ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನಲ್ಲಿ ಭಾರತದ ವಿರುದ್ಧ ನ್ಯೂಜಿಲೆಂಡ್ 8 ವಿಕೆಟ್‌ಗಳ ಅಂತರದ ಗೆಲುವು ದಾಖಲಿಸಿದೆ. ಈ ಜಯದ ಮೂಲದ ಕಿವೀಸ್ ತಂಡ 1988ರ ರ ನಂತರ ಮೊದಲ ಬಾರಿಗೆ ಭಾರತದಲ್ಲಿ ಗೆದ್ದಿದೆ. 1988ರ ನಂತರ ನ್ಯೂಜಿಲೆಂಡ್ ತಂಡ ಭಾರತದಲ್ಲಿ ಯಾವುದೇ ಟೆಸ್ಟ್‌ನಲ್ಲಿ ಗೆಲುವು ಗಳಿಸಿರಲಿಲ್ಲ.
ಕೊನೆಯ ಹಾಗೂ ಐದನೇ ದಿನವಾದ ಇಂದು ಟೀಂ ಇಂಡಿಯಾ ನೀಡಿದ್ದ 107 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಕಿವೀಸ್ ಪಡೆ ತನ್ನ 2ನೇ ಇನಿಂಗ್ಸ್‌ನಲ್ಲಿ 27.4 ಓವರ್‌ಗಳಲ್ಲಿ 2 ವಿಕೆಟ್‌ಗಳನ್ನು ಕಳೆದುಕೊಂಡು ಸುಲಭವಾಗಿ ಜಯಗಳಿಸಿತು. ವಿಲ್ ಯಂಗ್ ಅಜೇಯ (48) ಹಾಗೂ ರಚಿನ್ ರವೀಂದ್ರ ಅಜೇಯ (39) ರನ್ ಗಳಿಸಿ ನ್ಯೂಜಿಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಮೂಲಕ ಕಿವೀಸ್ ಪಡೆ ಮೂರು ಟೆಸ್ಟ್‌ಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.
ಈ ಸುದ್ದಿ ಓದಿದ್ದೀರಾ? ತೆಲಂಗಾಣ ಡಿಎಸ್‌ಪಿ ಆಗಿ ಅಧಿಕಾರ ವಹಿಸಿಕೊಂಡ ಕ್ರಿಕೆಟಿಗ ಮೊಹಮ್ಮದ್ ಸಿರಾಜ್
ಭಾರತ ತಂಡದವರು ಮೊದಲ ಇನಿಂಗ್ಸ್‌ನಲ್ಲಿ ಕಳೆಪೆ ಪ್ರದರ್ಶನ ನೀಡಿ 46 ರನ್‌ಗಳಿಗೆ ಆಲೌಟ್ ಆಗಿದ್ದರು. ಇದಕ್ಕೆ ಉತ್ತರವಾಗಿ ನ್ಯೂಜಿಲೆಂಡ್ ತಂಡ ರಚಿನ್ ರವಿಂದ್ರ ಶತಕ, ಡೇವಿಡ್ ಕಾನ್ವೆ ಹಾಗೂ ಟಿಮ್ ಸೌಥಿ ಅವರ ಆಕರ್ಷಕ ಅರ್ಧ ಶತಕಗಳ ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ 402 ರನ್ ಪೇರಿಸಿ 356 ರನ್‌ಗಳ ಬೃಹತ್ ಮುನ್ನಡೆ ಪಡೆದಿದ್ದರು.
ಎರಡನೇ ಇನಿಂಗ್ಸ್ ಆಡಿದ್ದ ಭಾರತ ತಂಡ ಸರ್ಫರಾಜ್ ಖಾನ್ ಭರ್ಜರಿ ಶತಕ,ರಿಷಬ್ ಪಂತ್, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಅರ್ಧ ಶತಕಗಳು ದಾಖಲಿಸಿದ ಪರಿಣಾಮ 462 ರನ್ ಬಾರಿಸಿ ಪ್ರವಾಸಿ ನ್ಯೂಜಿಲೆಂಡ್ ತಂಡಕ್ಕೆ 107 ರನ್ ಗುರಿ ನೀಡಿದ್ದರು.
ಸಾಧಾರಣ ಗುರಿಯಾದ ಕಾರಣ ನ್ಯೂಜಿಲೆಂಡ್ ತಂಡ ಸುಲಭವಾಗಿ ಗೆಲುವು ಪಡೆದಿದೆ. ಟೀಂ ಇಂಡಿಯಾ ಪರ ಜಸ್‌ಪ್ರೀತ್ ಬುಮ್ರಾ 2 ವಿಕೆಟ್ ಪಡೆದರು.
