ಪರಿಶುದ್ಧ ಗಾಳಿ ಪಡೆಯಲು ನಮ್ಮ ಸುತ್ತಮುತ್ತ ಹೆಚ್ಚು ಗಿಡ ಮರಗಳನ್ನು ಬೆಳೆಸಬೇಕು. ತಾಯಿ ಹೆಸರಿನಲ್ಲಿ ಮನೆ ಮನೆಗೆ ಒಂದು ಸಸಿ ನೆಟ್ಟು ಬೆಳಸಬೇಕು ಎಂದು ಕಮಕನೂರ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕಾಶಿನಾಥ್ ಬಂಡಿ ಸಂದೇಶ ನೀಡಿದರು.
ಕಲಬುರಗಿ ನಗರದ ಭಾರತ ಸರ್ಕಾರ ಮೈ ಭಾರತ, ನೆಹರೂ ಯುವಕೇಂದ್ರ, 7 ಸ್ಟಾರ್ ಅಡ್ವೆಂಚರ್ ಸ್ಪೋರ್ಟ್ಸ್ ಅಸೋಸಿಯೇಶನ್ ಸಂಯುಕ್ತಾಶ್ರಯದಲ್ಲಿ ಕಮಕನೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ʼಏಕ್ ಪೇಡ್ ಮಾ ಕೆ ನಾಮ್ʼ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಬೆಳೆಗಳ ನಡುವೆ ಅಕ್ರಮವಾಗಿ ಬೆಳೆದಿದ್ದ ಗಾಂಜಾ ವಶ
“ಪ್ರಸ್ತುತ ದಿನಮಾನಗಳಲ್ಲಿ ವಾಹನ ಬಳಕೆ ಮತ್ತು ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದ್ದು, ಪರಿಶುದ್ಧ ಗಾಳಿಯೇ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಮನೆಮನೆಗೆ ಒಂದೊಂದು ಸಸಿ ನೆಟ್ಟು ಬೆಳೆಸಬೇಕು” ಎಂದರು.
ದಲಿತ ಮುಖಂಡ ಅಂಬರೀಶ್ ಶ್ಯಾಮಸುಂದರ, ನ್ಯಾಯವಾದಿ ವೀರೇಶ ಬಂಡಿ, ಅರೋಗ್ಯಇಲಾಖೆ ನಿರೀಕ್ಷಣಾ ಅಧಿಕಾರಿ ಚಂದ್ರಕಾಂತ ಕಾಳಗಿ, ಅಂಗನವಾಡಿ ಕಾರ್ಯಕರ್ತೆ ಶೀಲಾ ಬಂಡಿ, ಮಮತಾ ಹೋಳ್ಕರ್, ಶ್ರೀಶೈಲ ಹೊಸಮನಿ, ಗಣಪತಿ ಜಮಾದಾರ್, ಇಂದಪ್ಪ ಎಂಟಮಾನ, ಭೀಮರಾಯ ಹೋಳ್ಕರ್ ಸೇರಿದಂತೆ ಗ್ರಾಮಸ್ಥರು ಇದ್ದರು.