ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಹೆಚ್ಚಿನ ಮಕ್ಕಳನ್ನು ಹೊಂದುವಂತೆ ಸಲಹೆ ನೀಡಿದ ಬಳಿಕ ಈಗ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಕೂಡಾ ಅದೇ ಸಲಹೆಯನ್ನು ತಮಿಳುನಾಡಿನ ಜನರಿಗೆ ನೀಡಿದ್ದಾರೆ.
ದಕ್ಷಿಣ ಭಾರತದಲ್ಲಿ ವೃದ್ಧರ ಸಂಖ್ಯೆ ಹೆಚ್ಚಾಗುತ್ತಿದ್ದು, ಫಲವತ್ತತೆ ದರ ಕಡಿಮೆಯಾಗುತ್ತಿದೆ. ಆದ್ದರಿಂದ ಹೆಚ್ಚು ಮಕ್ಕಳನ್ನು ಹೆರುವಂತೆ ಆಂಧ್ರಪ್ರದೇಶ ಸಿಎಂ, ತಮಿಳುನಾಡು ಸಿಎಂ ಸಲಹೆ ನೀಡಿದ್ದಾರೆ.
“ತಮಿಳಿನಲ್ಲಿ ಹಳೆಯ ಗಾದೆ ಇದೆ. ಜನರು 16 ವಿವಿಧ ರೀತಿಯ ಸಂಪತ್ತನ್ನು ಹೊಂದಿರಬೇಕು ಎಂಬುದು ಹಳೆಯ ಗಾದೆಯಾಗಿದೆ. ಆದರೆ ಇಂದು, ಕಡಿಮೆ ಮಕ್ಕಳನ್ನು ಹೊಂದುವಂತೆ ನಮ್ಮನ್ನು ಏಕೆ ನಿರ್ಬಂಧಿಸಬೇಕು? ನಾವು 16 ಮಕ್ಕಳ ಗುರಿಯನ್ನು ಯಾಕೆ ಹೊಂದಬಾರು” ಎಂದು ಸ್ಟಾಲಿನ್ ಅವರು ಚೆನ್ನೈನಲ್ಲಿ ಮಾನವ ಸಂಪನ್ಮೂಲ ಮತ್ತು ಸಿಇ ಇಲಾಖೆಯು ಆಯೋಜಿಸಿದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದನ್ನು ಓದಿದ್ದೀರಾ? ಪುತ್ರ ಉದಯನಿಧಿಯನ್ನು ತಮಿಳುನಾಡು ಡಿಸಿಎಂ ಆಗಿ ನೇಮಿಸಿದ ಎಂಕೆ ಸ್ಟಾಲಿನ್
ವೃದ್ದರ ಜನಸಂಖ್ಯೆ ಅಧಿಕವಾಗಿರುವ ಕಾರಣ ಹೆಚ್ಚಿನ ಮಕ್ಕಳನ್ನು ಹೊಂದಿರುವ ಕುಟುಂಬಗಳನ್ನು ಪ್ರೋತ್ಸಾಹಿಸಲು ಆಂಧ್ರ ಪ್ರದೇಶ ಸರ್ಕಾರವು ಯೋಜಿಸುತ್ತಿದೆ ಎಂದು ನಾಯ್ಡು ಈ ಹಿಂದೆ ಹೇಳಿದ್ದರು. ದಕ್ಷಿಣ ಭಾರತದ ರಾಜ್ಯಗಳ ಜನರು ಹೆಚ್ಚಿನ ಮಕ್ಕಳನ್ನು ಹೊಂದುವಂತೆ ಮನವಿ ಮಾಡಿದ್ದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರಗಳನ್ನು ಮರುಹೊಂದಿಸಲು ಯೋಜಿಸುತ್ತಿದೆ ಎಂಬ ವರದಿಗಳ ನಂತರ ಇಬ್ಬರೂ ಮುಖ್ಯಮಂತ್ರಿಗಳ ಈ ಹೇಳಿಕೆಯನ್ನು ನೀಡಿದ್ದಾರೆ.
