ಮಂಡ್ಯ ನಗರದ ನೂರಡಿ ರಸ್ತೆಯಲ್ಲಿದ್ದಂತಹ ಮರಗಳನ್ನು ಅವೈಜ್ಞಾನಿಕವಾಗಿ ಕತ್ತರಿಸಿರುವ ಅರಣ್ಯ ಇಲಾಖೆಯ ಅಧಿಕಾರಿಗಳ ನಡೆಗೆ ಪರಿಸರ ಪ್ರೇಮಿಗಳು ಆಕ್ರೋಶ ಹೊರಹಾಕಿದ್ದಾರೆ.
ಮಂಡ್ಯ ನಗರ ನೂರಡಿ ರಸ್ತೆಯಲ್ಲಿ ರಿಲಯನ್ಸ್ ಮಾರ್ಟ್‌ಗೆ ಅನುಕೂಲ ಮಾಡಿಕೊಡುವುದಕ್ಕಾಗಿ ನೆರಳು ಕೊಡುವ ಮರವನ್ನು ಹೀಗೆ ಅಮಾನವೀಯವಾಗಿ ಕತ್ತರಿಸಿದ್ದಾರೆಂದು ಸ್ಥಳೀಯರು ಹಾಗೂ ಪರಿಸರ ಪ್ರೇಮಿಗಳು ಆರೋಪಿಸಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಲ ನಡೆಯ ವಿರುದ್ಧ ಕಿಡಿಕಾರಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅರವಿಂದ ಪ್ರಭು, “ಮರಗಳನ್ನು ಮನಸೋ ಇಚ್ಛೆ ಕತ್ತರಿಸಿರುವ ಮಂಡ್ಯ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಈ ಬಾರಿಯ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ ಮಾಡುವಂತೆ ಜಿಲ್ಲಾಡಳಿತ ಮತ್ತು ಸರಕಾರವನ್ನು ನಾಡಿನ ಎಲ್ಲ ಪರಿಸರ ಪ್ರೇಮಿಗಳೂ ಒತ್ತಾಯಿಸಬೇಕಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಚಿತ್ರಕೂಟದ ಸಂಘಟಕರು, ಪರಿಸರವನ್ನು ಉಳಿಸುವ ಕೆಲಸಕ್ಕಾಗಿ ಹೋರಾಡುತ್ತೇವೆ ಮತ್ತು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇವೆ ಎಂದು ಈ ದಿನ.ಕಾಮ್‌ನೊಂದಿಗೆ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದರು.

“ಮರಕ್ಕೆ ಕೊಡಲಿ ಹಾಕಿದ ತಪ್ಪಿತಸ್ಥರು ದಂಡ ತೆರಲೇಬೇಕು. ಪರಿಸರ ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ” ಎಂದು ತಿಳಿಸಿದ್ದಾರೆ.
ಕನ್ನಡ ಹೋರಾಟಗಾರರಾದ ನಾಗಣ್ಣ ಎಂ ಬಿ ಮಾತನಾಡಿ, “ಈ ಮರಗಳ ಮಾರಣಹೋಮದ ಹಿಂದೆ ಮಾರ್ವಾಡಿಗಳಿದ್ದಾರೆ. ಜಾಗತಿಕವಾಗಿ ಸಾಹಿತ್ಯ ಸಮ್ಮೇಳನಕ್ಕೆ ಗಣ್ಯರನ್ನು ಆಹ್ವಾನಿಸಲಾಗುತ್ತಿದೆ. ಅರಣ್ಯ ಇಲಾಖೆ ಹಸಿರು ನಾಶ ಮಾಡಿ, ಬೋಳು ಮರಗಳ ಮಂಡ್ಯ ನಗರವನ್ನು ನಿರ್ಮಿಸಲು ಹೊರಟಿದೆ. ಎಲ್ಲಾ ಸಂಘಟನೆಯ ಗೆಳೆಯರು ಪರಿಸರವನ್ನು ಉಳಿಸುವ ಈ ಹೋರಾಟಕ್ಕಾಗಿ ದನಿ ಎತ್ತಬೇಕಿದೆ” ಎಂದರು.
ಅರಣ್ಯ ಇಲಾಖೆ ಹಸಿರು ನಾಶ ಮಾಡಿ ಬೋಳು ಮರಗಳ ಮಂಡ್ಯ ನಗರವನ್ನು ನಿರ್ಮಿಸಲು ಹೊರಟಿದೆ. ಈ ಬಗ್ಗೆ ಸಾರ್ವಜನಿಕರು, ಸಂಘಟಕರು ಪ್ರಶ್ನಿಸಲು ಹೋದರೆ ಗುತ್ತಿಗೆದಾರರು ಗುಂಪು ಬೆದರಿಕೆಯನ್ನು ಒಡ್ಡುತ್ತಿದ್ದಾರೆಂದು ಎಂದು ತಿಳಿದುಬಂದಿದೆ. ಮರಕ್ಕೆ ಕೊಡಲಿ ಹಾಕಿದ ತಪ್ಪಿಸ್ಥರು ದಂಡ ತೆರಲೇಬೇಕು. ಪರಿಸರ ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ಈ ಬಗ್ಗೆ ವಲಯ ಅರಣ್ಯಾಧಿಕಾರಿ ಶೈಲಜಾ ಅವರನ್ನು ಈ ದಿನ.ಕಾಮ್ ಸಂಪರ್ಕಿಸಿ, ‘ಈ ರೀತಿ ಮರಗಳನ್ನು ಅಡ್ಡಾದಿಡ್ಡಿಯಾಗಿ ಏಕೆ ಉರುಳಿಸಲಾಗಿದೆ’ ಎಂದು ಕೇಳಿದಾಗ, “ಅರಣ್ಯ ಇಲಾಖೆಯು ಫಾರೂಕ್ ಎನ್ನುವವರಿಗೆ ಟೆಂಡರ್ ನೀಡಲಾಗಿತ್ತು. ನಮ್ಮ ಸಿಬ್ಬಂದಿ ವರ್ಗ, ಮರ ಕಡಿಯುವ ಜಾಗಕ್ಕೆ ಹೋಗುವ ಮೊದಲೆ, ಗುತ್ತಿಗೆದಾರನಾದ ಫಾರೂಕ್ ಮರಗಳನ್ನು ಈ ರೀತಿ ಮರವನ್ನು ಕತ್ತರಿಸಿಟ್ಟಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಮತ್ತು ದಂಡವನ್ನು ವಿಧಿಸುತ್ತೇವೆ” ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ರಾಮನಗರ | ಹಣಕ್ಕೆ ಬೇಡಿಕೆಯಿಟ್ಟ ಆರೋಪ: ಹಾರೋಹಳ್ಳಿ ಪ. ಪಂ. ಮುಖ್ಯಾಧಿಕಾರಿ ಶ್ವೇತಾ ಅಮಾನತು
ಈ ಬಗ್ಗೆ ಜಿಲ್ಲಾಧಿಕಾರಿಗಳು, ಅರಣ್ಯಾಧಿಕಾರಿಗಳು ಸಮಗ್ರ ತನಿಖೆ ನಡೆಸಬೇಕು. ಗುತ್ತಿಗೆದಾರರು ನಿಯಮ ಉಲ್ಲಂಘನೆ ಮಾಡಿರುವುದರ ಬಗ್ಗೆ ವಿಚಾರಣೆ ನಡೆಸಬೇಕು. ಈ ಬಗ್ಗೆ ಯಾವ ಕ್ರಮ ಕೈಗೊಂಡಿದ್ದಾರೆಂದು ಸ್ಪಷ್ಟಿಕರಿಸಬೇಕೆಂದು ಪರಿಸರ ಪ್ರೇಮಿಗಳು, ಚಿತ್ರಕೂಟದ ಬಳಗದವರು ಒತ್ತಾಯಿಸಿದ್ದಾರೆ.

