ಕಳೆದ ವಾರ ಸುರಿದ ಮಳೆಯಿಂದಾಗಿ ಶಿವಮೊಗ್ಗದ ನಾನಾ ಬಡಾವಣೆಗಳು ಜಲಾವೃತಗೊಂಡಿವೆ. ಈ ಸಮಸ್ಯೆ ಹಲವು ವರ್ಷಗಳಿಂದ ಪುನರಾವರ್ತನೆಯಾಗುತ್ತಿದೆ. ಕ್ರಮ ಕೈಗೊಳ್ಳುವಂತೆ ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರಿಗೆ ಮನವಿ ಮಾಡಿದರೂ, ಅಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ಧೋರಣೆ ತಳೆದಿದ್ದಾರೆ. ಅವರೂ ಸೇರಿದಂತೆ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎಸ್‌ಡಿಪಿಐ ಆಗ್ರಹಿಸಿದೆ.
ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಎಸ್‌ಡಿಪಿಐ ಶಿವಮೊಗ್ಗ ಜಿಲ್ಲಾಧ್ಯಕ್ಷ ಇಮ್ರಾನ್, “ಪಾಲಿಕೆಯ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳ ಬೇಜವ್ಧಾರಿತನಿಂದ 1 ಅಡಿ ಉದ್ದದ ಅವೈಜ್ಞಾನಿಕ ಒಳಚರಂಡಿಯು ನೀರಿನ ವಾಟವಿಲ್ಲದೆ ನೀರು ಸರಾಗವಾಗಿ ಹರಿಯದೆ ಸಮಸ್ಯೆ ತಂದೊಡ್ಡಿದೆ” ಎಂದು ಹೇಳಿದ್ದಾರೆ.
“ರಾಜಕಾಲುವೆಗಳು ಅವೈಜ್ಞಾನಿಕವಾಗಿ ನಿರ್ಮಾಣವಾಗಿದ್ದು, ಸ್ವಚ್ಚತೆಯೂ ಇಲ್ಲದೆ ಮಣ್ಣು ಮತ್ತು ಕಸದಿಂದ ಮುಚ್ಚಿ ಹೋಗಿವೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಶಿವಮೊಗ್ಗದ ನಾಗರಿಕರು ಕೋಟ್ಯಂತರ ಮೌಲ್ಯದ ಆಸ್ತಿ ಕಳೆದುಕೊಂಡು ನಷ್ಟ ಅನುಭವಿಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ. ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಸ್ಮಾರ್ಟ್ ಸಿಟಿ ಮಾಡುತ್ತೇವೆ ಎಂದು ದರಿದ್ರ ಸಿಟಿ ಮಾಡಿದ್ದಾರೆ, ಹಿಂದೆ ಇದ್ದದ್ದೇ ಚೆನ್ನಾಗಿತ್ತು ಯಾಕೇ ಬೇಕಿತ್ತು. ಕೆಲವು ಕಡೇ ಮಾಡಿದ್ದಾರೆ ಕೆಲವು ಕಡೇ ಮಾಡಿಲ್ಲ. ಮಾಡಿದ ಜಾಗದಲ್ಲಿ ಒಂದೇ ವರುಷದಲ್ಲಿ ಅಗೆದು ಗುಡ್ಡೆ, ರಾಶಿ ಹಾಕಿದ್ದಾರೆ ಕೇಳಿದರೆ ಸರಿಯಾದ ಉತ್ತರವಿಲ್ಲ, ಹಣ ಮಾಡುವ ವಿಧಾನ ಯಾರ ಅಪ್ಪನ ಹಣವೆಂದು ಖರ್ಚು ಮಾಡಿದರು ಸರಿಯಾದ ರಸ್ತೆ, ಚರಂಡಿ ಯಿಲ್ಲದೆ ನಮ್ಮ ಶಿವಮೊಗ್ಗ ಅನಾಥವಾಗಿದೆ ಇಲ್ಲಿ ನೆಲೆಸುವವರಿಗೆ ದಾರಿಕಾಣಾದಾಗಿದೆ ಇವರಿಗೆ ಏನು ಮಾಡಬೇಕು ಯಾವುದರಲ್ಲಿ ಹೊಡೆಯಬೇಕು