ಸಾಧನೆಗೆ ಗುರಿ ಅತಿ ಮುಖ್ಯವಾಗುತ್ತದೆ, ಸಾಧನೆಯ ಸಮಯದಲ್ಲಿ ಸಮಸ್ಯೆ ಬರುವುದು ಸಹಜ. ಗುರಿಯು ಅಚಲವಾದರೆ ಅಸಾಧಾರಣ ಸಾಧನೆ ಸಾಧ್ಯ. ನಿಗದಿತ ಅವಧಿಯ ಪರಿಶ್ರಮವು ಶಾಶ್ವತವಾದ ಸಿಹಿಫಲ ನೀಡುವುದು. ಸಮಸ್ಯೆಗೆ ಕುಂದಿದರೆ ಸಾಧನೆ ಸಾಧ್ಯವಿಲ್ಲ ಎಂದು ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.
ನಗರದ ಅಂಜುಮನ್ ಕಲಾವಿಜ್ಞಾನ ಹಾಗೂ ಸ್ನಾತಕೋತ್ತರ ಮಹಾವಿದ್ಯಾಲಯ, ಮಹಿಳಾ ಸಬಲೀಕರಣ ಕೋಶ ಹಾಗೂ ಇತಿಹಾಸ ವಿಭಾಗ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ “ಕಿತ್ತೂರು ರಾಣಿ ಚನ್ನಮ್ಮ 19ನೇ ಶತಮಾನದ ಪೌರಾಣಿಕ ರಾಣಿ”, ಎಂಬ ವಿಚಾರ ಸಂಕೀರ್ಣದ ಅತಿಥಿಯಾಗಿ ಆಗಮಿಸಿದ ಜಿಲ್ಲಾಧಿಕಾರಿ ದಿವ್ಯ ಪ್ರಭು ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ, ಸ್ತ್ರೀಯರಿಗೆ ಮುಕ್ತ ಅವಕಾಶ ನೀಡಿದಾಗ ಪ್ರತಿಭೆ ಹೊರಬರಲು ಸಾಧ್ಯ. ಅದೇ ರೀತಿ ಮಾನಸಿಕ ಚಂಚಲತೆಯಿಂದ ಮುಕ್ತರಾಗಬೇಕು. ಹಾಗೂ ಮಹಿಳೆ ಸ್ವಯಂ ಅರಿವು ಬೆಳೆಸಿಕೊಳ್ಳುವುದು ಅತಿ ಮುಖ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಜುಮನ್ ಸಂಸ್ಥೆ ಉಪಾಧ್ಯಕ್ಷ ಬಶೀರ್ ಅಹಮದ್ ಜಾಗೀರದಾರ ರಾಣಿ ಚೆನ್ನಮ್ಮ ಸಾಧನೆಯನ್ನು ಪ್ರಶಂಶಿಸಿದರು. ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ. ಎಸ್. ಎ. ಸರ್ಗಿರೋ, ಖಜಾಂಚಿ ಮಹಮ್ಮದ್ ರಫಿಕ್ ಶಿರಹಟ್ಟಿ, ಪ್ರಾಚಾರ್ಯ ಡಾ. ಎನ್. ಎಂ ಮಕಾಂದಾರ್ ಹಾಗೂ ಐ. ಕ್ಯೂ. ಏ. ಸಿ ಸಂಯೋಜಕ ಡಾ. ಎನ್.ಬಿ ನಲತವಾಡ, ಪತ್ರಗಾರ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಾ.ಮಂಜುಳಾ ಎಲಿಗಾರ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಇದನ್ನು ಓದಿದ್ದೀರಾ? ಹೊಸ ಪುಸ್ತಕ | ಮಾನವೀಯತೆಯ ಉಳಿವಿಗೆ ಪ್ರತಿರೋಧದ ದನಿ ʼಸ್ವಾಭಿಮಾನದ ಗತ್ತಿನ್ಯಾಗʼ
ಕಾರ್ಯಕ್ರಮದಲ್ಲಿ ಬಿತ್ತಿ ಚಿತ್ರ ಸ್ಪರ್ಧೆ ಏರ್ಪಡಿಸಿದ್ದರು. ಪ್ರೊ. ಆಸ್ಮಾ ನದಾಫ್ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮವನ್ನು ರಾಣಿ ಚೆನ್ನಮ್ಮಳ ಕಿರು ನಾಟಕದ ಮೂಲಕ ಆರಂಭಿಸಿದರು. ಕುಮಾರಿ ಸ್ವಾಲೆಹ, ಕುರಾನ ಪಠಿಸಿದರು. ಕುಮಾರ್ ಪ್ರವೀಣ್ ಲಮಾಣಿ ಭಗವದ್ಗೀತೆಯ ಶ್ಲೋಕವನ್ನು ಪಠಿಸಿದರು. ಇಂಗ್ಲಿಷ್ ವಿಭಾಗದ ಡಾ. ಆಸ್ಮಾನಾಜ್ ಬಳ್ಳಾರಿ ಅತಿಥಿಗಳ ಪರಿಚಯಿಸಿ ಸ್ವಾಗತಿಸಿದರು. ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಸೈಯದ್ ತಾಜುನ್ನೀಸಾ ನಿರೂಪಿಸಿದರು. ಖೈರುದ್ದೀನ್ ಶೇಕ್, ಯಾಸಿನ ಹಾವೇರಿ ಪೇಟ್, ನಜೀರ್ ಬಲಬಟ್ಟಿ ಉಪಸ್ಥಿತರಿದ್ದರು.