ಹುಬ್ಬಳ್ಳಿ ಮತ್ತು ಗುಂತಕಲ್ ರೈಲಿ ಮಾರ್ಗದಲ್ಲಿ ಕಾಮಗಾರಿ ನಡೆಯುತ್ತಿದೆ. ಹೀಗಾಗಿ, ಉಭಯ ನಗರಗಳ ನಡುವೆ ಪ್ರತಿದಿನ ಸಂಚರಿಸುವ ಪ್ಯಾಸೆಂಜರ್ ರೈಲನ್ನು (07337) ಸಂಚಾರವನ್ನು ಮೇ 17ರಿಂದ 23ರವರೆಗೆ ತೋರಣಗಲ್ಲು-ಗುಂತಕಲ್ ನಿಲ್ದಾಣದ ನಡುವೆ ರದ್ದುಗೊಳಿಸಲಾಗಿದೆ. ಈ ರೈಲು ಗುಂತಕಲ್ ಬದಲು ತೋರಣಗಲ್ಲಿನಲ್ಲಿ ತನ್ನ ಪ್ರಯಾಣ ಕೊನೆಗೊಳಿಸಲಿದೆ ಎಂದು ನೈರುತ್ಯ ರೈಲ್ವೆ ಹೇಳಿದೆ.
ಗುಂತಕಲ್-ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ ರೈಲಿನ (07338) ಗುಂತಕಲ್-ತೋರಣಗಲ್ಲು ನಿಲ್ದಾಣದ ನಡುವಣ ಸಂಚಾರವನ್ನು ಮೇ 17ರಿಂದ 23ರವರೆಗೆ ರದ್ದುಗೊಳಿಸಲಾಗುತ್ತಿದೆ. ಈ ರೈಲು ಗುಂತಕಲ್ ಬದಲು ತೋರಣಗಲ್ಲಿನಿಂದ ಹೊರಡಲಿದೆ ಎಂದು ಪ್ರಕಟಣೆ ತಿಳಿಸಿದೆ.
ಮೈಸೂರು –ಬೆಳಗಾವಿ ವಿಶ್ವಮಾನವ ಡೈಲಿ ಎಕ್ಸ್‌ಪ್ರೆಸ್ (17326) ರೈಲಿನ ಬೀರೂರು ಮತ್ತು ಬೆಳಗಾವಿ ನಡುವಣ ಸಂಚಾರವನ್ನು ಮೇ 18ರಿಂದ 24ರವರೆಗೆ ಹಾಗೂ ಬೆಳಗಾವಿ–ಮೈಸೂರು ವಿಶ್ವಮಾನವ ಡೈಲಿ ಎಕ್ಸ್‌ಪ್ರೆಸ್ (17325) ರೈಲಿನ ಬೆಳಗಾವಿ ಮತ್ತು ಬೀರೂರು ನಿಲ್ದಾಣದ ನಡುವಿನ ಸಂಚಾರವನ್ನು ಮೇ 18ರಿಂದ 24ರವರೆಗೆ ಭಾಗಶಃ ರದ್ದುಪಡಿಸಲಾಗಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.