ನಿರಂತರ ಸುರಿದ ಮಳೆಯ ನೀರಿನ ರಭಸಕ್ಕೆ ತುಂಬಿ ಹರಿಯುತ್ತಿದ್ದ ಶಾಲ್ಮಲಾ ನದಿಗೆ ಕಾರೊಂದು ಕೊಚ್ಚಿ ಹೋಗಿದ್ದು, ಚಾಲಕ ಮರವೇರಿ ಕುಳಿತ ಘಟನೆ ಧಾರವಾಡದ ಕಲಘಟಗಿ ತಾಲೂಕಿನಲ್ಲಿ ನಡೆದಿದೆ. ನಂತರ ಅಗ್ನಿ ಶಾಮಕದಳ ಹಾಗೂ ಸಾರ್ವಜನಿಕರು ಕಾರು ಸಮೇತ ಚಾಲಕನನ್ನು ರಕ್ಷಸಿದ್ದಾರೆ.
ತಾಲೂಕಿನ ಹಿರೇಹೊನ್ನಳ್ಳಿ-ಬೇಗೂರು ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ನಾಗರಾಜ ದೇಮಣ್ಣವರ ಎಂಬಾತ ಬೇಗೂರು ಗ್ರಾಮಕ್ಕೆ ತೆರಳುತ್ತಿದ್ದ ಸಮಯದಲ್ಲಿ ನೀರಿನ ರಭಸಕ್ಕೆ ಕಾರು ಸಮೇತ ಕೊಚ್ಚಿ ಹೋಗುವಾಗ ಕಾರಿನಿಂದ ಹೊರಬಂದು ಮರವನ್ನು ಏರಿ ಕುಳಿತುಕೊಳ್ಳುತ್ತಾನೆ.
ಇದನ್ನು ಓದಿದ್ದೀರಾ? ಧಾರವಾಡ | ಗೌರಿ ಹಂತಕರಿಗೆ ಸನ್ಮಾನ: ಆರೋಪಿಗಳ ಬಂಧನಕ್ಕೆ ಒತ್ತಾಯ
ಈ ಕುರಿತು ಸ್ಥಳೀಯರು ಅಗ್ನಿ ಶಾಮಕದಳಕ್ಕೆ ಮಾಹಿತಿ ನೀಡಿದ ಮೇಲೆ, ಅಗ್ನಿ ಶಾಮಕದಳ ಯುವಕನ ರಕ್ಷಣೆ ಮಾಡಿದ್ದಾರೆ ಎಂದು ತಿಳಿದಿದೆ.