ಪ್ರಸ್ತುತ ದೇಶಾದ್ಯಂತ ಹೆಚ್ಚುತ್ತಿರುವ ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟಲು ಮತ್ತು ದಲಿತರ ಮೇಲಿನ ದೌರ್ಜನ್ಯಕ್ಕೆ ಶೀಘ್ರ ಇತ್ಯರ್ಥ ಕಂಡುಕೊಳ್ಳುವಂತಾಗಲು ಇಡೀ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ದಲಿತ ದೌರ್ಜನ್ಯ ಕೇಸಿಗೆ ವಿಶೇಷ ಪ್ರತ್ಯೇಕ ಪೋಲಿಸ್ ಠಾಣೆಗಳನ್ನು ತೆರೆಯಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಯವರ ಮುಖಾಂತರ ಮುಖ್ಯ ಮಂತ್ರಿ ಸಿದ್ದರಾಮಯ್ಯನವರಿಗೆ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ವತಿಯಿಂದ ಮನವಿಯನ್ನು ಸಲ್ಲಿಸಲಾಯಿತು.
ಅದರಂತೆ ಉಡುಪಿ ಜಿಲ್ಲೆಯಲ್ಲೂ ಅಪರ ಜಿಲ್ಲಾಧಿಕಾರಿಯವರಿಗೆ ದ.ಸಂ.ಸ.ಅಂಬೇಡ್ಕರ್ ವಾದದ ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ ಮಾಸ್ತರ್ ನೇತೃತ್ವದಲ್ಲಿ ದ.ಸಂ.ಸ. ನಿಯೋಗ ಮನವಿ ಸಲ್ಲಿಸಲಾಯಿತು.
ನಿಯೋಗದಲ್ಲಿ ದ.ಸಂ.ಸ.ಜಿಲ್ಲಾ ಮುಖಂಡರಾದ ಮಂಜುನಾಥ ಗಿಳಿಯಾರು, ಶ್ಯಾಮಸುಂದರ್ ತೆಕ್ಕಟ್ಟೆ, ಸುರೇಶ ಹಕ್ಲಾಡಿ, ಫ್ರೋಪೇಸರ್ ಫಣಿರಾಜ್, ಇದ್ರೀಸ್ ಹೂಡೆ, ಕುಮಾರ್ ಕೋಟಾ, ಕೀರ್ತಿ ಪಡುಬಿದ್ರಿ ಶಿವಾನಂದ ಮೂಡುಬೆಟ್ಟು, ಸುರೇಶ ಬಾರ್ಕೂರು, ವಿಠಲ ತೊಟ್ಟಂ, ಗೋಪಾಲಕೃಷ್ಣ ನಾಡ, ವಿಠಲ ಕೊಡಂಕೂರು ಉಪಸ್ಥಿತರಿದ್ದರು.
