ಹರಿಯಾಣ | ಒಳಮೀಸಲಾತಿ ತಕ್ಷಣದಿಂದ ಜಾರಿ, ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ವಿರೋಧ

Date:

– ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಬಿಜೆಪಿ ಸರ್ಕಾರ ನಿರ್ಧಾರ
– ದಲಿತವಿರೋಧಿ ಮಾತ್ರವಲ್ಲದೆ ಮೀಸಲಾತಿ ವಿರೋಧಿ ಕ್ರಮ: ಮಾಯಾವತಿ

ಹರಿಯಾಣದಲ್ಲಿ ಸತತ ಮೂರನೆಯ ಸಲ ಆಯ್ಕೆಯಾಗಿರುವ ಬಿಜೆಪಿ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ಜಾರಿಗೊಳಿಸಿದೆ.

- Advertisement -

ನಾಯಬ್ ಸಿಂಗ್ ಸೈನಿ ನೇತೃತ್ವದ ರಾಜ್ಯ ಸರ್ಕಾರ ಶುಕ್ರವಾರ ಜರುಗಿದ ತನ್ನ ಮೊಟ್ಟಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಈ ನಿರ್ಧಾರ ತೆಗೆದುಕೊಂಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಒಳಮೀಸಲಾತಿಯನ್ನು ಜಾರಿಗೊಳಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗಿದೆ ಎಂದು ಸುಪ್ರೀಮ್ ಕೋರ್ಟು ಕಳೆದ ಆಗಸ್ಟ್ ಒಂದರಂದು ತೀರ್ಪು ನೀಡಿತ್ತು. ಪರಿಶಿಷ್ಟ ಜಾತಿಗಳಲ್ಲಿ ಹಿಂದುಳಿದಿರುವ ಮತ್ತು ಪ್ರಾತಿನಿಧ್ಯದ ಕೊರತೆ ಎದುರಿಸಿರುವ ಜಾತಿಗಳಿಗೆ ಮೀಸಲಾತಿಯ ನ್ಯಾಯ ದೊರೆಯಬೇಕೆಂಬುದು ತೀರ್ಪಿನ ಆಶಯವಾಗಿತ್ತು.

“ಸುಪ್ರೀಮ್ ಕೋರ್ಟಿನ ಆದೇಶವನ್ನು ನಮ್ಮ ಸರ್ಕಾರ ಗೌರವಿಸಿದೆ. ಆದೇಶವನ್ನು ಇಂದಿನಿಂದಲೇ ಜಾರಿಗೊಳಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ” ಎಂದು ನಾಯಬ್ ಸಿಂಗ್ ಸೈನಿ ತಿಳಿಸಿದ್ದಾರೆ.

ಹರಿಯಾಣದ ಪರಿಶಿಷ್ಟ ಜಾತಿಗಳ ಪೈಕಿ ಅತಿ ಹಿಂದುಳಿದಿರುವ ವಾಲ್ಮೀಕಿಗಳು, ಬಾಜೀಗಾರರು, ಸಾನ್ಸಿಗಳು, ದೇಹಾಸ್, ಧಾನುಕ್ ಹಾಗೂ ಸಪೇರಾ (ಹಾವಾಡಿಗರು) ಮುಂತಾದ 36 ಜಾತಿಗಳು ಈ ಒಳಮೀಸಲಾತಿ ಕ್ರಮದ ಲಾಭ ಪಡೆಯಲಿವೆ.

ಹರಿಯಾಣದ ಜನಸಂಖ್ಯೆಯಲ್ಲಿ ಪರಿಶಿಷ್ಟ ಜಾತಿಗಳ ಜನರ ಪ್ರಮಾಣ ಸುಮಾರು ಶೇ.20ರಷ್ಟು. ಈ ಪೈಕಿ ಶೇ.11ರಷ್ಟು ಮಂದಿ ಈ 36 ಜಾತಿಗಳಿಗೆ ಸೇರಿದವರಾಗಿದ್ದಾರೆ.

ಮೊದಲಿನಿಂದಲೂ ಮೀಸಲಾತಿಯ ಲಾಭವನ್ನು ಹೆಚ್ಚು ಹೆಚ್ಚು ಪಡೆದು ಪರಿಶಿಷ್ಟರಲ್ಲಿಯೇ ಮುಂದುವರೆದ ಒಳಪಂಗಡ ಎಂದು ಜಾಟವರು ಅಥವಾ ಚಮ್ಮಾರರನ್ನು ಪರಿಗಣಿಸಲಾಗಿದೆ. ಜಾಟವರು ಹೆಚ್ಚು ಕಡಿಮೆ ಕಾಂಗ್ರೆಸ್ ಬೆಂಬಲಿಗರು. ನಡುವೆ ಮಾಯಾವತಿಯವರ ಬಿ.ಎಸ್.ಪಿ.ಯತ್ತ ಆಕರ್ಷಿತರಾಗಿದ್ದರು. ಆನಂತರ ಬಹುತೇಕರು ಪುನಃ ಕಾಂಗ್ರೆಸ್ ಪಕ್ಷಕ್ಕೆ ಒಲಿದಿದ್ದಾರೆ. ಹೀಗಾಗಿ ಬಿಜೆಪಿ ಜಾಟವೇತರ ಪರಿಶಿಷ್ಟರನ್ನು ತನ್ನ ಪರವಾಗಿ ಸಂಘಟಿಸುತ್ತಲೇ ಬಂದಿದೆ.

ಮೊನ್ನೆ ಜರುಗಿದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಈ ಸಂಘಟನೆ ಸೋರಿ ಹೋಗದಂತೆ ಮತ್ತಷ್ಟು ಭದ್ರಪಡಿಸಿಕೊಂಡಿತ್ತು. ಸುಪ್ರೀಮ್ ಕೋರ್ಟ್ ಆದೇಶದಂತೆ ಒಳಮೀಸಲಾತಿಯನ್ನು ಜಾರಿಗೆ ತರುವುದಾಗಿ ಆಶ್ವಾಸನೆ ನೀಡಿತ್ತು. ಮಾಯಾವತಿ ಮತ್ತು ಚಂದ್ರಶೇಖರ ಆಜಾದ್ ರಾವಣ ಅವರು ಜಾಟವ ಅಥವಾ ಚಮ್ಮಾರ ಜಾತಿಗೆ ಸೇರಿದವರು. ಉತ್ತರಪ್ರದೇಶ, ಹರಿಯಾಣ, ಪಂಜಾಬ್ ರಾಜ್ಯಗಳ ದಲಿತರ ಪೈಕಿ ಜಾಟವರ ಜನಸಂಖ್ಯೆ ದೊಡ್ಡದು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಂಶಯ ಪರಿಹರಿಸಿ, ನ್ಯಾಯಾಂಗದ ಘನತೆ ಎತ್ತಿ ಹಿಡಿದ ನ್ಯಾಯಮೂರ್ತಿ

ಮಾಯಾವತಿ ಮತ್ತು ಚಂದ್ರಶೇಖರ್ ಆಜಾದ್ ಅವರು ಸುಪ್ರೀಮ್ ಕೋರ್ಟಿನ ಒಳಮೀಸಲಾತಿ ತೀರ್ಪನ್ನು ವಿರೋಧಿಸಿದ್ದಾರೆ. ದಲಿತರನ್ನು ಒಡೆಯುವ ಕುತಂತ್ರ ಎಂದು ಪ್ರತಿಭಟಿಸಿದ್ದಾರೆ.

ಹರಿಯಾಣದಲ್ಲಿ ‘ದಲಿತ್ ಎ ಮಹಾಪಂಚಾಯತ್’ ಎಂಬ ಸಂಘಟನೆಯು ಕಳೆದ ಹಲವಾರು ವರ್ಷಗಳಿಂದ ಒಳಮೀಸಲಾತಿಗಾಗಿ ಆಗ್ರಹಿಸಿ ಹೋರಾಟ ನಡೆಸಿದೆ. ದೇವಿದಾಸ್ ವಾಲ್ಮೀಕಿ ಈ ಸಂಘಟನೆಯ ಮುಖ್ಯಸ್ಥರು. ಸಾಕಷ್ಟು ತಡವಾಗಿಯಾದರೂ ಕೈಗೊಂಡಿರುವ ಹರಿಯಾಣ ಸರ್ಕಾರದ ಒಳಮೀಸಲಾತಿ ಜಾರಿ ನಿರ್ಧಾರ ಸ್ವಾಗತಾರ್ಹ. 2009 ಮತ್ತು 2014ರ ವಿಧಾನಸಭಾ ಚುನಾವಣೆಗಳಲ್ಲಿಯೂ ಬಿಜೆಪಿ ಒಳಮೀಸಲಾತಿ ಜಾರಿಗೆ ತರುವ ಆಶ್ವಾಸನೆ ನೀಡಿತ್ತು. ಹೀಗಾಗಿ ಈ ಮೊದಲೇ ಜಾರಿಗೆ ಬರಬೇಕಿದ್ದ ಕ್ರಮವಿದು. ಕಳೆದ ಸೆಪ್ಟಂಬರ್‍‌ನಲ್ಲಿ ಜೀಂದ್‌ನಲ್ಲಿ ಜರುಗಿದ ದಲಿತ್ ಎ ಮಹಾಪಂಚಾಯತ್‌ನಲ್ಲಿ ಬಿಜೆಪಿಯನ್ನು ಬೆಂಬಲಿಸಲು ತೀರ್ಮಾನಿಸಲಾಗಿತ್ತು. ಈ ತೀರ್ಮಾನ ಬಿಜೆಪಿಯ ವಿಜಯಕ್ಕೆ ನೆರವಾಗಿದೆ ಎಂದು ವಾಲ್ಮೀಕಿ ಹೇಳಿದ್ದಾರೆ.

ಹರಿಯಾಣದಲ್ಲಿ ಪರಿಶಿಷ್ಟರ ಪ್ರಮಾಣ ಶೇ.20ರಷ್ಟಿದ್ದರೂ, ಹರಿಯಾಣ ರಾಜ್ಯ ರಚನೆಯಾದಾಗಿನಿಂದ (1966) ಇಂದಿನ ತನಕ ಹಿಂದುಳಿದ ಪರಿಶಿಷ್ಟ ಜಾತಿಗಳಿಗೆ ಸೇರಿದ ಒಬ್ಬ ಅಭ್ಯರ್ಥಿಯೂ ಲೋಕಸಭೆಗೆ ಆಯ್ಕೆಯಾಗಿಲ್ಲ. 2024ರ ಲೋಕಸಭಾ ಚುನಾವಣೆಯಲ್ಲಿ ಕೂಡ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಎರಡು ಮೀಸಲು ಕ್ಷೇತ್ರಗಳಿಂದ ಜಾಟವ (ಚಮ್ಮಾರರು) ಅಭ್ಯರ್ಥಿಗಳನ್ನೇ ಹೂಡಿದ್ದವು. ಈ ಎರಡೂ ಸೀಟುಗಳನ್ನು ಕಾಂಗ್ರೆಸ್ ಗೆದ್ದುಕೊಂಡಿತು.

ಈ ಅನ್ಯಾಯವನ್ನು ಸರಿಪಡಿಸಲು ಈ ಸಲ ಬಿಜೆಪಿಯು ಜಾಟವೇತರ ಪರಿಶಿಷ್ಟ ಜಾತಿಗಳಿಗೆ ಸೇರಿದ ಅಭ್ಯರ್ಥಿಯನ್ನು ರಾಜ್ಯಸಭೆಗೆ ಆರಿಸಿ ಕಳಿಸಬೇಕು ಎಂದು ವಾಲ್ಮೀಕಿ ಆಗ್ರಹಪಡಿಸಿದ್ದಾರೆ.

ಮಾಯಾವತಿ ವಿರೋಧ

ಹರಿಯಾಣ ಸರ್ಕಾರದ ಒಳಮೀಸಲಾತಿ ಜಾರಿ ಕ್ರಮವನ್ನು ಬಿ.ಎಸ್.ಪಿ. ಮುಖ್ಯಸ್ಥೆ ಕುಮಾರಿ ಮಾಯಾವತಿ ಅವರು ಖಂಡಿಸಿದ್ದಾರೆ. ದಲಿತರನ್ನು ಪರಸ್ಪರ ವಿರುದ್ಧ ಹೋರಾಡಿಸುವ ಷಡ್ಯಂತ್ರವಿದು. ದಲಿತವಿರೋಧಿ ಮಾತ್ರವಲ್ಲದೆ ಮೀಸಲಾತಿ ವಿರೋಧಿ ಕ್ರಮ. ಹರಿಯಾಣ ಬಿಜೆಪಿ ಸರ್ಕಾರದ ಈ ಕ್ರಮವನ್ನು ಬಿಜೆಪಿಯ ಕೇಂದ್ರ ನೇತೃತ್ವ ತಡೆಯಬೇಕಾಗಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಮೀಸಲಾತಿಯನ್ನು ನಿಷ್ಕ್ರಿಯಗೊಳಿಸಿ ಸಮಾಪ್ತಗೊಳಿಸುವ ಕುತಂತ್ರ ಹೂಡಿವೆ. ಈ ಹುನ್ನಾರವನ್ನು ಬಿ.ಎಸ್.ಪಿ. ಘೋರವಾಗಿ ನಿಂದಿಸುತ್ತದೆ. ಪರಿಶಿಷ್ಟ ಜಾತಿ-ಪಂಗಡಗಳು ಮತ್ತು ಹಿಂದುಳಿದ ವರ್ಗಗಳನ್ನು ಒಡೆದು ಆಳುವುದು ಮೀಸಲಾತಿ ವಿರೋಧಿ ಷಡ್ಯಂತ್ರ. ಈ ಮಸಲತ್ತಿನ ವಿರುದ್ಧದ ಹೋರಾಟದ ಹೆಸರೇ ಬಿ.ಎಸ್.ಪಿ. ಈ ವರ್ಗಗಳನ್ನು ಸಂಘಟಿಸಿ ಆಳುವ ವರ್ಗಗಳನ್ನಾಗಿಸುವ ನಮ್ಮ ಸಂಘರ್ಷ ನಿರಂತರ ಜಾರಿಯಲ್ಲಿರುತ್ತದೆ ಎಂದು ಮಾಯಾವತಿ ಅವರು ಹೇಳಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಾಲಾ ಸಮಸ್ಯೆಗಳ ಕುರಿತು ಗ್ರಾಮ ಸಭೆಯಲ್ಲಿ ಧ್ವನಿ ಎತ್ತಿದ ವಿದ್ಯಾರ್ಥಿಗಳು; ಅಧಿಕಾರಿಗಳ ಮೆಚ್ಚುಗೆ-ಭರವಸೆ

ಸರ್ಕಾರಿ ಶಾಲಾ ವಿದ್ಯಾರ್ಥಿಗಳು ‘ವಿಶೇಷ ಗ್ರಾಮ ಸಭೆ’ಗಳಲ್ಲಿ ಪಾಲ್ಗೊಂಡು, ಪಂಚಾಯತ್ ಪ್ರತಿನಿಧಿಗಳು...

ಉತ್ತರಾಖಂಡ SIR ಅಂತಿಮ ಮತದಾರರ ಪಟ್ಟಿ ಪ್ರಕಟ: ಆದರೆ ಮುಗಿದಿಲ್ಲ ನೋಂದಣಿ ಪ್ರಕ್ರಿಯೆ

ಉತ್ತರಾಖಂಡ ರಾಜ್ಯದಲ್ಲಿ ನಡೆದ 'ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ' (ಎಸ್‌ಐಆರ್)...

ವಾಹನ ದಟ್ಟಣೆಯ ಸುಳಿಯಲ್ಲಿ ಮನಾಲಿ; ಪ್ರವಾಸೋದ್ಯಮದ ಒತ್ತಡಕ್ಕೆ ನಲುಗುತ್ತಿವೆಯೇ ಬೆಟ್ಟಗಳು?

ಮುಂಗಾರು ಮಳೆ ಕಡಿಮೆಯಾಗುತ್ತಿದ್ದಂತೆ ಹಿಮಾಚಲ ಪ್ರದೇಶದ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಆಗಮನ...