ಕಲಬುರಗಿ | ಅಸ್ಪೃಶ್ಯತೆಯ ಕಾರಣದಿಂದ ಜಾನಪದ ಕಲೆಗಳು ನಶಿಸುತ್ತಿವೆ: ಪ್ರೊ. ದಯಾನಂದ ಅಗಸರ

Date:

Advertisements

“ಇಂದು ಅಸ್ಪೃಶ್ಯತೆಯ ಕಾರಣದಿಂದ ಜಾನಪದ ಕಲೆಗಳು ನಶಿಸುತ್ತಿವೆ” ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ದಯಾನಂದ ಅಗಸರ ಅವರು ಕಳವಳ ವ್ಯಕ್ತಪಡಿಸಿದರು.

ಬಾಗಲಕೋಟೆಯ ಕರ್ನಾಟಕ ಬಯಲಾಟ ಅಕಾಡೆಮಿ, ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ, ಡಾ. ಅಂಬೇಡ್ಕರ್ ಕಲಾ, ವಾಣಿಜ್ಯ ಪದವಿ ಮತ್ತು ಸ್ನಾತಕೋತ್ತರ ಕೇಂದ್ರ, ಕನ್ನಡ ವಿಭಾಗ ಸಂಯುಕ್ತ ಆಶ್ರಯದಲ್ಲಿ ಆಯೋಜನೆಗೊಂಡ ‘ಕಲ್ಯಾಣ ಕರ್ನಾಟಕ ಬಯಲಾಟ ಪರಂಪರೆ’ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

“ಕಲ್ಯಾಣ ಕರ್ನಾಟಕದ ಬಯಲಾಟ ಪರಂಪರೆ ಶ್ರೀಮಂತವಾಗಿದೆ. ನಮ್ಮ ತಂದೆ ಬಯಲಾಟದ ಮೇಷ್ಟ್ರಾಗಿದ್ದರು. ನಾನು ತಂದೆಯ ಜತೆ ಬಯಲಾಟದಲ್ಲಿ ಭಾಗವಹಿಸುತ್ತಿದ್ದೆ ಎಂದು ಬಾಲ್ಯವನ್ನು ನೆನಪಿಸಿಕೊಳ್ಳುತ್ತಾ, ಬರುವ ನ್ಯಾಕ್ ಕಮಿಟಿಯ ಸಂದರ್ಭದಲ್ಲಿ ಒಳ್ಳೆಯ ಬಯಲಾಟ ತಂಡದ ಪ್ರದರ್ಶನ ಆಯೋಜಿಸುವ ಯೋಜನೆ ಇದೆ. ಆದರೆ ಇಂದು ಅಸ್ಪೃಶ್ಯತೆಯ ಕಾರಣದಿಂದಾಗಿ ಜಾನಪದ ಕಲೆಗಳು ನಶಿಸುತ್ತಿವೆ” ಎಂದು ತಿಳಿಸಿದರು.

Advertisements

ಕಾರ್ಯಕ್ರಮದ ಸಂಚಾಲಕರಾದ ಡಾ.ಅರುಣ್ ಜೋಳದಕೂಡ್ಲಿಗಿ ಅವರು ಪ್ರಸ್ತಾವಿಕವಾಗಿ ಮಾತನಾಡಿ, “ಕಲ್ಯಾಣ ಕರ್ನಾಟಕದಲ್ಲಿ ಬಯಲಾಟ ಪರಂಪರೆಯನ್ನು ಯುವಜನರಿಗೆ ದಾಟಿಸಬೇಕಿದೆ. ನಶಿಸುತ್ತಿರುವ ಬಯಲಾಟಗಳಿಗೆ ಹೊಸ ಜೀವ ಕೊಡುವ ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ” ಎಂದು ಹೇಳಿದರು.

ಕಲಬುರಗಿ

ಚಿಂತಕರಾದ ಆರ್.ಕೆ.ಹುಡುಗಿ ಅವರು ಆಶಯ ಭಾಷಣ ಮಾಡುತ್ತಾ, “ಜನಪದ ಸಾಹಿತ್ಯ ಜನಪರ ಸಾಹಿತ್ಯ ಎಂದು ತೆಗೆದುಕೊಳ್ಳಬೇಕಿಲ್ಲ. ಶಿಷ್ಟ ಕಲಾವಿದರಿಗೆ ಸಿಗುವ ಗೌರವ ಜನಪದ ಕಲಾವಿದರಿಗೆ ಸಿಗುತ್ತಿಲ್ಲ. ಇಂದಿನ ಜನಪದ ಕಲಾವಿದರು ತಮ್ಮ ಮಕ್ಕಳನ್ನು ಕಲಾವಿದರನ್ನಾಗಿ ಮಾಡಲು ಮುಂದೆ ಬರುತ್ತಿಲ್ಲ. ಜನಪದ ಪರಂಪರೆ ಮುಂದಕ್ಕೆ ಬರಬೇಕಾದರೆ ಸ್ಥಿರವಾದ ಆರ್ಥಿಕ ಭದ್ರತೆ ಬೇಕಾಗುತ್ತದೆ. ಹಲಗೆ ಬಾರಿಸುವವರ ಮಕ್ಕಳು ಹಲಗೆಯನ್ನೆ ಬಾರಿಸಬೇಕಾ? ಚಪ್ಪಲಿ ಹೊಲೆಯುವವರ ಮಕ್ಮಳು ಚಪ್ಪಲೆಯನ್ನೇ ಹೊಲೆಯಬೇಕಾ ಎನ್ನುವ ಪ್ರಶ್ನೆ ಬಂದಾಗ ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಯಕ್ಷಗಾನದಂತೆ ಆಯಾ ಕಾಲದ ಹೊಸ ವಿಷಯಗಳು ಸೇರ್ಪಡೆ ಮಾಡಿಕೊಂಡರೆ ಬಯಲಾಟ ಉಳಿಯುತ್ತದೆ” ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, “ಇಂದು ಸಾಂಸ್ಕೃತಿಕ ವಿಚಾರವು ದುಸ್ಥಿತಿಯಲ್ಲಿದೆ. ಎಲ್ಲಾ ಅಕಾಡೆಮಿಗಳಿಗೂ ಸರಕಾರ ಹೆಚ್ಚಿನ ಅನುದಾನ ಕೊಡಬೇಕು. ಹಾಗಾದಾಗ ಅಕಾಡೆಮಿಗಳು ಹೆಚ್ಚು ಕ್ರಿಯಾಶೀಲಗೊಳ್ಳುತ್ತವೆ. ಯಕ್ಷಗಾನದಂತೆ ಬಯಲಾಟವೂ ಕೂಡ ಈ ಭಾಗದಲ್ಲಿ ಹೊಸ ತಲೆಮಾರಿನ ಜತೆ ಬೆಳೆಯಬೇಕಿದೆ” ಎಂದರು.

ಅತಿಥಿಗಳಾದ ಚಿಂತಕರಾದ ಪ್ರೊ.ಎಚ್.ಟಿ.ಪೋತೆ ಅವರು ಮಾತನಾಡಿ, “ಜನಪದವು ದುಡಿಯುವ ವರ್ಗದ, ಮಹಿಳೆಯರ ಕಲಾ ಪರಂಪರೆಯಾಗಿದೆ. ಕಲ್ಯಾಣ ಕರ್ನಾಟಕದ ಜನಪದ ಬಯಲಾಟಗಳ ಬಗ್ಗೆ ಗುಲ್ಬರ್ಗಾ ವಿವಿ ಮಹತ್ವದ ಕೆಲಸ ಮಾಡಿದೆ. ವಿದ್ಯಾವಂತರು, ನೌಕರರು ಬಯಲಾಟ ಪರಂಪರೆಗೆ ಬರಲೇಬೇಕಿದೆ” ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಬಯಲಾಟ ಅಕಾಡೆಮಿಯ ಅಧ್ಯಕ್ಷರಾದ ಪ್ರೊ.ದುರ್ಗಾದಾಸ್ ಮಾತನಾಡಿ, “ಕೆಳಜಾತಿಗಳಿಗೆ ಬಯಲಾಟಗಳು ಮಾನಸಿಕ ಆತ್ಮಸ್ಥೈರ್ಯ ಕೊಟ್ಟಿವೆ. ಬಯಲಾಟ ಒಂದು ಶಾಲೆಯಾಗಿ ಜನರನ್ನು ನೈತಿಕ ಶಿಕ್ಷಣ ನೀಡಿದೆ. ಅನಕ್ಷರಸ್ತ ಕಲಾವಿದರನ್ನು ಬಯಲಾಟಗಳು ಸಾಕ್ಷರರನ್ನಾಗಿಸಿವೆ. ರಜಾಕಾರರ ಹಾವಳಿ ಸಂದರ್ಭದಲ್ಲಿ ಮುಸ್ಲಿಂ ಮಹಿಳೆಯರು ಹಿಂದು ಪುರುಷರನ್ನು ರಕ್ಷಿಸಿದ್ದು ಜನಪದ ಹಾಡುಗಳಲ್ಲಿದೆ. ಹೀಗೆ ಜಾತಿ ಧರ್ಮವನ್ನು ಮೀರಿ ಬಯಲಾಟಗಳು ಬೆಳೆದಿವೆ. ಬಯಲಾಟ ಪರಂಪರೆಯನ್ನು ಉಳಿಸುವ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ದೊಡ್ಡ ಜವಾಬ್ದಾರಿ ಬಯಲಾಟ ಅಕಾಡೆಮಿಯ ಮೇಲಿದೆ. ಈ ಉದ್ದೇಶದ ಈಡೇರಿಕೆಗೆ ಜನರ ಬೆಂಬಲ ಬೇಕಾಗಿದೆ” ಎಂದರು.

ಕರ್ನಾಟಕ ಪೀಪಲ್ಸ್ ಎಜುಕೇಷನ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿಗಳಾದ ಶಾಂತಪ್ಪ ಸೂರನ್, ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ರಾಜನಾಳಕರ್ ಲಕ್ಷ್ಮಣ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇದನ್ನು ಓದಿದ್ದೀರಾ? ಈ ದಿನ ಫಲಶೃತಿ | ಬೆಳಗಾವಿ: ಶಾಲಾ ಶೌಚಾಲಯ ಸಮಸ್ಯೆ; ತಾತ್ಕಾಲಿಕ ಪರಿಹಾರ ಕಲ್ಪಿಸಿದ ಅಧಿಕಾರಿಗಳು

ವಿಶ್ವವಿದ್ಯಾಲಯದ ಸಂಗೀತ ವಿಭಾಗದ ಅಧ್ಯಾಪಕರು ವಿದ್ಯಾರ್ಥಿಗಳು ನಾಡಗೀತೆಯನ್ನು ಹಾಡಿದರು. ಶ್ರೀ ಲಕ್ಷ್ಮಿ ದೊಡ್ಡಾಟ ಸಂಘ ಚಡಚಣ ತಂಡದವರು ಬಯಲಾಟದ ಹಾಡುಗಳನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮವನ್ನು ಡಾ.ಸಂತೋಷ್ ಕಂಬಾರ್ ಅವರು ನಿರೂಪಿಸಿದರು.

Irshad Venoor
Website |  + posts

ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದವರು. ಕಳೆದ 13 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದು, ವಾರ್ತಾಭಾರತಿ ದಿನಪತ್ರಿಕೆ, ಸಂಜೆ ವಾಣಿ, ಕೋಸ್ಟಲ್ ಡೈಜೆಸ್ಟ್ ಹಾಗೂ ಸನ್ಮಾರ್ಗ ವಾರಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಈದಿನ ಡಾಟ್ ಕಾಮ್‌ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ‌.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಇರ್ಷಾದ್ ವೇಣೂರು
ಇರ್ಷಾದ್ ವೇಣೂರುhttps://eedina.com
ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದವರು. ಕಳೆದ 13 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದು, ವಾರ್ತಾಭಾರತಿ ದಿನಪತ್ರಿಕೆ, ಸಂಜೆ ವಾಣಿ, ಕೋಸ್ಟಲ್ ಡೈಜೆಸ್ಟ್ ಹಾಗೂ ಸನ್ಮಾರ್ಗ ವಾರಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಈದಿನ ಡಾಟ್ ಕಾಮ್‌ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ‌.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X