ಬೆಳಗಾವಿ ಜಿಲ್ಲೆ ಚೆನ್ನಮ್ಮನ ಕಿತ್ತೂರು ವಿಜಯೋತ್ಸವದ 200ನೇ ವರ್ಷಾಚರಣೆಯ ಆಹ್ವಾನ ಪತ್ರಿಕೆಯಲ್ಲಿ ರಾಣಿ ಚೆನ್ನಮ್ಮನ ವಂಶಸ್ಥರ ಹೆಸರು ಕೈಬಿಟ್ಟು, ಸಂಬಂಧವೇ ಇಲ್ಲದ ಮಹಾರಾಷ್ಟ್ರ ಮೂಲದ ಉದ್ಯಮಿ, ಸ್ಟಾರ್ ಏರ್‌ಲೈನ್ಸ್ ಸಂಸ್ಥಾಪಕ ಸಂಜಯ ಘೋಡಾವತ್ ಹೆಸರು ಸೇರಿಸಿದ್ದು ವಿವಾದಕ್ಕೆ ಕಾರಣವಾಗಿದೆ.
ಅಕ್ಟೋಬರ 25ರಂದು ರಾತ್ರಿ 8ಕ್ಕೆ ನಡೆಯುವ ಉತ್ಸವದ ಸಮಾರೋಪ ಸಮಾರಂಭದಲ್ಲಿ ಸಂಜಯ ಘೋಡಾವತ್ ವಿಶೇಷ ಆಹ್ವಾನಿತರಾಗಿದ್ದು, ಅದೇ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ಪಾಲ್ಗೊಳ್ಳುತ್ತಿದ್ದಾರೆ.
‘ಉತ್ಸವದ ಆಹ್ವಾನ ಪತ್ರಿಕೆಯಲ್ಲಿ ನಮ್ಮ ಹೆಸರಿಲ್ಲ. ಸಂಬಂಧವೇ ಇಲ್ಲದವರ ಹೆಸರು ಸೇರಿಸಿದ್ದಾರೆ. ನಮಗೆ ಸೌಜನ್ಯಕ್ಕಾದರೂ ಆಹ್ವಾನ ಪತ್ರಿಕೆಯನ್ನು ನೀಡಿಲ್ಲ. ಚನ್ನಮ್ಮನ ಪರಿವಾರದವರಾದ ನಾವು ಈ ಉತ್ಸವ ಬಹಿಷ್ಕರಿಸುತ್ತೇವೆ’ ಎಂದು ಉದಯ ದೇಸಾಯಿ ಮಾದ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಬೆಳಗಾವಿ | ಕಿತ್ತೂರು ರಾಣಿ ಚೆನ್ನಮ್ಮ ವೀರಜ್ಯೋತಿಗೆ ವಿದ್ಯಾರ್ಥಿಗಳಿಂದ ಸ್ವಾಗತ
ಹೀಗೆ ಉತ್ಸವಕ್ಕೆ ಉದ್ಯಮಿಗಳಿಂದ ದೊಡ್ಡ ಮೊತ್ತದ ದೇಣಿಗೆ ಪಡೆದು ಹೆಸರು ಹಾಕಿದ್ದಾರೆ ಎಂಬ ಆರೋಪವು ಕೇಳಿ ಬರುತ್ತಿದ್ದು, ಉತ್ಸವದ ಆಹ್ವಾನ ಪತ್ರಿಕೆಯಲ್ಲಿ ‘ವಿವಿಧ ಸಾಧಕರಿಗೆ ಹಾಗೂ ಕಿತ್ತೂರು ಚನ್ನಮ್ಮನ ವಂಶಸ್ಥರಿಗೆ ಸನ್ಮಾನ’ ಎಂಬ ಸಾಲು ಬರೆಯಲಾಗಿದೆ. ಆದರೆ, ಚನ್ನಮ್ಮನ ವಂಶಸ್ಥರು ಅಥವಾ ಪರಿವಾರದವರ ಯಾರೊಬ್ಬರ ಹೆಸರನ್ನೂ ಪ್ರಕಟಿಸಿಲ್ಲ ಎಂದು ತಿಳಿದುಬಂದಿದೆ.