ಕರ್ನಾಟಕದಲ್ಲಿ ಯಾವ ರಾಜಕೀಯ ಪಕ್ಷ ತನ್ನ ಹಿಡಿತ ಸಾಧಿಸಲಿದೆ ಎಂಬ ಫಲಿತಾಂಶ ಕೆಲವೇ ಗಂಟೆಗಳಲ್ಲಿ ಹೊರಬೀಳಲಿದೆ. ಹಿನ್ನೆಡೆ ಮುನ್ನೆಡೆಯ ಭೀತಿ ರಾಜಕೀಯ ನಾಯಕರಲ್ಲಿ ಹೆಚ್ಚಾಗಿದೆ. ಈ ಮಧ್ಯೆ ಮನೆಯಲ್ಲಿ ಸಾವಿನ ಕಹಿ ಘಟನೆ ಮತ್ತು ದುಃಖದ ವಾತವರಣವಿದ್ದರೂ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ಮತ ಎಣಿಕೆಗೆ ಹಾಜರಾಗಿದ್ದಾರೆ.
ಮತ ಎಣಿಕೆ ಮತ್ತು ರಾಜ್ಯ ವಿಧಾನಸಭಾ ಚುನಾವಣೆ ಮುಖ್ಯವಾದ ಕಾರಣ ಯಾದಗಿರಿ ಜಿಲ್ಲೆಯ ಸುರಪುರದ ಕಾಂಗ್ರೆಸ್ ಅಭ್ಯರ್ಥಿ ಮತ್ತು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಸಹೋದರನ ಮಗನ ಮೃತದೇಹ ಮನೆಯಲ್ಲಿದ್ದರೂ ಮತ ಎಣಿಕೆ ಕೇಂದ್ರದಲ್ಲಿ ಹಾಜರಾಗಿದ್ದಾರೆ.
ರಾಜಾ ವೆಂಕಟಪ್ಪ ನಾಯಕ ಅವರ ಸಹೋದರನ ಮಗ ರೂಪ್ ಕುಮಾರ್ ನಾಯಕ ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಸಂಜೆ ಮೃತಪಟ್ಟಿದ್ದರು. ಸುರಪುರದಲ್ಲಿ ಶನಿವಾರ ಸಂಜೆ ಅಂತ್ಯಕ್ರಿಯೆ ನಡೆಯಲಿದೆ.
ಮೇ10 ರಂದು ಮತದಾನ ಪೂರ್ಣಗೊಂಡು, ಎರಡು ದಿನ ವಿಶ್ರಾಂತಿಯ ದಿನವಾದ ನಂತರ, ಶನಿವಾರ ರಾಜ್ಯದೆಲ್ಲೆಡೆ ಯಾರು ಗೆಲುವು ಸಾಧಿಸುತ್ತಾರೆ ಎಂಬುದಕ್ಕೆ ಪೂರಕವಾಗಿ ಹಲವು ಸುತ್ತಿನ ಮತ ಎಣಿಕೆ ನಡೆಯುತ್ತಿದೆ. ಯಾವ ರಾಜಕೀಯ ನಾಯಕರಿಗೆ ಮುನ್ನೆಡೆ, ಹಿನ್ನೆಡೆಯಾಗಲಿದೆ ಎಂಬ ಫಲಿತಾಂಶ ಇಂದು ನಿರ್ಣಯದ ಕುತೂಹಲ ಮತ್ತು ಭೀತಿ ರಾಜಕೀಯ ನಾಯಕರಲ್ಲಿ ಹೆಚ್ಚಾಗಿದೆ. ನಾಯಕರಿಗೆ ಮತದಾನ ಎಣಿಕೆ ಅತಿ ಮುಖ್ಯವಾದ ದಿನ. ಸದ್ಯ ಮತ ಎಣಿಕೆ ಆರಂಭಗೊಂಡಿದ್ದು, ರಾಜಾ ವೆಂಕಟಪ್ಪ ನಾಯಕ್ ಮುನ್ನಡೆ ಕಾಯ್ದು ಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ?: ನೀಲಿ ಶಾಲು ಕಳಚಿಟ್ಟ ಎನ್ ಮಹೇಶ್‌ಗೆ ಸೋಲಿನ ಭೀತಿ