ಮಹಿಳೆಯೋರ್ವರ ಮೇಲಿನ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿ 20ಕ್ಕೂ ಹೆಚ್ಚು ದಿನಗಳ ನಂತರ ಜಾಮೀನಿನ ಮೇಲೆ ಹೊರ ಬಂದಿರುವ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ವಿರುದ್ಧ ಇದೀಗ ಕಮಿಷನರ್ಗೆ ಬಿಜೆಪಿಯ ಮಾಜಿ ಎಂಎಲ್ಸಿ ಓರ್ವರು ದೂರು ನೀಡಿದ್ದಾರೆ.
2018ರ ಚುನಾವಣೆ ವೇಳೆ ನಕಲಿ ವೋಟರ್ ಐಡಿ ಸೃಷ್ಟಿಸಿದ್ದ ಆರೋಪ ಪ್ರಕರಣ ಸಂಬಂಧ ಮಾಜಿ ಎಂಎಲ್ಸಿ ತುಳಸಿ ಮುನಿರಾಜು ಎಂಬುವವರು ಮುನಿರತ್ನ ವಿರುದ್ಧ ದೂರನ್ನು ಕೊಟ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಗೋಪಾಲ್ ಜೋಶಿ ಪ್ರಕರಣ ಮತ್ತು ಮಾರಿಕೊಂಡ ಮಾಧ್ಯಮಗಳು
ನಕಲಿ ವೋಟರ್ ಐಡಿ ಸೃಷ್ಟಿ ಆರೋಪದಡಿ ಜಾಲಹಳ್ಳಿ ಠಾಣೆಯಲ್ಲಿ ಮುನಿರತ್ನ ವಿರುದ್ಧ ಪ್ರಕರಣ ದಾಖಲಾಗಿತ್ತು. ಈವರೆಗೆ ಆ ಪ್ರಕರಣ ತನಿಖೆ ಸಮರ್ಪಕವಾಗಿ ಆಗಿಲ್ಲ. ಹೈಕೋರ್ಟ್ ಸೂಚನೆ ಇದ್ದರೂ ಸೂಕ್ತ ರೀತಿಯಲ್ಲಿ ತನಿಖೆ ನಡೆದಿಲ್ಲ. ತನಿಖೆಗೆ ಅಧಿಕಾರಿ ನೇಮಿಸಲು ನ್ಯಾಯಾಲಯ ಆದೇಶವೂ ಮಾಡಿತ್ತು. ನಾನು ಪ್ರತ್ಯಕ್ಷ ಸಾಕ್ಷಿ ಇದ್ದೇನೆ ಎಂದರೂ ತನಿಖೆ ಮಾಡಲಿಲ್ಲ. ಈ ವಿಚಾರಕ್ಕೆ 6 ವರ್ಷಗಳಿಂದ ನಾನು ಹೋರಾಟ ಮಾಡುತ್ತಲೇ ಇದ್ದೇನೆ. ಸಾಕ್ಷಿಗಳಿಗೆ ಬೆದರಿಸಿ ಕೇಸ್ ವಾಪಸ್ ತೆಗೆಸಿದ್ದಾರೆ ಎಂದು ಆರೋಪಿಸಿ ಕಮಿಷನರ್, ಡಿಜಿ, ಐಜಿಪಿಗೆ ತುಳಸಿ ಮುನಿರಾಜು ಅವರು ದೂರನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.
