ವಿಧಾನ ಪರಿಷತ್ ಬಿಜೆಪಿ ಸದಸ್ಯ ಸುನಿಲ್ ವಲ್ಯಾಪುರೆ ಅವರ ಕುಟುಂಬದ ವಿರುದ್ಧ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ, ಅವರ ಮನೆಯ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪರಿಶೀಲನೆ ನಡೆಸಿದ್ದಾರೆ.
ಬಿಜೆಪಿ ಸರ್ಕಾರವಿದ್ದ ಸಮಯದಲ್ಲಿ, 2022ರಲ್ಲಿ ಭೋವಿ ನಿಗಮದ 12 ಕೋಟಿ ರೂ. ಹಣವನ್ನು ಸುನಿಲ್ ವಲ್ಯಾಪುರೆ ಅವರ ಪುತ್ರ ವಿನಯ್ ವಲ್ಯಾಪುರ ಅವರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಅರೋಪ ಕೇಳಿಬಂದಿದೆ.
ಚಿಂಚೋಳಿಯಲ್ಲಿ ಸೋಲಾರ್ ಪ್ಲಾಂಟ್ ಸ್ಥಾಪಿಸುವುದಾಗಿ ದಾಖಲೆಗಳನ್ನು ನೀಡಿ, ಯಾವುದೇ ಕೆಲಸ ಮಾಡದೇ ಮಗನ ಮೂಲಕ ಹಣ ಲೂಟಿ ಮಾಡಿದ್ದಾರೆ. ಫಲಾನುಭವಿಗಳ ಹೆಸರಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿ 12 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಸಿಐಡಿ ಪ್ರಕರಣ ದಾಖಲಿಸಿಕೊಂಡಿದೆ. ತನಿಖೆ ನಡೆಸುತ್ತಿದೆ.
ಪ್ರಕರಣ ಸಂಬಂಧ ಸುನಿಲ್ ವಲ್ಯಾಪುರೆ ನಿವಾಸ ಮೇಲೆ ದಾಳಿ ನೆಡಸಲು ನ್ಯಾಯಾಲಯದಿಂದ ಸಿಐಡಿ ತಂಡ ಸರ್ಚ್ ಮಾರೆಂಟ್ ಪಡೆದುಕೊಂಡಿದ್ದು, ಕಲಬುರಗಿಯ ಸಂತೋಷ ಕಾಲೊನಿಯಲ್ಲಿರುವ ವಾಲ್ಲ್ಯಾಪುರ ಅವರ ಮನೆ ಮೇಲೆ ದಾಳಿ ಡನೆಸಿದೆ. ಕಡತಗಳ ಶೋಧ ನಡೆಸಿದೆ.