ವಿಪಕ್ಷದ ರಾಜಕೀಯ ನಾಯಕರು ಹಗರಣಗಳ ನೆಪದಲ್ಲಿ ಏನೇ ಮಾಡಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕುಂದಿಸಲು ಸಾಧ್ಯವಿಲ್ಲ ಎಂದು ಹಾಸನ ಜಿಲ್ಲಾ ಘಟಕದ ಕಾಂಗ್ರೆಸ್ ಮುಖಂಡರು ಖಂಡನೆ ವ್ಯಕ್ತಪಡಿಸಿದ್ದಾರೆ.
ಹಾಸನ ಜಿಲ್ಲಾ ಕಾಂಗ್ರೆಸ್ ಘಟಕದ ಮುಖಂಡರ ನೇತೃತ್ವದಲ್ಲಿ ಪತ್ರಿಕಾ ಹೇಳಿಕೆ ನೀಡಿ, ಎಸ್‌ಸಿ ಘಟಕದ ಜಿಲ್ಲಾಧ್ಯಕ್ಷ ದೇವಪ್ಪ ಮಲ್ಲಿಗೇವಾಳು ಮಾತನಾಡಿ, “ರಾಜ್ಯದ ಸಿಎಂ ಸಿದ್ದರಾಮಯ್ಯನವರು ಎರಡು ಬಾರಿ ಮುಖ್ಯಮಂತ್ರಿಯಾಗಿ ಜನಪರ ಕೆಲಸ ಹಾಗೂ ಒಳ್ಳೆಯ ಆಡಳಿತವನ್ನು ಮಾಡುತ್ತಿದ್ದಾರೆ. ಬಿಜೆಪಿಯವರು ಒಬ್ಬ ಹಿಂದುಳಿದ ನಾಯಕ ಸಿಎಂ ಆಗಿದ್ದಾರೆಂದು ಸಹಿಸದೆ ಇಲ್ಲಸಲ್ಲದ ಆರೋಪ ಮಾಡಿ ರಾಜಿನಾಮೆ ಕೇಳುತ್ತಿದ್ದಾರೆ. ಐದು ಗ್ಯಾರಂಟಿಗಳನ್ನು ಜಾರಿಮಾಡಿ ಪ್ರತಿಯೊಂದು ಜಾತಿ ಜನಾಂಗವನ್ನು ಅಭಿವೃದ್ಧಿ ಮಾಡುತ್ತ 40 ವರ್ಷದ ರಾಜಕಾರಣದಲ್ಲಿ ಕಪ್ಪುಚುಕ್ಕೆ ಇಲ್ಲದಂತೆ ರಾಜಕಾರಣ ಮಾಡುತ್ತಿದ್ದಾರೆ” ಎಂದು ವಿರೋಧ ಪಕ್ಷದ ನಾಯಕರ ಮೇಲೆ ಕಿಡಿಕಾರಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಆರೋಗ್ಯ ರಕ್ಷಣೆಯ ನಾವೀನ್ಯತೆಗೆ ಅಂತರ ಶಿಕ್ಷಣ ವಿಧಾನ ಅತ್ಯಗತ್ಯ: ಡಾ ಅನಿಮೇಶ್ ಆಚಾರ್ಜಿ
ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವರ ಮೇಲೂ ಬೆಂಗಳೂರಿನ ಗಂಗೇನನಳ್ಳಿ, ಡಿನೋಟಿಫಿಕೇಷನ್ ಕೇಸ್ ಇದೆ. ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರ ಮೇಲೂ ಕೂಡ ಭೂಹಗರಣಗಳಿವೆ. ಆದರೂ ವಿರೋಧ ಪಕ್ಷದ ರಾಜಕಾರಣಿಗಳು ಸಿಎಂ ಯಾವಾಗ ರಾಜೀನಾಮೆ ಸಲ್ಲಿಸುವವರೆಂದು ಪ್ರಶ್ನಿಸುವುದು ಖಂಡನೀಯ” ಎಂದು ಜಿಲ್ಲಾ ವಕ್ತಾರ ರಾಮಚಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
