ಬ್ಯಾಂಕ್ ಅಧಿಕಾರಿಗಳ ಕಿರುಕುಳ | ಸಾಲ ತೀರಿಸಲು 9,000 ರೂ.ಗೆ ಮಗುವನ್ನೇ ಮಾರಿದ ದಂಪತಿ

Date:

Advertisements

ಬಡತನದಿಂದ ಬದುಕು ದೂಡಲು ಹೆಣಗಾಡುತ್ತಿದ್ದ ದಂಪತಿಗಳು ಬ್ಯಾಂಕ್‌ನಲ್ಲಿ ತಾವು ತೆಗೆದುಕೊಂಡಿದ್ದ ಸಾಲ ತೀರಿಸಲು ತಮ್ಮ ಮಗುವನ್ನೇ ಮಾರಾಟ ಮಾಡಿರುವ ಮನಕಲಕುವ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ನಡೆದಿದೆ. ತಮ್ಮ ಮಗುವನ್ನು ಕೇವಲ 9,000 ರೂ.ಗಳಿಗೆ ಮಾರಾಟ ಮಾಡಿದ್ದಾರೆ ಎಂದು ವರದಿಯಾಗಿದೆ.

ಆ ಮಗುವನ್ನು ಬೆಂಗಳೂರು ಮೂಲಕ ಮಕ್ಕಳಿಲ್ಲದ ದಂಪತಿಗಳಿಗೆ ಮಾರಾಟ ಮಾಡಲಾಗಿತ್ತು. ಮಗುವನ್ನು ಬೆಂಗಳೂರಿನ ಕಳಿಸುವುದಕ್ಕೂ ಮುನ್ನ, ಮಹಿಳೆಯರ ಸಂಬಂಧಿಕರ ಮನೆಯಲ್ಲಿ ಇರಲಿಸಲಾಗಿತ್ತು. ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮಗುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮಗುವನ್ನು ಪೊಲೀಸರು ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಿದ್ದಾರೆ. ಘಟನೆ ಬಗ್ಗೆ ವಿಚಾರಣೆ ನಡೆಸಲು ಮಗುವಿನ ಪೋಷಕರಾದ ಮೊಹಮ್ಮದ್ ಹಾರೂನ್ ಮತ್ತು ರೆಹಾನಾ ಖಾತೂನ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Advertisements

ಮಗುವಿನ ತಾಯಿ ರೆಹಾನಾ ಖಾತೂನ್ ಅವರ ಸಹೋದರ ತನ್ವೀರ್ ಎಂಬಾತ ಮಗುವನ್ನು ಗ್ರಾಮಸ್ಥರಾದ ಮೊಹಮ್ಮದ್ ಆರಿಫ್‌ಗೆ ಮಾರಾಟ ಮಾಡಿದ್ದರು. ತನ್ವೀರ್ ತಮಗೆ ಭಾನುವಾರ 9,000 ರೂ. ನೀಡಿದ್ದಾನೆ. ಆತ ಮಗನನ್ನು ಮಾರಾಟ ಮಾಡಿ ಆರೀಫ್‌ನಿಂದ ಎಷ್ಟು ಹಣ ಪಡೆದಿದ್ದಾನೆ ಎಂಬ ಬಗ್ಗೆ ತಮಗೆ ತಿಳಿದಿಲ್ಲ ಎಂದು ಮಗುವಿನ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ. ಅದಾಗ್ಯೂ, ಮಗುವನ್ನು ಪಡೆದ ಆರೀಫ್, ತನ್ನ ಸಂಬಂಧಿ ತನ್ವೀರ್‌ಗೆ 45 ಸಾವಿರ ರೂ. ನೀಡಿರುವುದಾಗಿ ಹೇಳಿಕೊಂಡಿದ್ದಾರೆ.

ತನ್ನ ಬಡತನವನ್ನು ದೂಷಿಸಿರುವ ಮಗುವಿನ ತಾಯಿ ರೆಹನಾ, “ಹಣಕಾಸಿನ ಅಡಚಣೆಯಿಂದಾಗಿ 50,000 ರೂ. ಬ್ಯಾಂಕ್ ಸಾಲವನ್ನು ಪಾವತಿಸಲು ಸಾಧ್ಯವಾಗದ ಕಾರಣ ತನ್ನ ಮಗುವನ್ನು ಮಾರಾಟ ಮಾಡಬೇಕಾಯಿತು” ಎಂದು ಹೇಳಿದ್ದಾರೆ. ಬ್ಯಾಂಕ್ ಉದ್ಯೋಗಿಗಳು ತನಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದರು ಎಂದು ಅವರು ಹೇಳಿದ್ದಾರೆ.

“ಖಾಸಗಿ ಫೈನಾನ್ಸ್ ಕಂಪನಿಯಿಂದ ನಾನು ಪಡೆದ ಸಾಲದ ಕಂತು ಕಳೆದ ಮೂರು ತಿಂಗಳಿಂದ ಬಾಕಿಯಿರುವುದರಿಂದ ನಾನು ತೀವ್ರ ಒತ್ತಡಕ್ಕೆ ಒಳಗಾಗಿದ್ದೆ. ಸಾಲ ನೀಡುವ ಕಂಪನಿಯ ಏಜೆಂಟರು ನಮಗೆ ಕಿರುಕುಳ ನೀಡುತ್ತಿದ್ದರು. ಸಾಲವನ್ನು ಮರುಪಾವತಿಸಲು ವಿಫಲವಾದ ಕಾರಣ ನನ್ನ ವಿರುದ್ಧ ಮೊಕದ್ದಮೆ ಹೂಡುವುದಾಗಿ ಬೆದರಿಕೆ ಹಾಕಿದ್ದರು. ಸಾಲವನ್ನು ಮರುಪಾವತಿಸಲು ನನ್ನ ಮಕ್ಕಳಲ್ಲಿ ಒಬ್ಬರನ್ನು ಮಾರಾಟ ಮಾಡುವಂತೆ ನನ್ನ ಸಹೋದರ ತನ್ವೀರ್ ನನಗೆ ಸಲಹೆ ನೀಡಿದ್ದಾನೆ” ಎಂದು ರೆಹಾನಾ ವಿಚಾರಣೆ ವೇಳೆ ತಿಳಿಸಿದ್ದಾರೆ.

ಈ ವರದಿ ಓದಿದ್ದೀರಾ?: ಮಾತು ಉಳಿಸಿಕೊಳ್ಳದ ಮೋದಿ; ಒಂದು ಯುಎಸ್‌ ಡಾಲರ್‌ಗೆ ಭಾರತದ 84 ರೂಪಾಯಿ!

ಅರಾರಿಯಾ ಜಿಲ್ಲೆಯ ರಾಣಿಗಂಜ್ ಬ್ಲಾಕ್‌ನ ಪಚಿರಾ ಪಂಚಾಯತ್‌ನಲ್ಲಿ ವಾಸಿಸುವ ದಂಪತಿಯ ಮಕ್ಕಳಲ್ಲಿ ಒಬ್ಬರಾದ ಒಂದೂವರೆ ವರ್ಷದ ಗುರ್ಫಾನ್ ಅವರನ್ನು ಮಾರಾಟ ಮಾಡುವ ಬಗ್ಗೆ ಯೋಜಿಸಿದ್ದರು. ಹಾಗಾಗಿ ಗುರ್ಫಾನ್ ಅವರನ್ನು ಭಾನುವಾರ ಅವರ ತಾಯಿಯ ಚಿಕ್ಕಪ್ಪ ತನ್ವೀರ್ ಅವರ ಮನೆಗೆ ಕಳುಹಿಸಲಾಯಿತು. ಅಲ್ಲಿಂದ ಮಗುವನ್ನು ದುಮಾರಿಯಾ ನಿವಾಸಿ ಮೊಹಮ್ಮದ್ ಆರಿಫ್ ಅವರಿಗೆ ಹಸ್ತಾಂತರಿಸಲಾಗಿದೆ.

ಮಗುವನ್ನು ದತ್ತು ಪಡೆಯಲು ಇಚ್ಛಿಸಿದ ಬೆಂಗಳೂರು ಮೂಲದ ಮಹಿಳೆಯೊಬ್ಬರಿಂದ ಆರಿಫ್ ಅಪಾರ ಹಣ ಪಡೆದಿದ್ದಾಗಿ ಪೊಲೀಸರಿಗೆ ಮಹಿಳೆ ತಿಳಿಸಿದ್ದಾರೆ. ಅರಾರಿಯಾ ನೇಪಾಳ ಗಡಿಗೆ ಸಮೀಪದಲ್ಲಿದ್ದು, ಬಿಹಾರದ ಈ ಗಡಿ ಜಿಲ್ಲೆಗಳಲ್ಲಿ ಮಕ್ಕಳ ಕಳ್ಳಸಾಗಣೆ ಘಟನೆಗಳು ಸಾಮಾನ್ಯವಾಗಿ ನಡೆಯುತ್ತಲೆ ಇರುತ್ತವೆ ಎನ್ನಲಾಗಿದೆ.

2016 ರಲ್ಲಿ ಪಾಟ್ನಾ ಜಿಲ್ಲೆಯ ಹಳ್ಳಿಯೊಂದರ ರುಕ್ಮಣಿ ಮತ್ತು ಸಂದೀಪ್ ಮೀನಾ ತಮ್ಮ ಒಂಬತ್ತು ವರ್ಷದ ಮಗನನ್ನು ಇಂದೋರ್‌ನ ಮಧ್ಯವರ್ತಿಯೊಬ್ಬರಿಗೆ 20,000 ರೂ ಸಾಲವನ್ನು ಮರುಪಾವತಿಸಲು ಮಾರಾಟ ಮಾಡಿದ್ದರು.

ಅದೇ ವರ್ಷ, ಮುಜಾಫರ್‌ಪುರ ಜಿಲ್ಲೆಯ ವ್ಯಕ್ತಿ ಹಿಮಾಂಶು ರಂಜನ್ ತನ್ನ ಹೆಂಡತಿ ಮತ್ತು ಸುಮಾರು ಐದು ವರ್ಷ ಮತ್ತು ಮೂರು ವರ್ಷ ವಯಸ್ಸಿನ ಇಬ್ಬರು ಹೆಣ್ಣುಮಕ್ಕಳನ್ನು 4 ಲಕ್ಷ ರೂಪಾಯಿ ಸಾಲವನ್ನು ಮರುಪಾವತಿಸಲು ಮಾರಾಟ ಮಾಡಿದ್ದರು.

2012ರಲ್ಲಿ ಸಮಸ್ತಿಪುರ ಜಿಲ್ಲೆಯಲ್ಲಿ ಪಾರ್ವತಿ ದೇವಿ ಎಂಬಾಕೆ ತನ್ನ 18 ತಿಂಗಳ ಮಗನನ್ನು 15,000 ರೂ.ಗಳ ಸಾಲ ತೀರಿಸಲು ಮಾರಾಟ ಮಾಡಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಬಡ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X