ಶಿವಮೊಗ್ಗ ಜಿಲ್ಲೆಯ ಡಿ.ಎ.ಆರ್. ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪೊಲೀಸ್ ಸಮುದಾಯ ಭವನವನ್ನು ಗೃಹ ಸಚಿವರಾದ ಡಾ.ಜಿ. ಪರಮೇಶ್ವರ್ ಅವರು ಶನಿವಾರ ಉದ್ಘಾಟನೆ ಮಾಡಿದರು.
ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ, ಡಿ.ಎ.ಆರ್ ಆವರಣದಲ್ಲಿ ₹3.75 ಕೋಟಿ ವೆಚ್ಚ ಭರಿಸಿ, 500 ಜನರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಹಾಗೂ ಊಟ ಮಾಡಲು ಜಾಗದ ವ್ಯವಸ್ಥೆ ಸೇರಿದಂತೆ ಸುಸಜ್ಜಿತ ಪೊಲೀಸ್ ಸಮುದಾಯ ಭವನವನ್ನು ನಿರ್ಮಿಸಲಾಗಿದೆ ಎಂದು ಸಚಿವ ಡಾ.ಜಿ. ಪರಮೇಶ್ವರ್ ಅವರು ತಿಳಿಸಿದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ಪೂರ್ವ ವಲಯ ಉಪ ಪೊಲೀಸ್ ನಿರೀಕ್ಷಕರಾದ ಬಿ.ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಹಾಗೂ ಇತರೆ ಪೊಲೀಸ್ ಅಧಿಕಾರಿಗಳೊಂದಿಗೆ ಜಿಲ್ಲಾ ಪೊಲೀಸ್ ವಿಮರ್ಶನಾ ಸಭೆಯನ್ನು ನಡೆಸಿದರು.
ಈ ವೇಳೆ ಮಾತನಾಡಿದ ಗೃಹ ಸಚಿವರಾದ ಡಾ.ಜಿ. ಪರಮೇಶ್ವರ್, “ಡ್ರಗ್ಸ್ ದಂಧೆ, ಸೈಬರ್ ಅಪರಾಧ ಪ್ರಕರಣಗಳು ನಿಯಂತ್ರಣಕ್ಕೆ ಪೊಲೀಸರು ಕಟಿಬದ್ಧರಾಗಬೇಕು. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಸೂಚಿಸಿದರು.
ಇದನ್ನು ಓದಿದ್ದೀರಾ: ಬೇಲೆಕೇರಿ ಅದಿರು ಪ್ರಕರಣ | ಕಾಂಗ್ರೆಸ್ ಶಾಸಕನಿಗೆ 7 ವರ್ಷ ಜೈಲು; ರದ್ದಾಗುತ್ತಾ ಶಾಸಕತ್ವ?
ಡಿಎಆರ್ ಪೊಲೀಸ್ ಭವನದ ಉದ್ಘಾಟನೆ ವೇಳೆ ಶಾಸಕ ಎಸ್.ಎನ್ ಚನ್ನಬಸಪ್ಪ, ಬಿ.ಕೆ ಸಂಗಮೇಶ್ವರ್, ಶಾಸಕ ಗೋಪಾಲ ಕೃಷ್ಣ ಬೇಳೂರು, ವಿಧಾನ ಪರಿಷತ್ ಹಾಲಿ ಶಾಸಕ ಬಲ್ಕಿಶ್ ಬಾನು, ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಮಂಜುನಾಥ ಭಂಡಾರಿ,ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪಾಲ್ಗೊಂಡಿದರು.
