ಪೋಲಿಯೊ ನಿರ್ಮೂಲನೆಗಾಗಿ ಲಸಿಕೆ ಬಗ್ಗೆ ಪ್ರಾಮುಖ್ಯತೆ ತಿಳಿಸಲು ಹಾಸನ ನಗರದ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಆವರಣದಿಂದ ಹೇಮಾವತಿ ಪ್ರತಿಮೆವರೆಗೂ ಜಾಗೃತಿ ಅಭಿಯಾನ ಕೈಗೊಳ್ಳಲಾಯಿತು. ಈ ಮಧ್ಯೆ ₹30 ಕೋಟಿ ದುಬಾರಿ ಬೆಲೆ ಬಾಳುವ ಪಾಂಡಾ ಶ್ವಾನವನ್ನು(ಪಾಂಡಾ ಡಾಗ್) ಪ್ರದರ್ಶಿಸಲಾಯಿತು.
ರೋಟರಿ ಕ್ಲಬ್‌ನ ಅಧ್ಯಕ್ಷರಾದ ಬಿ.ವಿ ವಿಜಯ್ ರವರು ಮಾತನಾಡಿ, ಪೋಲಿಯೊ ಎಂಬುದು ಒಂದು ಮಾರಣಾಂತಿಕ ಕಾಯಿಲೆಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ರೋಟರಿ ಸಂಸ್ಥೆ ಸರ್ಕಾರದ ಜೊತೆ ಸೇರಿಕೊಂಡು ಇದರ ನಿರ್ಮೂಲನೆಗೆ ಕೆಲಸ ಮಾಡುತ್ತಿದೆ. ಸಾರ್ವಜನಿಕರು ನವಂಬರ್ ತಿಂಗಳಲ್ಲಿ ನಡೆಯುವ ಪೋಲಿಯೊ ಲಸಿಕೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಅಭಿಯಾನದಲ್ಲಿ ಹಾಸನ, ಮಲ್ನಾಡ್ ಇಂಜಿನಿಯರಿಂಗ್ ಕಾಲೇಜ್, ರೋಟರಿ ಕ್ಲಬ್ ಆಫ್ ಹಾಸನ ಹೊಯ್ಸಳ ರೋಟರಿ ಕ್ಲಬ್ ಆಫ್ ಚನ್ನರಾಯಪಟ್ಟಣ ವಿಷನ್, ಮತ್ತು ರಾಯಲ್ ಅಪೋಲ್ಲೋ ಇಂಟರ್‌ನ್ಯಾಶನಲ್ ಶಾಲೆಯ ಇಂಟರಾಕ್ಟ್ ಕ್ಲಬ್‌ನಿಂದ ಪೋಲಿಯೊ ಜಾಗೃತಿ ಅಭಿಯಾನವು ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಯಶಸ್ವಿಯಾಯಿತು. ಅದರಲ್ಲೂ ಅಪರೂಪದ ದುಬಾರಿಯಾಗಿ ಬೆಲೆ ಬಾಳುವ ಪಾಂಡಾ ಡಾಗ್ ಎಲ್ಲರನ್ನೂ ಆಕರ್ಷಿಸಿತು.
ಈ ಸುದ್ದಿ ಓದಿದ್ದೀರಾ:ಚಿಕ್ಕಮಗಳೂರು | ಮೂಲಸೌಕರ್ಯವನ್ನೇ ಕಾಣದ ಸಂಸೆ ಗ್ರಾಮ; ಅಧಿಕಾರಿ, ಜನಪ್ರತಿನಿಧಿಗಳ ನಿರ್ಲಕ್ಷ್ಯ
ಅಭಿಯಾನದ ಜಾಥಾದಲ್ಲಿ ರಾಯಲ್ ಅಪೋಲೋ ಇಂಟರ್ ನ್ಯಾಷನಲ್ ಶಾಲೆಯ ಪ್ರಾಂಶುಪಾಲ ರವಿಕುಮಾರ್, ಅಸಿಸ್ಟೆಂಟ್ ಗವರ್ನರ್ ರೋಟರಿಯೇನ್ ಮೋಹನ್, ಸದಸ್ಯರಾದ ವಿಜಯಕುಮಾರ್, ಪ್ರಕಾಶ್, ಶಿವಕುಮಾರ್, ಬಾಲಾಜಿ, ಕಾರ್ಯದರ್ಶಿ ನಳಿನಿ ಇನ್ನಿತರರು ಭಾಗವಹಿಸಿದರು.