ಬೀದರ್ ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನ ಹಲವೆಡೆ ಸೋಮವಾರ ಗುಡುಗು ಸಹಿತ ಬಿರುಸಿನ ಮಳೆಯಾಗಿದೆ.
ಬೀದರ್ ನಗರದಲ್ಲಿ ಮಧ್ಯಾಹ್ನ 3 ಗಂಟೆಗೆ ಆರಂಭಗೊಂಡ ಮಳೆ ಸಂಜೆ 5:30ರವರೆಗೆ ಸುರಿಯಿತು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಪ್ರಖರವಾದ ಬಿಸಿಲಿತ್ತು, ಮಧ್ಯಾಹ್ನ ದಟ್ಟ ಕಾರ್ಮೋಡ ಕವಿದು ಬಿರುಸಿನ ಮಳೆ ಆರಂಭಗೊಂಡಿತು.
ಬೀದರ್ ತಾಲೂಕಿನ ಕಮಠಾಣ, ಔರಾದ್ ತಾಲೂಕಿನ ಸಂತಪೂರ ಸೇರಿದಂತೆ ವಿವಿಧೆಡೆ ಜೋರು ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ಹೊಳೆಯಂತೆ ಹರಿಯಿತು.

ಮಳೆಯಿಂದಾಗಿ ವಾಹನ ಸವಾರರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಕೆಲ ಹೊತ್ತು ತೊಂದರೆ ಅನುಭವಿಸಿದರು. ಮಳೆಯಿಂದ ಹಿಂಗಾರು ಬಿತ್ತನೆಗೆ ಶುರು ಮಾಡಬೇಕಾದ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದರೆ, ಇನ್ನೂ ಕೆಲವೆಡೆ ಸೋಯಾ ರಾಶಿ ಮಾಡುತ್ತಿದ್ದ ರೈತರಿಗೆ ಅಡಚಣೆ ಉಂಟು ಮಾಡಿತು.