ವಿಜಯಪುರ | ಅಂಗಡಗೇರಿ ಗ್ರಾಮಕ್ಕೆ ನೀರಾವರಿ ಸೌಲಭ್ಯ ಒದಗಿಸಿ: ರೈತ ಸಂಘದ ಯುವ ಸಂಚಾಲಕ ಸಿದ್ದನಗೌಡ ರೆಡ್ಡಿ ಆಗ್ರಹ

Date:

Advertisements

ಸುಮಾರು ಹತ್ತು ಹನ್ನೆರಡು ವರ್ಷಗಳಿಂದ ಅಂಗಡಗೇರಿ ಗ್ರಾಮದ ರೈತರಿಗೆ ನೀರಾವರಿ ಭಾಗ್ಯ ಬರುತ್ತದೆ, ನಮ್ಮ ಬದುಕು ಕೂಡ ಹಸನಾಗುತ್ತದೆ ಎಂದು ಕಾಯ್ದುಕೊಂಡು ಕುಳಿತ ರೈತರಿಗೆ ನಿರಾಶೆ ಉಂಟಾಗಿದೆ. ಅಂಗಡಗೇರಿ ಗ್ರಾಮಕ್ಕೆ ನೀರಾವರಿ ಸೌಲಭ್ಯ ಒದಗಿಸಬೇಕು ಹಾಗೂ ಬಸವನ ಬಾಗೇವಾಡಿ, ನಿಡುಗುಂದಿಯನ್ನು ನೀರಾವರಿ ತಾಲೂಕನ್ನಾಗಿಸಬೇಕು ಎಂದು ವಿಜಯಪುರ ಜಿಲ್ಲೆಯ ರೈತ ಸಂಘದ ಯುವ ಸಂಚಾಲಕ ಸಿದ್ದನಗೌಡ ರೆಡ್ಡಿ ಆಗ್ರಹಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಇನ್ನೂ ದೊರೆಯದ ನೀರಾವರಿ ಭಾಗ್ಯ ಪಟ್ಟಣದಲ್ಲಿ ನಿರುದ್ಯೋಗವನ್ನು ಅನುಭವಿಸಿ ತಮ್ಮುರಿನತ್ತ ಬಂದು ವ್ಯವಸಾಯ ಕೃಷಿ ಮಾಡಬೇಕೆಂಬ ಹಂಬಲವಿರುವ ಅನೇಕ ಯುವಕರಲ್ಲಿ ನಮ್ಮೂರಿಗೆ ನೀರಾವರಿ ಭಾಗ್ಯ ಇಂದಲ್ಲ ನಾಳೆ ಲಭಿಸುವುದು ಎಂಬ ಆಶಾಭಾವನೆ ಇಟ್ಟುಕೊಂಡಿದ್ದರು. ಅದೆಲ್ಲವೂ ಹುಸಿಯಾಗಿದ್ದು, ರೈತ ಯುವಕರ ಆಕ್ರೋಶದ ಕಟ್ಟೆ ಒಡೆಯುತ್ತಿದೆ ಎಂದು ಹೇಳಿದರು.

ಜನಪ್ರತಿನಿಧಿಗಳ ಹಾಗೂ ಶಾಸಕರ ಮುತ್ತಿಗೆ ಹಾಕುವ ಕಾಲ ದೂರವಿಲ್ಲ ಎಂಬ ಭಾವನೆ ರೈತ ಹಾಗೂ ಯುವಕರಲ್ಲಿ ಮೂಡುತ್ತಿದೆ. ಸುತ್ತಮುತ್ತಲಿನ ಎಲ್ಲ ಗ್ರಾಮಗಳಿಗೂ ನೀರಾವರಿ ವ್ಯವಸ್ಥೆ ಆದರೂ ಕೂಡ ಅಂಗಡಗೇರಿ ಗ್ರಾಮದ ಪಾಲಿಗೆ ನೀರಾವರಿ ವ್ಯವಸ್ಥೆ ಇನ್ನೂ ಕನಸಾಗಿಯೇ ಉಳಿದಿದೆ ಎಂದು ಕಿಡಿಕಾರಿದ್ದಾರೆ.

Advertisements

ನಮ್ಮ ಭಾಗದ ಶಾಸಕರು ಅಂಗಡಗೇರಿ ಎಂಬ ಗ್ರಾಮ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನಲ್ಲಿ ಅಂಗಡಗೇರಿ ಗ್ರಾಮ ಇದೆ ಎಂಬುವುದನ್ನು ಇನ್ನೊಮ್ಮೆ ಮನವರಿಕೆ ಮಾಡುತ್ತಿದ್ದೇವೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ನೀರಾವರಿಯ ಭಾಗ್ಯ ಇದೆ. ತೆಲಗಿ, ಮಟ್ಟಿಹಾಳ,ಚೀರಲದಿನ್ನಿ, ಕೂಡಗಿ,ಮಸೂತಿ,ಮಲಘಾನ, ಸಿದ್ದನಾಥ ಹಣಮಾಪೂರ, ಕವಲಗಿ, ಅರಷಣಗಿ, ಗಣಿ, ಚೀಮ್ಮಲಗಿ, ವಂದಾಲ, ಈಗಾಗಲೇ ನೀರಾವರಿಯ ಭೂಮಿಗಳಾಗಿದ್ದು ಜಾಕ್ವೇಲ್ ಮುಖಾಂತರ ನೀರಾವರಿಯ ಸೌಲಭ್ಯವನ್ನು ಏಕೆ ಒದಗಿಸಲಾಗುತಿಲ್ಲ ಎಂದು ಪ್ರಶ್ನಿಸಿದ್ದಾರೆ.

ದನ್ನು ಓದಿದ್ದೀರಾ? ಉಡುಪಿ‌ | ಸರ್ವರ್ ಸಮಸ್ಯೆ: ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಪಡಿತರ ವಿತರಣೆಗೆ ಸೂಚನೆ

ಸುತ್ತಮುತ್ತಲಿನ ಎಲ್ಲಾ ಗ್ರಾಮಗಳಿಗೂ ನೀರಾವರಿಯಾದರೂ ಕೂಡಾ ನಮ್ಮೂರಿಗೆ ಇನ್ನೂ ನೀರಾವರಿಯ ಸೌಲಭ್ಯ ದೊರಕುತ್ತಿಲ್ಲ. ನೀರಾವರಿ ಆದರೆ ರೈತರ ಬಾಳು ಹಸನಾಗುವುದು ಎಂಬ ಆಶಾಭಾವನೆಯೊಂದಿಗೆ ರೈತರು ಇನ್ನೂ ಕಾಲಕಳೆಯುತ್ತಿದ್ದಾರೆ. ಇನ್ನೂ ಆದಷ್ಟು ಬೇಗ ಸರ್ಕಾರ ಮತ್ತು ಶಾಸಕರು ನಮ್ಮೂರಿನತ್ತ ಗಮನ ಹರಿಸಿ ರೈತರ ಗೊಳು ಆಲಿಸುವರೆಂದು ಅಂದುಕೊಂಡಿದ್ದೇವೆ. ಈ ತಾರತಮ್ಯವನ್ನು ಹೋಗಲಾಡಿಸಿ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಮಾಡುವುದನ್ನು ಬಿಟ್ಟು ಬಸವನ ಬಾಗೇವಾಡಿ ಹಾಗೂ ನಿಡುಗುಂದಿ ತಾಲೂಕು ಸಂಪೂರ್ಣ ನೀರಾವರಿ ಗ್ರಾಮಗಳನ್ನಾಗಿ ಮಾಡಬೇಕು ಎಂದು ಸಿದ್ದನಗೌಡ ರೆಡ್ಡಿ ಒತ್ತಾಯಿಸಿದ್ದಾರೆ.

ನೀರು ಪ್ರತಿಯೊಂದು ಗ್ರಾಮಕ್ಕೂ ಅತಿ ಅವಶ್ಯಕ. ಕೃಷಿ ಜನ ಜಾನುವಾರುಗಳಿಗೆ. ನೀರು ಒದಗಿಸಿ ಆದಷ್ಟು ಬೇಗ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಶೀಘ್ರದಲ್ಲಿ ಅಂಗಡಗೇರಿ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ನೀರಾವರಿಗೊಳಿಸಲು ಮತ್ತು ಅದಕ್ಕೆ ಬೇಕಾಗುವ ಎಲ್ಲಾ ತಯಾರಿಗಳನ್ನು ಶೀಘ್ರದಲ್ಲಿ ಮಾಡಬೇಕೆಂದುನಮ್ಮ ಕ್ಷೇತ್ರದ ರೈತರು ತಮ್ಮಲ್ಲಿ ಕಳಕಳಿಯಿಂದ ಕೇಳಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X