ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್‌ಗೇಟ್ ನಿರ್ಮಿಸಲು ತಯಾರಿ ನಡೆಯುತ್ತಿದ್ದು, ಇದನ್ನು ವಿರೋಧಿಸಿ ಶಿವಮೊಗ್ಗ ಜಿಲ್ಲೆ ಆನಂದಪುರ ಹೋಬಳಿಯ ಗಿಳಾಲಗುಂಡಿ ವ್ಯಾಪ್ತಿಯ ಚೆನ್ನಕೊಪ್ಪ ಗ್ರಾಮದ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.
ಚೆನ್ನಕೊಪ್ಪ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ರೈತರು ಹಾಗೂ ಜನಸಾಮಾನ್ಯರು ಭೂಮಿ ಮತ್ತು ಮನೆಗಳ ನಿರ್ಮಿಸಿ, ಬದುಕನ್ನು ರೂಪಿಸಿಕೊಂಡಿದ್ದಾರೆ. ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದೇವೆ. ಕೃಷಿ ಭೂಮಿ ಬಿಟ್ಟರೆ ಬೇರೆ ಯಾವ ಭೂಮಿ ಇರುವುದಿಲ್ಲ ಎಂದು ಗ್ರಾಮಸ್ಥರು ತಮ್ಮ ನೋವು ತೋಡಿಕೊಂಡಿದ್ದಾರೆ.
ಈ ಟೋಲ್‌ಗೇಟ್ ನಿರ್ಮಾಣದಿಂದಾಗಿ ನಮ್ಮ ಬದುಕು ಅತಂತ್ರವಾಗುತ್ತದೆ. ಆದಷ್ಟು ಬೇಗ ಈ ಯೋಜನೆಯನ್ನು ರದ್ದುಗೊಳಿಸಿ ಟೋಲ್‌ಗೇಟ್ ಸ್ಥಳಾಂತರಿಸಿ ಬೇರೆಡೆ ನಿರ್ಮಿಸಿಕೊಳ್ಳಬೇಕು ಎಂದು ಚೆನ್ನಕೊಪ್ಪ ಗ್ರಾಮದ ಜನ ಆಚಾಪುರ ಗ್ರಾಮ ಪಂಚಾಯತಿ ಮೂಲಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದರು.
ಇದನ್ನೂ ಓದಿದ್ದೀರಾ?: ಕಡೂರು | ನಾಪತ್ತೆಯಾಗಿದ್ದ ಎರಡು ವರ್ಷದ ಮಗು ತರೀಕೆರೆಯಲ್ಲಿ ಪತ್ತೆ
ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಖಲೀಮುಲ್ಲಾ , ಸದಸ್ಯರಾದ ಪುಷ್ಪ, ಮತ್ತು ಪ್ರಕಾಶ್ ಮನವಿಯನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಚೆನ್ನಕೊಪ್ಪದ ಗ್ರಾಮಸ್ಥರಾದ ಶಿವಕುಮಾರ್, ನೇತ್ರಾವತಿ ರಮೇಶ್, ರವಿ, ಲೋಹಿತ, ಲಚಿಕೇತ , ಶೇಖರಪ್ಪ, ಸನಾವುಲ್ಲ ಹಾಗೂ ಸಾಗರ ತಾಲೂಕು ಮಾಜಿ ಪಂಚಾಯತ್ ಸದಸ್ಯರಾದ ಹನುಮಂತಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ: ಅಮಿತ್ ಆರ್, ಆನಂದಪುರ

ಟೋಲ್ ಹಾಕುವುದಾದರೆ ರೋಡ್ ಟ್ಯಾಕ್ಸ್ ಯಾಕೇ