ಧಾರವಾಡ ಸಂಪಿಗೆ ನಗರದ ಬಳಿ ಲಾರಿಯೊಂದು ಆಟೋ ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ಆಟೋರಿಕ್ಷಾ ನುಚ್ಚುನೂರಾಗಿ ಅದರಲ್ಲಿದ್ದ ಮಗು ಸೇರಿ ಮೂವರು ಸಾವಿಗೀಡಾಗಿದ್ದಾರೆ. ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೆಲಗೇರಿ ಗ್ರಾಮದ ಹಿರಿಯ ಮುಖಂಡ ರುದ್ರಗೌಡ ಪಾಟೀಲ್ ಮತ್ತು ಮಹಾನಗರ ಪಾಲಿಕೆಯ ಸದಸ್ಯ ಮಂಜುನಾಥ ಸುದ್ದಿಗಾರರೊಂದಿಗೆ ಮಾತನಾಡಿ, ಇಲ್ಲಿ ಸಂಚರಿಸುವ ಭಾರಿ ಬಸ್ ಮತ್ತು ಲಾರಿ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿದರು. ಕೆಲಗೇರಿ ಗ್ರಾಮಸ್ಥರು ಎರಡು ಗಂಟೆಗಳ ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಇದನ್ನು ಓದಿದ್ದೀರಾ? ಧಾರವಾಡ | ಭಾರೀ ಮಳೆಗೆ ಕೊಚ್ಚಿಹೋದ ಸೇತುವೆ; ಎಚ್ಚರಗೊಳ್ಳುವರೇ ಜನಪ್ರತಿನಿಧಿಗಳು?
ಈ ಸಂದರ್ಭದಲ್ಲಿ ಪೊಲೀಸರು ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.