ಕಳೆದ ವರ್ಷ ಬರಗಾಲ ಮತ್ತು ಈ ವರ್ಷ ಅತೀವೃಷ್ಠಿಯಿಂದ ರೈತರ ಸಂಪೂರ್ಣ ಬೆಳೆ ಹಾಳಾಗಿದ್ದು, ಸರ್ಕಾರ ಬೆಳೆನಷ್ಟ ಪರಿಹಾರವನ್ನು ಕೊಡಬೇಕು. ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ಸಾಲ ವಸೂಲಿಗೆ ಬರುವ ಅಧಿಕಾರಿಗಳನ್ನು ತಡೆಯಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಹೆಚ್ ಆರ್ ಬಸವರಾಜಪ್ಪ ಆಗ್ರಹಿಸಿದರು.
ಗದಗ ಜಿಲ್ಲೆಯ ನರಗುಂದದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, “ಕಳಸ ಬಂಡೂರಿ ಮಹಾದಾಯಿ ಯೋಜನೆಯ ಅನುಷ್ಠಾನಕ್ಕಾಗಿ ಸಾಕಷ್ಟು ದಿನಗಳಿಂದ ಧರಣಿ ನಡೆಯುತ್ತಿದ್ದು, ಇದಕ್ಕೆ ನಮ್ಮ ರೈತ ಸಂಘದ ಸಂಪೂರ್ಣ ಬೆಂಬಲವಿದೆ. ಕೇಂದ್ರದ ಪ್ರಭಾವಿ ಮಂತ್ರಿ ಪ್ರಹ್ಲಾದ್ ಜೋಷಿಯವರು ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು” ಎಂದರು.
“ರೈತರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ರೂಪಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ವಕ್ಫ್ ಆಸ್ತಿಯ ಬಗ್ಗೆ ರೈತರಲ್ಲಿ ತಪ್ಪು ವದಂತಿ: ‘ಆತಂಕಪಡುವ ಅವಶ್ಯಕತೆ ಇಲ್ಲ’ ಎಂದ ಜಿಲ್ಲಾಧಿಕಾರಿ
ರಾಜ್ಯ ಕಾರ್ಯಾಧ್ಯಕ್ಷ ಅಬ್ಬಣಿ ಶಿವಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ನಜೀರ್ ಸಾಬ್ ಮೂಲಿಮನಿ, ಅಮೀನ್ ಪಾಷ ದಿದ್ಗಿ, ಉಪಾಧ್ಯಕ್ಷ ನಿಂಗಪ್ಪ ದಿವಟಗಿ, ಪದಾಧಿಕಾರಿಗಳಾದ ಬಸವರಾಜ್ ಸಾಬ್ಳೆ, ಕೆ ರಾಘವೇಂದ್ರ, ಸಿ ಚಂದ್ರಪ್ಪ, ಶಂಕ್ರಮ್ಮ, ಕಳಸಾ ಬಂಡೂರಿ ಹೋರಾಟದ ಮುಖಂಡರಾದ ಶಂಕರಪ್ಪ ಆಮ್ಲಿ, ಲೋಕನಾಥ್ ಎಫ್ ಸೂರ್, ರವಿ ಒಡೆಯರ್, ಜಾದವ್ ಸೇರಿದಂತೆ ಬಹುತೇಕರು ಇದ್ದರು.