ಪುಂಡರ ಎರಡು ಗುಂಪುಗಳು ತಲವಾರ್ ಹಿಡಿದು, ಹೊಡೆದಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮ್ಮೆಮಾರ್‌ನಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಬ್ಬರು ಯುವಕರ ಮೇಲೆ 14 ಮಂದಿಯ ಗುಂಪು ತಲ್ವಾರ್‌ನಿಂದ ಹಲ್ಲೆ ಮಾಡಿದೆ. ಘಟನೆಯಲ್ಲಿ ತಸ್ಲೀಮ್ ಮತ್ತು ಮಹಮ್ಮದ್ ಶಾಕೀರ್ ಎಂಬ ಯುವಕರಿಗೆ ಗಂಭಿರ ಗಾಯಗಳಾಗಿವೆ. ಹಳೆ ದ್ವೇಷದಿಂದ ಅವರ ಮೇಲೆ ದಾಳಿ ನಡೆದಿದೆ ಎಂದು ವರದಿಯಾಗಿದೆ.
ಯುವಕರ ಮೇಲೆ ಮನ್ಸೂರ್ ಎಂಬಾತ ತಂಡ ದಾಳಿ ಮಾಡಿದೆ. ತಸ್ಲೀಮ್‌ಗೆ ಕರೆ ಮಾಡಿದ್ದ ಮನ್ಸೂರ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲದೆ, ಅಮ್ಮೆಮಾರ್ ಶಾಲೆ ಬಳಿಗೆ ಬರುವಂತೆ ಸವಾಲು ಹಾಕಿದ್ದಾನೆ. ಆತನ ನಿಂದನೆಯಿಂದ ಕುಪಿತಗೊಂಡ ತಸ್ಲೀಮ್ ತನ್ನ ಸ್ನೇಹಿತನೊಂದಿಗೆ ಶಾಲೆ ಬಳಿಗೆ ಹೋಗಿದ್ದಾರೆ. ಈ ವೇಳೆ, ಅವರ ಮನ್ಸೂರ್‌ನ ತಂಡ ಮೇಲೆ ದಾಳಿ ಮಾಡಿದೆ.
ದಾಳಿ ಮಾಡಿರುವ ಆರೋಪಿಗಳನ್ನು ಮನ್ಸೂರ್, ಪಲ್ಟಿ ಇಮ್ರಾನ್, ಮುಸ್ತಾಕ ಯಾನೆ ಮಿಚ್ಚ, ಸರ್ಪುದ್ದೀನ್, ಅಶ್ರಫ್, ರಿಜ್ವಾನ್, ಸಫ್ವಾನ್, ಅದ್ನಾನ್, ನಿಸಾಕ್, ಯಾಸೀರ್, ಸುಹೈಲ್, ಜಾಹೀದ್, ಸಾದಿಕ್, ಲತೀಫ್ ಎಂದು ಗುರುತಿಸಲಾಗಿದೆ. ಅವರೆಲ್ಲರ ವಿಉರುದ್ಧ ಪ್ರಕರಣ ದಾಖಲಾಗಿದೆ.