ಜಾತಿ ಸಂಘರ್ಷ ಪ್ರಕರಣದಲ್ಲಿ 98 ಅಪರಾಧಿಗಳಿಗೆ, ಜೀವ ಅವಧಿ ಶಿಕ್ಷೆ ಕೊಪ್ಪಳ ಜಿಲ್ಲಾ ಸತ್ರ ನ್ಯಾಯಾಲಯ ಆದೇಶ ನೀಡಿರುವುದು ಸ್ವಾಗತಾರ್ಹವಾಗಿದೆ ಎಂದು ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ದಸಂಸ ಮುಖಂಡ ಜಗದೀಶ್ ಹರಿಜನ ಅಭಿಪ್ರಾಯಿಸಿದ್ದಾರೆ.
ಕಳೆದ ಒಂದು ದಶಕದ ಹಿಂದೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ಜಾತಿ ವೈಷಮ್ಯ ಉಲ್ಬಣಗೊಂಡು ದಲಿತರು ಹಾಗೂ ದಲಿತ ಕೇರಿಯ ಮೇಲೆ ಸಾಮೂಹಿಕ ಹಲ್ಲೆ ಮಾಡಿ ಗುಡಿಸಲಿಗೆ ಬೆಂಕಿ ಹಚ್ಚಿದರು. ಈ ಪ್ರಕರಣಕ್ಕೆ ಸಂಬಂಧಿಸಿದ ಸುದೀರ್ಘ 10 ವರ್ಷಗಳ ಕಾಲ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಅಪರಾಧಿಗಳಿಗೆ ವಿಧಿಸಿದ ಶಿಕ್ಷೆ ಚರಿತ್ರೆಯಲ್ಲಿಉಳಿಯುವಂತಾಗಿದೆ ಎಂದು ದಸಂಸ ಮುಖಂಡ ಜಗದೀಶ್ ಹರಿಜನ ತಿಳಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಪ್ರಜ್ಞಾಹೀನನಾದ ಪ್ರಯಾಣಿಕ: ಬಸ್ಸನ್ನೇ ಆಸ್ಪತ್ರೆಗೆ ಸಾಗಿಸಿ ಪ್ರಾಣ ಉಳಿಸಿದ ಚಾಲಕ
ಜಾತಿ ಸಂಘರ್ಷ ಪ್ರಕರಣದಲ್ಲಿ 101 ಜನರ ವಿರುದ್ಧ ತೀರ್ಪು ಬಂದ ದೇಶದ ಮೊದಲ ಪ್ರಕರಣ ಇದಾಗಿದೆ. ಈ ತೀರ್ಪಿನಿಂದ ದಲಿತ ಪರ ಸಾಮಾಜಿಕ ತಾರತಮ್ಯದ ವಿರುದ್ಧ ಧ್ವನಿ ಎತ್ತುತ್ತಿರುವ ಎಡ ಮತ್ತು ಪ್ರಗತಿಪರ ಶಕ್ತಿಗಳಿಗೆ ಮತ್ತಷ್ಟು ಬಲತಂದು ಕೊಟ್ಟಿದೆ. ಇಂತಹ ದೌರ್ಜನ್ಯದಲ್ಲಿ ತೊಡಗಿಸಿಕೊಂಡಿರುವ ಸಮಾಜ ಘಾತಕ ಶಕ್ತಿಗಳಿಗೆ ಎಚ್ಚರಿಕೆ ಗಂಟೆಯಾಗಿದೆ. ಇನ್ನಾದರೂ ಜಾತಿ ವೈಷಮ್ಯ ಬಿಟ್ಟು ಸಾಮರಸ್ಯದಿಂದ ಬಾಳಲು ಮುಂದಾಗಬೇಕು ಎಂದು ಹಾನಗಲ್ ತಾಲೂಕಿನ ದಸಂಸ ಮುಖಂಡರಾದ ಜಗದೀಶ್ ಹರಿಜನ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹಾನಗಲ್ ತಾಲೂಕಿನ ದಸಂಸ ಮುಖಂಡರು ಉಪಸ್ಥಿತರಿದ್ದರು.