ಬಿಹಾರದ ಸ್ವತಂತ್ರ ಸಂಸದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಅವರಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಬೆದರಿಕೆ ಹಾಕಿದೆ. ಈ ಬೆನ್ನಲ್ಲೇ ಪಪ್ಪು ಯಾದವ್ ಅವರು ತನಗೆ ಝಡ್ ಕೆಟಗರಿ ಭದ್ರತೆಯನ್ನು ಕೋರಿದ್ದಾರೆ.
ಯಾದವ್ ಬಿಹಾರದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಲೋಕ್ ರಾಜ್ ಅವರಿಗೆ ಕರೆ ಮಾಡಿ ಭದ್ರತೆ ಕೋರಿದ್ದಾರೆ. ಜೊತೆಗೆ ಮುಂಬೈನಲ್ಲಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ಗುಂಡಿನ ದಾಳಿ ನಡೆಸಿದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯರು ಕಳುಹಿಸಿದ ಕೊಲೆ ಬೆದರಿಕೆಯ ರೆಕಾರ್ಡಿಂಗ್ ಅನ್ನು ಕಳುಹಿಸಿದ್ದಾರೆ.
ತನ್ನ ಮೊಬೈಲ್‌ಗೆ ಅಪರಿಚಿತರಿಂದ ಕರೆ ಬಂದಿದೆ ಎಂದು ಸಂಸದರು ಹೇಳಿದ್ದಾರೆ. ಹೆಸರು ಹೇಳದ ಕರೆ ಮಾಡಿದ ಅಪರಿಚಿತರು ತಾನು ಲಾರೆನ್ಸ್ ಬಿಷ್ಣೋಯ್ ಅವರಂತಹ ಗ್ಯಾಂಗ್‌ನ ನಿರ್ಮೂಲಕನೆ ಮಾಡುವುದಾಗಿ ಹೇಳಿದ ಬಳಿಕ ತನ್ನ ಎಲ್ಲಾ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇರಿಸಿದ್ದಾರೆ ಎಂದು ತಿಳಿಸಿರುವುದಾಗಿ ಪಪ್ಪು ಯಾದವ್ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಸಹೋದರನ ಸುಳಿವು ನೀಡಿದರೆ 10 ಲಕ್ಷ ರೂ. ಬಹುಮಾನ: ಎನ್‌ಐಎ
“ಪ್ರಸ್ತುತ ಸಬರಮತಿ ಜೈಲಿನಲ್ಲಿರುವ ಗ್ಯಾಂಗ್‌ನ ಕಿಂಗ್‌ಪಿನ್ ಬಿಷ್ಣೋಯ್ ನಿಮ್ಮನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಜೈಲಿನಲ್ಲಿ ಅಳವಡಿಸಲಾದ ಜಾಮರ್‌ಗಳಿಂದಾಗಿ ನಿಮ್ಮನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಗ್ಯಾಂಗ್ ಹಲವು ಸ್ಥಳಗಳಲ್ಲಿ ನಿಮ್ಮನ್ನು ಪರಿಶೀಲಿಸುತ್ತಿದೆ, ನಿಮ್ಮ ಹತ್ಯೆಗೆ ಮುಂದಾಗಿದೆ” ಎಂದು ಕರೆಯಲ್ಲಿ ಎಚ್ಚರಿಕೆ ನೀಡಲಾಗಿದೆ.
ತನಿಖೆಯ ವೇಳೆ ಯುಎಇ ಸಂಖ್ಯೆಯಿಂದ ಕರೆ ಬಂದಿರುವುದು ಬೆಳಕಿಗೆ ಬಂದಿದೆ. ಗ್ಯಾಂಗ್‌ನ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಂತೆ ಮತ್ತು ಸಲ್ಮಾನ್ ಖಾನ್ ಪ್ರಕರಣದಿಂದ ದೂರವಿರುವಂತೆ ಕರೆ ಮಾಡಿದವರು ಯಾದವ್‌ಗೆ ಸೂಚಿಸಿದ್ದಾರೆ.
ಯಾದವ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರವನ್ನು ಕಳುಹಿಸಿದ್ದು, ತಮ್ಮ ಭದ್ರತೆಯನ್ನು ವೈ ವರ್ಗದಿಂದ ಝಡ್ ವರ್ಗಕ್ಕೆ ಹೆಚ್ಚಿಸುವಂತೆ ಒತ್ತಾಯಿಸಿದ್ದಾರೆ. ಬಿಹಾರದ ಪ್ರತಿ ಜಿಲ್ಲೆಗಳಲ್ಲಿ ಪೊಲೀಸ್ ತಂಡದ ಬೆಂಗಾವಲು ನೀಡುವಂತೆ, ಸಾರ್ವಜನಿಕ ಸಭೆಯ ಯಾವುದೇ ಕಾರ್ಯಕ್ರಮದ ಸ್ಥಳದಲ್ಲಿ ವಿಶೇಷ ಭದ್ರತೆ ನೀಡುವಂತೆ ಒತ್ತಾಯಿಸಿದ್ದಾರೆ.
ಯಾದವ್ ಇತ್ತೀಚೆಗೆ ಅಕ್ಟೋಬರ್ 24ರಂದು ಮುಂಬೈನಲ್ಲಿ ಬಾಬಾ ಸಿದ್ದಿಕ್ ಅವರ ಮಗ ಜೀಶನ್ ಸಿದ್ದಿಕಿ ಅವರನ್ನು ಭೇಟಿಯಾದರು. ಹಾಗೆಯೇ ನಟ ಸಲ್ಮಾನ್ ಖಾನ್ ಅವರನ್ನು ಭೇಟಿ ಮಾಡುವ ಬಯಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಜೊತೆಗೆ “ಕಾನೂನು ನನಗೆ ಅನುಮತಿ ನೀಡಿದರೆ, ಲಾರೆನ್ಸ್ ಬಿಷ್ಣೋಯ್ ಅವರಂತಹ ಅಪರಾಧಿಯ ಸಂಪೂರ್ಣ ಜಾಲವನ್ನು 24 ಗಂಟೆಗಳಲ್ಲಿ ನಾಶಪಡಿಸುತ್ತೇನೆ” ಎಂದು ಹೇಳಿದ್ದರು.
