ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಕೆ.ಎಲ್ ರಾಹುಲ್ ಅವರು ಐಪಿಎಲ್‌ನಲ್ಲಿ ‘ಲಕ್ನೋ ಸೂಪರ್ ಜೈಂಟ್ಸ್’ (ಎಲ್‌ಎಸ್‌ಜಿ) ಇಂದ ಹೊರಬಂದಿದ್ದಾರೆ. ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಕಾರಣಗಳಿಂದ ಎಲ್‌ಎಸ್‌ಜಿ ತೊರೆದಿದ್ದಾರೆ ಎಂದು ವರದಿಯಾಗಿದೆ. ಆರ್‌ಸಿಬಿಯೂ ಸೇರಿದಂತೆ ನಾಲ್ಕು ತಂಡಗಳು ಅವರನ್ನು ಸೇರಿಸಿಕೊಳ್ಳಲು ಉತ್ಸಕವಾಗಿವೆ.
ಆಗಸ್ಟ್ 26 ರಂದು, ಕೆ.ಎಲ್ ರಾಹುಲ್ ಅವರು ಎಲ್‌ಎಸ್‌ಜಿ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರನ್ನು ಕೋಲ್ಕತ್ತಾದಲ್ಲಿ ಭೇಟಿ ಮಾಡಿದ್ದರು. ಅವರ ಭೇಟಿಯು ರಾಹುಲ್ ಎಲ್‌ಎಸ್‌ಜಿಯನ್ನು ಮುಂದಿನ ಪಂದ್ಯಾವಳಿಯಲ್ಲಿಯೂ ಮುನ್ನಡೆಸಬಹುದು ಎಂಬ ಚರ್ಚೆಯನ್ನು ಹುಟ್ಟುಹಾಕಿತ್ತು. ಜೊತೆಗೆ, ಅವರಿಗೆ ಹೆಚ್ಚಿನ ಸಂಭಾವನೆ ನೀಡುವುದಾಗಿ ಎಲ್‌ಎಸ್‌ಜಿ ಪ್ರಾಂಚೈಸಿ ಭರವಸೆ ನೀಡಿತ್ತು. ಆದಾಗ್ಯೂ, ಅವರು ತಂಡವನ್ನು ತೊರೆಯಲು ನಿರ್ಧಿಸಿದ್ದಾರೆ.
ಕೆ.ಎಲ್ ರಾಹುಲ್ ಭಾರತ ಕ್ರಿಕೆಟ್ ತಂಡದ ಅತ್ಯಂತ ಹಿರಿಯ ಆಟಗಾರ. ಅವರು ಕೇವಲ ವಿಕೆಟ್ ಕೀಪರ್-ಬ್ಯಾಟರ್ ಮಾತ್ರವಲ್ಲದೆ, ಆಲ್‌ರೌಡರ್ ಆಗಿಯೂ ಆಟವಾಡಬಲ್ಲ ಸಾಮರ್ಥ್ಯ ಉಳ್ಳಾವರು. ಅವರು ಈ ಹಿಂದೆ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದರು. ಕಳೆದೆರಡು ಟೂರ್ನಿಗಳಲ್ಲಿ ಎಲ್‌ಎಸ್‌ಜಿ ತಂಡದ ನಾಯಕರಾಗಿದ್ದರು. ಸದ್ಯ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ ಫಾರ್ಮ್ ಸ್ವಲ್ಪ ಕ್ಷೀಣಿಸಿದರೂ, ಬೇಡಿಕೆಯ ಆಟಗಾರರಾಗಿದ್ದಾರೆ.
ಸದ್ಯಕ್ಕೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ), ಗುಜರಾತ್ ಟೈಟಾನ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ – ನಾಲ್ಕು ಫ್ರಾಂಚೈಸಿಗಳು ಅವರನ್ನು ಹರಾಜಿನಲ್ಲಿ ಖರೀದಿಸಲು ಮುಂದಾಗಿವೆ. ಅವರನ್ನು ಹೆಚ್ಚಿನ ಮೊತ್ತದೊಂದಿಗೆ ಆರ್‌ಸಿಬಿ ಖರೀದಿಸಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ.
ಮೆಗಾ ಹರಾಜಿಗೆ ಮುಂಚಿತವಾಗಿ ಬಿಡುಗಡೆಯಾದ ಐಪಿಎಲ್ ಸಂಭಾವನೆಯ ಪ್ರಕಾರ, ಈ ಬಾರಿ ಹರಾಜಿನಲ್ಲಿ ಪ್ರತಿ ಪ್ರಾಚೈಸಿಯು ತನ್ನ ತಂಡಕ್ಕೆ ಆಟಗಾರರನ್ನು ಕೊಳ್ಳಲು 120 ಕೋಟಿ ರೂ.ವರೆಗೆ ಖರ್ಚು ಮಾಡಬಹುದು. ಅದರಲ್ಲಿ, ಮೊದಲ ಆಟಗಾರನಿಗೆ ತಂಡವು 18 ಕೋಟಿ ರೂ.ವರೆಗೆ ಸಂಭಾವನೆ ನೀಡಬಹುದು. ಎರಡನೇ ಅಥವಾ ಕ್ಯಾಪ್ಡ್ ಆಟಗಾರರಿಗೆ 14 ಕೋಟಿ ರೂ. ಹಾಗೂ ಅನ್‌ಕ್ಯಾಪ್ಡ್ ಆಟಗಾರರಿಗೆ ತಲಾ 4 ಕೋಟಿ ರೂ. ಭರಿಸಬಹುದು.
ಒಂದು ತಂಡವು ಐವರು ಕ್ಯಾಪ್ಡ್ ಆಟಗಾರರನ್ನು ಖರೀದಿಸಿದರೆ, ಆ ತಂಡವು ಹರಾಜು ಮಡಕೆಯಿಂದ 75 ಕೋಟಿ ರೂ.ಗಳನ್ನು ಆ ಐವರಿಗೆ ವ್ಯಯಿಸಬೇಕಾಗುತ್ತದೆ. ನವೆಂಬರ್‌ನಲ್ಲಿ ಮೆಗಾ ಹರಾಜು ನಡೆಯುವ ಸಾಧ್ಯತೆಯಿದೆ.