ನಾಗವಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಮಾಕ್ಷಮ್ಮ, ಮಾಜಿ ಅಧ್ಯಕ್ಷ ನರೇಂದ್ರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ ಡಿ ಮಾಯಪ್ಪ, ಆಶ್ರಯ ಹಸ್ತ ಟ್ರಸ್ಟ್‌ನ ಎನ್ ಕೆ ಶರ್ಮ, ಹಸಿರು ದಳ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ನಳಿನಿ ಶೇಖರ್, ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿ, ಎಸ್ಎಚ್ ಜಿ ಸದಸ್ಯರು ಸೇರಿದಂತೆ ಹಲವರು ಇದ್ದರು.