ಗುಜರಾತ್ | ನಕಲಿ ನ್ಯಾಯಾಲಯದ ನ್ಯಾಯಾಧೀಶನನ್ನು ಬಂಧಿಸಿದ ಪೊಲೀಸರು

Date:

Advertisements

ಗಾಂಧಿನಗರದಲ್ಲಿ ನಕಲಿ ಕೋರ್ಟ್ ಸ್ಥಾಪಿಸಿ, ನ್ಯಾಯಾಧೀಶನಂತೆ ನಟಿಸಿ ಹಲವು ನಕಲಿ ಆದೇಶಗಳನ್ನು ಹೊರಡಿಸಿದ್ದ ನಕಲಿ ನ್ಯಾಯಾಧೀಶನನ್ನು ಪೊಲೀಸರು ಬಂಧಿಸಿದ್ದಾರೆ.

ಮೋರಿಸ್ ಸ್ಯಾಮ್ಯುಯೆಲ್ ಎಂಬಾತ ಬಂಧಿತ ಆರೋಪಿ. ಈತ ನಕಲಿ ನ್ಯಾಯಾಲಯ ಸೃಷ್ಟಿಸಿ, 2019ರಲ್ಲಿ ಸರ್ಕಾರಿ ಭೂಮಿಗೆ ಸಂಬಂಧಿಸಿದ ಪ್ರಕರಣದಲ್ಲಿ ತನ್ನ ಕಕ್ಷಿದಾರನ ಪರವಾಗಿ ಪರವಾಗಿ ಆದೇಶವನ್ನು ನೀಡಿದ್ದಾನೆ. ಈ ನಕಲಿ ನ್ಯಾಯಾಲಯ ಕಳೆದ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಭೂ ವಿವಾದಕ್ಕೆ ಸಂಬಂಧಿಸಿ ಬಾಕಿ ಇರುವ ಪ್ರಕರಣದಲ್ಲಿ ಕೆಲವು ಜನರನ್ನು ಬಲೆಗೆ ಬೀಳಿಸುತ್ತಿದ್ದ ಪ್ರಕರಣವನ್ನು ನಿಭಾಯಿಸಲು ಕಕ್ಷಿದಾರರಿಂದ ನಿರ್ದಿಷ್ಟ ಮೊತ್ತವನ್ನು ಪಡೆಯುತ್ತಿದ್ದ ಸ್ಯಾಮ್ಯುಯೆಲ್ ಮೊದಲು ನ್ಯಾಯಾಲಯದಿಂದ ನೇಮಕಗೊಂಡ ಅಧಿಕೃತ ಮಧ್ಯಸ್ಥಗಾರನಾಗಿ ತನ್ನನ್ನು ತಾನು ಪರಿಚಯಿಸಿಕೊಳ್ಳುತ್ತಾನೆ.

Advertisements

ನ್ಯಾಯಾಲಯದಂತೆ ವಿನ್ಯಾಸಗೊಳಿಸಲಾದ ಗಾಂಧಿನಗರ ಮೂಲದ ತನ್ನ ಕಚೇರಿಗೆ ತನ್ನ ಕಕ್ಷಿದಾರರನ್ನು ಕರೆಸಿ ತನ್ನ ಕಕ್ಷಿದಾದಾರರಿಗೆ ಅನುಕೂಲವಾಗುವ ರೀತಿ ಆದೇಶವನ್ನು ನೀಡಿದ್ದಾನೆ. ಆತನ ಸಹಚರರು ನ್ಯಾಯಾಲಯದ ಸಿಬ್ಬಂದಿ ಅಥವಾ ವಕೀಲರಂತೆ ಕಲಾಪದಲ್ಲಿ ಭಾಗವಹಿಸುತ್ತಿದ್ದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ವ್ಯಕ್ತಿ, ಕುಟುಂಬ, ಜಾತಿ ಪ್ರತಿಷ್ಠೆಯ ಕಣ ಚನ್ನಪಟ್ಟಣ

2019ರಲ್ಲಿ ಸ್ಯಾಮ್ಯುಯಲ್ ನಕಲಿ ನ್ಯಾಯಾಲಯ ಸೃಷ್ಟಿಸಿ ತನ್ನ ಕಕ್ಷಿದಾರರ ಪರವಾಗಿ ಆದೇಶವನ್ನು ಹೊರಡಿಸಿದ್ದ ಈ ಪ್ರಕರಣವು ಜಿಲ್ಲಾಧಿಕಾರಿಗಳ ಅಧೀನದಲ್ಲಿರುವ ಸರ್ಕಾರಿ ಜಮೀನಿಗೆ ಸಂಬಂಧಿಸಿತ್ತು. ಪಾಲಿ ಪ್ರದೇಶದಲ್ಲಿನ ಈ ಜಮೀನನ್ನು ತನ್ನ ಕಕ್ಷಿದಾರನಿಗೆ ಆರೋಪಿ ನೀಡಿದ್ದ ಸ್ಯಾಮ್ಯುಯೆಲ್ ಸರಕಾರದಿಂದ ನೇಮಿತ ಅಧಿಕೃತ ಮಧ್ಯಸ್ಥಗಾರ” ಎಂದು ಹೇಳಿಕೊಂಡು ನ್ಯಾಯಾಲಯದ ಕಲಾಪ ಆರಂಭಿಸಿ ತನ್ನ ಕಕ್ಷಿದಾರನ ಪರವಾಗಿ ಆದೇಶವನ್ನು ಹೊರಡಿಸಿದ್ದಾನೆ.

ತನ್ನ ಆದೇಶವನ್ನು ಜಾರಿಗೆ ತರಲು ಸ್ಯಾಮ್ಯುಯಲ್ ಮತ್ತೋರ್ವ ವಕೀಲನ ಮೂಲಕ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದಾನೆ ಮತ್ತು ಆದೇಶದ ಪ್ರತಿಯನ್ನು ಈ ವೇಳೆ ಲಗತ್ತಿಸಿದ್ದಾನೆ. ಆದರೆ, ನ್ಯಾಯಾಲಯದ ರಿಜಿಸ್ಟ್ರಾರ್ ಹಾರ್ದಿಕ್ ದೇಸಾಯಿ ಅವರು ಇದು ನಕಲಿ ಆದೇಶ ಎಂದು ಪತ್ತೆ ಹಚ್ಚಿ ಕಾರಂಜ್ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಹಿಂದೆ ಗುಜರಾತ್‌ನ ಮಾರ್ಬಿ ಜಿಲ್ಲೆಯಲ್ಲಿರುವ ಅಸಲಿ ಟೋಲ್ ಪ್ಲಾಜಾವನ್ನು ತಪ್ಪಿಸಿ, ಅದು ವಿಧಿಸುವ ನೈಜ ರಸ್ತೆ ಸುಂಕಕಿಂತಲೂ ಕಡಿಮೆ ದರದ ಸುಂಕ ವಿಧಿಸಿ ಖಾಸಗಿ ರಸ್ತೆಯ ಮೂಲಕ ಸಂಚರಿಸಲು ನಕಲಿ ಟೋಲ್ ಪ್ಲಾಜಾ ಮೂಲಕ ಅವಕಾಶ ಮಾಡಿಕೊಡುತ್ತಿದ್ದ ಆರೋಪದಡಿ ಗುಜರಾತ್ ಪೊಲೀಸರು ಐವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ನಕಲಿ ಟೋಲ್ ಪ್ಲಾಜಾ ಮೂಲಕ ರೂ. 75 ಕೋಟಿಗೂ ಹೆಚ್ಚು ಮೊತ್ತವನ್ನು ವಾಹನಗಳಿಂದ ವಸೂಲಿ ಮಾಡಿರುವ ಈ ಪ್ರಕರಣವು ಸರ್ಕಾರವು ಮುಜುಗರಕ್ಕೀಡು ಮಾಡಿತ್ತು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X