ಮಹಾಪುರುಷರ ಜಯಂತಿ ಆಚರಿಸುವುದರ ಜತೆಗೆ ಅವರು ಹೇಳಿದ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಈ ಉತ್ಸವ ಸಾರ್ಥಕವಾಗುತ್ತದೆ ಎಂದು ಇಂಡಿ ತಹಶೀಲ್ದಾರ್ ಬಿ ಎಸ್ ಕಡಕಬಾವಿ ಹೇಳಿದರು.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಭವನದಲ್ಲಿ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ರಾಮಾಯಣ ರಚನೆಕಾರ ವಾಲ್ಮೀಕಿ ಜಯಂತಿ ಆಚರಣೆಯನ್ನು ತುಂಬಾ ವಿಜೃಂಭಣೆಯಿಂದ ಆಚರಿಸುವುದರ ಜತೆಗೆ ವರ್ಷದಲ್ಲಿ 32 ಮಹಾಪುರುಷರ ಜಯಂತಿಗಳನ್ನು ನಮ್ಮ ಇಲಾಖೆ ಆಚರಿಸುತ್ತದೆ” ಎಂದರು.
ಉಪನ್ಯಾಸಕ ಸದಾನಂದ ಹಿರೇನಕೆರಿ ಮಾತನಾಡಿ, “ರಾಮಾಯಣದ ಕರ್ತೃ, ಆದಿಕವಿ, ಋಷಿಕವಿಯೂ ಆದ ವಾಲ್ಮೀಕಿ ಮಹರ್ಷಿಗಳು ಮಹಾಕಾವ್ಯ ಬರೆಯುವುದರ ಮೂಲಕ ಈ ನಾಡಿಗೆ ಅನನ್ಯ ಕೊಡುಗೆ ನೀಡಿದ್ದಾರೆ. ಇವರ ಜಯಂತಿ ಆಚರಿಸುವುದರ ಜತೆಗೆ ರಾಮಾಯಣದಲ್ಲಿರುವ ಮೌಲ್ಯಗಳನ್ನು ಇಂದಿನ ಜನಾಂಗ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ರಾಮಾಯಣ ಕಾವ್ಯ ಓದುವುದರಿಂದ ಜೀವನ ಬದಲಾವಣೆಯಾಗುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ʼವಚನ ದರ್ಶನʼ ಕೃತಿಯಿಂದ ವಚನ ಸಾಹಿತ್ಯ ನಿರ್ನಾಮಕ್ಕೆ ಯತ್ನ : ಆರ್.ಕೆ.ಹುಡಗಿ
ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇ ಶಕ ಉಮೇಶ್ ಲಮಾಣಿ, ಪುರಸಭೆ ಮುಖ್ಯಾಧಿಕಾರಿ ಮಾಂತೇಶ್ ಹಂಗರಗಿ, ವಾಲ್ಮೀಕಿ ಮಹಾಸಭಾದ ರಾಜ್ಯ ನಿರ್ದೇಶಕ ಸಂಜು ನಾಯ್ಕೋಡಿ, ಎಇಇ ಆರ್ ಎಸ್ ಮಡೆಗಾರ, ನಾಗಪ್ಪ ನಾಯಕೋಡಿ ಅರ್ಜುನ ನಾಯ್ಯೋಡಿ, ಉಪಾಧ್ಯಕ್ಷರಾದ ಮಾರುತಿ ಕೊಡತೆ, ಧನರಾಜ್ ಮುಜುಗೊಂಡ, ಪಿಎಸ್ಐ ಸಂಗಮೇಶ್ ನಾಯಕೋಡಿ, ಬಂಜಾರ ಸಮಾಜದ ಅಧ್ಯಕ್ಷ ಸಂಜು ಚವ್ಹಾಣ, ಡಿಎಸ್ಎಸ್ ಮುಖಂಡ ಬಾಬು ಗುಡುಮಿ, ಭೀಮರಾಯ ನಾಕ್ಕೋಡಿ, ಮಾದೇವ ವಾಲಿಕಾರ್, ಅಹಿರಸಂಗ ಗ್ರಾ ಪಂ ಅಧ್ಯಕ್ಷ ಹಸನ ಶೇಖ, ಭೀಮರಾಯ ಕಾ ನಾಲ್ನೋಡಿ, ಹನುಮಂತ ಹಿಪ್ಪರಗಿ, ಎಲ್ಲಪ್ಪ ಪೂಜಾರಿ, ಸತೀಶ್ ಹಿಪ್ಪರಗಿ, ಗಂಗೂ ಬೇಡರ, ಸಿದ್ದು ಬೇಡರ, ಸೈಬಣ್ಣ ನಾಲ್ನೋಡಿ, ರಾಜು ಬೇಡರ, ರಾಜು ನಾಯೊಡಿ, ಸಿದ್ದು ಲಚ್ಚಣ, ಶಿವಪ್ಪನ ನಾಯ ಕೋಡಿ, ಶಿವಪ್ಪ ನಾಯಕೋಡಿ, ಬಸವರಾಜ್ ಗೊಲಗೇರಿ, ಪ್ರಕಾಶ್ ಸಣ್ಣಮನಿ, ಲಕ್ಷ್ಮೀಬಾಯಿ ನಾಲ್ನೋಡಿ ಸೇರಿದಂರೆ ಮೊದಲಾದವರು ಕಾರ್ಯಕ್ರಮದಲ್ಲಿ ಇದ್ದರು.