ಅಮೆರಿಕ ಚುನಾವಣೆ | ಕಮಲಾ ಹ್ಯಾರಿಸ್ – ಡೊನಾಲ್ಡ್‌ ಟ್ರಂಪ್‌; ಮತದಾರರ ಚಿತ್ತ ಯಾರತ್ತ?

Date:

Advertisements

ಹವಾಮಾನ ಬದಲಾವಣೆ ಮತ್ತು ವಲಸೆ ಸಮಸ್ಯೆ ಕೂಡ ಪ್ರಸ್ತುತ ಸಂದರ್ಭದಲ್ಲಿ ನಿರ್ಣಾಯಕ ಚುನಾವಣಾ ವಿಷಯಗಳಾಗಿ ಮಾರ್ಪಟ್ಟಿವೆ. ಹ್ಯಾರಿಸ್ ಅವರು ಹವಾಮಾನ ಬದಲಾವಣೆಯ ಬಗ್ಗೆ ಬಲವಾದ ನೀತಿಯನ್ನು ಹೊಂದಿದ್ದಾರೆಂದು ಡೆಮಾಕ್ರಟಿಕ್‌ ಪಕ್ಷದ ಬೆಂಬಲಿಗರು ನಂಬುತ್ತಾರೆ. ಆದರೆ ಟ್ರಂಪ್ ಅವರ ರಿಪಬ್ಲಿಕನ್‌ ಪಕ್ಷದ ಬೆಂಬಲಿಗರು ವಲಸೆ ವಿಷಯದ ಬಗ್ಗೆ ಪ್ರಮುಖ ಕಾಳಜಿ ತೋರುತ್ತಾರೆ

ವಿಶ್ವದ ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರವಾದ ಅಮೆರಿಕದಲ್ಲಿ ನವೆಂಬರ್‌ 5 ರಂದು ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಡೆಮಾಕ್ರಟಿಕ್‌ ಅಭ್ಯರ್ಥಿ ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ರಿಪಬ್ಲಿಕನ್‌ ಪಕ್ಷದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ತೀವ್ರ ಹಣಾಹಣಿ ನಡೆಯಲಿದೆ. ಸ್ಪರ್ಧೆಯು ತುರುಸಿನ ಪೈಪೋಟಿಯಾಗಿರುವುದರಿಂದ ಇಬ್ಬರು ಅಭ್ಯರ್ಥಿಗಳಲ್ಲಿ ಯಾರೇ ಆದರೂ ಕಡಿಮೆ ಅಂತರದಿಂದ ವಿಜಯಶಾಲಿಯಾಗಬಹುದು ಎಂದು ಸಮೀಕ್ಷೆಗಳು ತಿಳಿಸುತ್ತಿವೆ. ಚುನಾವಣೆ ಆರಂಭದಲ್ಲಿ ಭಾರತೀಯ ಮೂಲದ ಕಮಲಾ ಹ್ಯಾರಿಸ್‌ ಮುನ್ನಡೆ ಸಾಧಿಸಿದ್ದರು. ಆದರೆ ಚುನಾವಣೆ ಸಮೀಪಿಸುತ್ತಿದ್ದಂತೆ ಅಂತರ ಕೆಳಗಿಳಿದಿದೆ. 50 ರಾಜ್ಯಗಳಲ್ಲಿ ಹೆಚ್ಚಿನವು ಯಾರಿಗೆ ಬೆಂಬಲ ವ್ಯಕ್ತಪಡಿಸಲಾಗುತ್ತದೆಯೋ ಅವರು ಗೆಲುವು ಸಾಧಿಸುತ್ತಾರೆ.

ಆದರೆ ಫಲಿತಾಂಶವು 7 ‘ನಿರ್ಣಾಯಕ’ ರಾಜ್ಯಗಳಿಂದ ನಿರ್ಧಾರವಾಗುತ್ತದೆ. ಅಮೆರಿಕದ ಮುಂದಿನ ಅಧ್ಯಕ್ಷರನ್ನು ಚುನಾಯಿಸುವಲ್ಲಿ ಕಡಿಮೆ ಸಂಖ್ಯೆಯ ಅದೃಶ್ಯ ಮತದಾರರು ಅಥವಾ ಯಾರ ಪರವೂ ಹೆಚ್ಚು ಒಲವು ತೋರದ ಜನರು ಪ್ರಮುಖ ಪಾತ್ರವಹಿಸುತ್ತಾರೆ ಎಂಬುದು ಇತ್ತೀಚಿನ ಬೆಳವಣಿಗೆಗಳಿಂದ ಕಂಡುಬಂದಿವೆ.       

Advertisements

ಈ ಚುನಾವಣೆಯಲ್ಲಿ ಅಮೆರಿಕನ್ನರಿಗೆ ಹೆಚ್ಚು ಆದ್ಯತೆಯಿರುವ ವಿಷಯವೆಂದರೆ ಏರಿಕೆಯಾಗುತ್ತಿರುವ ಜೀವನ ನಿರ್ವಹಣೆಯ ವೆಚ್ಚ, ಇದು ಟ್ರಂಪ್‌ಗೆ ಲಾಭದಾಯಕ ಅಂಶವಾಗಿದೆ. ಬಹುತೇಕ ಅಮೆರಿಕನ್ನರು ಗಗನಕ್ಕೇರುತ್ತಿರುವ ಬೆಲೆಗಳ ಬಗ್ಗೆ ಗಂಭೀರವಾದ ಕಾಳಜಿಯನ್ನು ಹೊಂದಿದ್ದಾರೆ. ಇದು ಹಾಲಿ ಉಪಾಧ್ಯಕ್ಷರಾಗಿರುವ ಹ್ಯಾರಿಸ್ ಅವರ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ. ಈ ವೆಚ್ಚಗಳಲ್ಲಿ, ಆರೋಗ್ಯ ಕಾಳಜಿಯ ಹೆಚ್ಚುತ್ತಿರುವ ವೆಚ್ಚವು ಎದ್ದು ಕಾಣುತ್ತದೆ. ಆದಾಗ್ಯೂ, ಈ ವಿಷಯವು ಕಮಲಾ ಹ್ಯಾರಿಸ್ ಪರವಾಗಿ ವ್ಯಕ್ತವಾಗುತ್ತದೆ, ಏಕೆಂದರೆ ಆರೋಗ್ಯ ಕಾಳಜಿಯಲ್ಲಿ, ವಿಶೇಷವಾಗಿ ಕೋವಿಡ್ ನಂತರದ ಅವಧಿಯಲ್ಲಿ ಡೊನಾಲ್ಡ್‌ ಟ್ರಂಪ್ ನಿರ್ವಹಿಸಿದ ಕಾರ್ಯವು ಅತ್ಯಂತ ಕಳಪೆಯಾಗಿತ್ತು.

ಕಳೆದ ಚುನಾವಣೆಯಲ್ಲಿನ ಮತ್ತೊಂದು ಗಮನಾರ್ಹ ವಿಷಯವಾದ ಜನಾಂಗೀಯ ನ್ಯಾಯವು ಪ್ರಸ್ತುತ ಚುನಾವಣೆಯಲ್ಲಿ ವಿಶೇಷವಾಗಿ ಉಕ್ರೇನ್ ಮತ್ತು ಗಾಜಾಕ್ಕೆ ಸಂಬಂಧಿಸಿದಂತೆ ಅಮೆರಿಕದ ಯುದ್ಧ ನೀತಿಗಳೊಂದಿಗೆ ಹೆಣೆದುಕೊಂಡಿದೆ. ಇಸ್ರೇಲ್‌ಗೆ ಹಾಲಿ ಅಧ್ಯಕ್ಷ ಜೋ ಬೈಡನ್‌ ಅವರ ದೃಢವಾದ ಬೆಂಬಲವು ಅವರಿಗೆ “ಜಿನೋಸೈಡ್ ಜೋ” ಎಂಬ ಅಡ್ಡಹೆಸರನ್ನು ತಂದುಕೊಟ್ಟಿದ್ದು, ಇದು ಹ್ಯಾರಿಸ್‌ ಅವರಿಗೆ ಬೆಂಬಲವನ್ನು ದುರ್ಬಲಗೊಳಿಸಿದೆ. ಯಾವುದೇ ಅಭ್ಯರ್ಥಿಗಳು ಪ್ಯಾಲಿಸ್ಟೀನ್‌ ಪರ ನಿಲುವನ್ನು ವ್ಯಕ್ತಪಡಿಸದ ಕಾರಣ ಈ ವಿಷಯ ಚುನಾವಣೆಯಲ್ಲಿ ಗಮನಾರ್ಹ ಪರಿಣಾಮ ಬೀರಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಅದರಲ್ಲೂ ಮುಸ್ಲಿಂ ಕಾರ್ಮಿಕ ವಲಯ ಕಮಲಾ ಹ್ಯಾರಿಸ್, ಟ್ರಂಪ್‌ರ ವಿರುದ್ಧವಿದ್ದು, ಮೂರನೇ ವ್ಯಕ್ತಿಗೆ ಮತ ಚಲಾಯಿಸುವ ಸಾಧ್ಯತೆಗಳು ಹೆಚ್ಚಿವೆ ಎನ್ನಲಾಗುತ್ತಿದೆ. ವಿಪರ್ಯಾಸವೆಂದರೆ, ಡೊನಾಲ್ಡ್‌ ಟ್ರಂಪ್ ಉಕ್ರೇನ್‌ಗೆ ಬೆಂಬಲವನ್ನು ಹೆಚ್ಚು ನೀಡುತ್ತಿಲ್ಲ ಎಂದು ಕೆಲವರು ನಂಬುತ್ತಾರೆ, ಸಾಂಪ್ರದಾಯಿಕವಾಗಿ ಯುದ್ಧಪರವಾದ ಪಕ್ಷವು ಚುನಾವಣಾ ಸಂದರ್ಭದಲ್ಲಿ ಜನರಿಗೆ ಹೆಚ್ಚು ಪರಿಣಾಮ ಬೀರಬಲ್ಲ ವಿಷಯವಾಗುವುದಿಲ್ಲ.

ಹವಾಮಾನ ಬದಲಾವಣೆ ಮತ್ತು ವಲಸೆ ಸಮಸ್ಯೆ ಕೂಡ ಪ್ರಸ್ತುತ ಸಂದರ್ಭದಲ್ಲಿ ನಿರ್ಣಾಯಕ ಚುನಾವಣಾ ವಿಷಯಗಳಾಗಿ ಮಾರ್ಪಟ್ಟಿವೆ. ಹ್ಯಾರಿಸ್ ಅವರು ಹವಾಮಾನ ಬದಲಾವಣೆಯ ಬಗ್ಗೆ ಬಲವಾದ ನೀತಿಯನ್ನು ಹೊಂದಿದ್ದಾರೆಂದು ಡೆಮಾಕ್ರಟಿಕ್‌ ಪಕ್ಷದ ಬೆಂಬಲಿಗರು ನಂಬುತ್ತಾರೆ. ಆದರೆ ಟ್ರಂಪ್ ಅವರ ರಿಪಬ್ಲಿಕನ್‌ ಪಕ್ಷದ ಬೆಂಬಲಿಗರು ವಲಸೆ ವಿಷಯದ ಬಗ್ಗೆ ಪ್ರಮುಖ ಕಾಳಜಿ ತೋರುತ್ತಾರೆ. ಇದು ಇಬ್ಬರು ಅಭ್ಯರ್ಥಿಗಳ ನಡುವಿನ ನಿಜವಾದ ವ್ಯತ್ಯಾಸದ ಸಮಸ್ಯೆಗಳಾಗಿದ್ದರೂ ಅವರ ಆದ್ಯತೆಗಳು ಮತ್ತು ವಿಧಾನಗಳಲ್ಲಿ ಸಂಪೂರ್ಣ ವ್ಯತಿರಿಕ್ತತೆಯನ್ನು ಎತ್ತಿ ತೋರಿಸುತ್ತದೆ.

ಭಾರತೀಯ ಅಮೆರಿಕನ್ ಜನಸಂಖ್ಯೆಯು ಟ್ರಂಪ್ ಅವರ ರಿಪಬ್ಲಿಕನ್ ಪಕ್ಷದತ್ತ ಹೆಚ್ಚು ಒಲವು ತೋರುತ್ತಿದೆ. ಬಹುಪಾಲು ಭಾರತೀಯ ಅಮೆರಿಕನ್ ಮತದಾರರು ಹ್ಯಾರಿಸ್ ಅವರನ್ನು ಬೆಂಬಲಿಸುವ ನಿರೀಕ್ಷೆಯಿದೆಯಾದರೂ, ಅಂತರವು ಮಾತ್ರ ಹಿಂದೆಂದಿಗಿಂತಲೂ ಕಡಿಮೆಯಾಗಿದೆ. ಭಾರತೀಯ ಅಮೆರಿಕನ್ನರು ಭಾರತೀಯ ರಾಜಕಾರಣಿಗಳೊಂದಿಗೆ ಪ್ರಬಲವಾದ ಸಂಬಂಧವನ್ನು ಹೊಂದಿದಂತೆ ತೋರುತ್ತಿಲ್ಲ. ಅಮೆರಿಕದಲ್ಲಿ ಭಾರತೀಯ ಮೂಲದ ರಾಜಕಾರಣಿಗಳು ಹೆಚ್ಚುತ್ತಿರುವ ಹೊರತಾಗಿಯೂ ಭಾರತೀಯ ಅಮೆರಿಕನ್ನರು ಮೂಲ ಅಮೆರಿಕ ನಿವಾಸಿಗಳಿಗಿಂತ ಸರಾಸರಿಯಾಗಿ ಹೋಲಿಸಿದರೆ ಹೆಚ್ಚು ಸ್ಥಿತಿವಂತರಾಗಿದ್ದಾರೆ. ಇದರ ಜೊತೆ ಅವರು ಇತ್ತೀಚಿನ ವರ್ಷಗಳಲ್ಲಿ ಬಲಪಂಥೀಯ ಸಿದ್ಧಾಂತಗಳ ಕಡೆಗೆ ಹೆಚ್ಚು ವಾಲುತ್ತಿದ್ದಾರೆ. ಭಾರತೀಯ ಮೂಲದವರು ಸಾಂಪ್ರದಾಯಿಕವಾಗಿ ಬಲಪಂಥೀಯ ಪ್ರದೇಶಗಳಿಗೆ ತೆರಳಿದಾಗ, ಅಲ್ಲಿನ ಸ್ಥಳೀಯ ಸಂಸ್ಕೃತಿ ಮತ್ತು ರಾಜಕೀಯ ಒಲವುಗಳನ್ನು ಪ್ರತಿಬಿಂಬಿಸಲು ಪ್ರಾರಂಭಿಸುತ್ತಾರೆ. ಇದು ಟ್ರಂಪ್‌ಗೆ ಭಾರತೀಯರ ಮತಗಳಿಂದ ವರದಾನವಾಗುವ ಸಾಧ್ಯತೆಯಿದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಕಡಿವಾಣ ಯಾವಾಗ?

ಈ ಚುನಾವಣೆಯಲ್ಲಿ, ಬಲಪಂಥೀಯ ಚಿಂತಕರ ಚಾವಡಿಯಾದ ಹೆರಿಟೇಜ್ ಫೌಂಡೇಶನ್ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೆರಿಟೇಜ್ ಫೌಂಡೇಶನ್ ರಿಪಬ್ಲಿಕನ್ ಪಕ್ಷಕ್ಕೆ ಹೆಚ್ಚು ಅನುಕೂಲವಾಗುವ ಕಾರ್ಯತಂತ್ರವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಿದೆ. ಡೊನಾಲ್ಡ್‌ ಟ್ರಂಪ್‌ ಅವರು ಅಧ್ಯಕ್ಷ ಸ್ಥಾನ ಪಡೆಯುವುದಕ್ಕಾಗಿ ಹವಾಮಾನ ಬದಲಾವಣೆ, ವರ್ಣಭೇದ ನೀತಿ ವಿರೋಧಿ, ಪ್ಯಾಲಿಸ್ತೀನ್ ಪರವಾದ ವಿಷಯಗಳನ್ನು ಸೇರಿದಂತೆ ಹಲವು ಗಂಭೀರ ವಿಷಯಗಳ ಮೇಲೆ ಕೇಂದ್ರೀಕರಿಸಲು ಸಹಾಯ ಮಾಡಿದೆ ಎಂದು ಹೇಳಲಾಗಿದೆ. ರಿಪಬ್ಲಿಕನ್ ಮತದಾರರ ನೆಲೆಗೆ ಈ ವಿಷಯಗಳನ್ನು ತಿರುಗಿಸುವಲ್ಲಿ ಹೆರಿಟೇಜ್ ಫೌಂಡೇಶನ್ ಕಾರ್ಯತಂತ್ರ ಹೆಣೆದಿದೆ. ಗಮನಾರ್ಹವಾಗಿ ವಲಸಿಗರು ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಜನರ ವಿರುದ್ಧ ಎತ್ತಿಕಟ್ಟಲು ಪ್ರಚಾರ ತಂತ್ರಗಳನ್ನು ರೂಪಿಸಲಾಗಿದ್ದು, ಇವುಗಳನ್ನು ಮಹತ್ವದ ರಾಷ್ಟ್ರೀಯ ಚುನಾವಣಾ ವಿಷಯಗಳಾಗಿ ಪರಿವರ್ತಿಸಲಾಗಿದೆ. ಈ ವಿಷಯಗಳು ಚುನಾವಣೆಯಲ್ಲಿ ಪರಿಣಾಮ ಬೀರುವ ಸಾಧ್ಯತೆಯಿದೆ.

ಸೆನೆಟ್‌ನಲ್ಲಿ(ಸಂಸತ್ತಿನ ಮೇಲ್ಮನೆ) ರಿಪಬ್ಲಿಕನ್ನರು ಅಲ್ಪ ಬಹುಮತವನ್ನು ಪಡೆಯುವ ಸಾಧ್ಯತೆಯಿದೆ ಎಂದು ಸಮೀಕ್ಷೆಗಳು ಸೂಚಿಸುತ್ತಿವೆ. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್(ಸಂಸತ್ತಿನ ಕೆಳಮನೆ) ಕ್ಯಾಲಿಫೋರ್ನಿಯಾ, ವಾಷಿಂಗ್ಟನ್ ಸ್ಟೇಟ್, ನ್ಯೂಯಾರ್ಕ್ ಸ್ಟೇಟ್ ಮತ್ತು ಮಿನ್ನೇಸೋಟದಲ್ಲಿ ಗೆಲ್ಲುವ ಸಂಭವ ಹೆಚ್ಚಿದೆ ಎಂದು ಭವಿಷ್ಯವಾಣಿಗಳು ತಿಳಿಸಿವೆ. ಮುಂದಿನ ನಾಲ್ಕು ವರ್ಷಗಳಲ್ಲಿ ನಡೆಯಲಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನಾಮನಿರ್ದೇಶನಗಳ ಬಗ್ಗೆ ಮತದಾರರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಅಮೆರಿಕದ ನ್ಯಾಯಾಂಗದ ಭವಿಷ್ಯವು ಈ ಚುನಾವಣೆಯಲ್ಲಿ ಮಹತ್ವದ ವಿಷಯವಾಗಿರುವ ಕಾರಣ ಟ್ರಂಪ್‌ರ ರಿಪಬ್ಲಿಕನ್ ಪಕ್ಷದ ಕಡೆಗೆ ಸ್ವಲ್ಪಮಟ್ಟಿಗೆ ಏರಿಕೆ ಗತಿಯಲ್ಲಿ ಮತದಾರರು ಬದಲಾಗುತ್ತಿರುವಂತೆ ತೋರುತ್ತಿದೆ.

50 ರಾಜ್ಯಗಳು, 538 ಎಲೆಕ್ಟರ್ಸ್‌

ಅಧ್ಯಕ್ಷೀಯ ಚುನಾವಣೆಯಲ್ಲಿ 50 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 538 ಎಲೆಕ್ಟರ್ಸ್‌ ಚುನಾಯಿತರಾಗುತ್ತಾರೆ. ಪ್ರತಿ ರಾಜ್ಯದಿಂದ ಆಯ್ಕೆಯಾದ ಎಲೆಕ್ಟರ್ಸ್‌ ಸಂಖ್ಯೆ ವಿಭಿನ್ನವಾಗಿರುತ್ತದೆ. ಸಾಮಾನ್ಯವಾಗಿ, ಹೆಚ್ಚು ಮತಗಳನ್ನು ಪಡೆದ ಅಭ್ಯರ್ಥಿಗಳಿಗೆ ಆಯಾ ರಾಜ್ಯದ ಅಧಿಕಾರ ಲಭಿಸುತ್ತದೆ. 54 ಸ್ಥಾನಗಳನ್ನು ಹೊಂದಿರುವ ಕ್ಯಾಲಿಫೋರ್ನಿಯಾ ಜನಸಂಖ್ಯಾ ದೃಷ್ಟಿಯಲ್ಲಿ ದೊಡ್ಡ ರಾಜ್ಯವಾಗಿದೆ. ಈ ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆದ್ದವರು ಸಂಪೂರ್ಣ 54 ಸ್ಥಾನಗಳನ್ನು ತಮ್ಮ ಮುಡಿಗೇರಿಸಿಕೊಳ್ಳುತ್ತಾರೆ. ಇದನ್ನು ‘ವಿನ್ನರ್‌ಟೀಕ್ಸ್‌ ಆಲ್‌’ ನಿಯಮ ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಕಮಲಾ ಹ್ಯಾರಿಸ್‌ 34 ಗೆದ್ದು ಡೊನಾಲ್ಡ್‌ ಟ್ರಂಪ್‌ 20 ಜಯಿಸಿದ್ದರೆ, ಎಲ್ಲ 54 ಸ್ಥಾನಗಳು ಕಮಲಾ ಹ್ಯಾರಿಸ್‌ ಪಾಲಾಗುತ್ತದೆ. ಈ ಕಾರಣದಿಂದ 2016ರ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್‌ಗಿಂತ 28.6 ಲಕ್ಷ ಕಡಿಮೆ ಮತಗಳನ್ನು ಪಡೆದರೂ ಡೊನಾಲ್ಡ್ ಟ್ರಂಪ್‌ ಅಧ್ಯಕ್ಷರಾಗಿ ಆಯ್ಕೆಯಾದರು.     

ಮಂಗಳವಾರ ಮಾತ್ರ ಮತದಾನ

ಅಮೆರಿಕದಲ್ಲಿ ಪ್ರತಿ 4 ವರ್ಷಗಳಿಗೊಮ್ಮೆ ಎಲ್ಲ ರಾಜ್ಯಗಳಲ್ಲಿ ಒಂದೇ ದಿನದಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆ ನವಂಬರ್‌ನ ಮೊದಲ ಮಂಗಳವಾರದ ದಿನದಂದೆ ನಡೆಯಲಿದೆ. ಈ ಕಾನೂನನ್ನು 1845ರಲ್ಲಿ ಜಾರಿಗೊಳಿಸಲಾಯಿತು. 180 ವರ್ಷಗಳ ಹಿಂದೆ ಅಮೆರಿಕ ಬಹುತೇಕ ಕೃಷಿ ಪ್ರಧಾನ ರಾಷ್ಟ್ರವಾಗಿತ್ತು ನವೆಂಬರ್‌ ಆರಂಭದ ದಿನಗಳಲ್ಲಿ ರೈತರಿಗೆ ಕೃಷಿ ಕೆಲಸಗಳೇ ಹೆಚ್ಚಿರುತ್ತಿದ್ದವು. ಬಹುತೇಕ ಕ್ರಿಶ್ಚಿಯನ್ನರು ಭಾನುವಾರದಂದು ಚರ್ಚ್‌ಗೆ ಹೋಗುತ್ತಿದ್ದರು. ಉಳಿದ ದಿನ ಮಾರಾಟ, ಖರೀದಿ ಮುಂತಾದ ಕೆಲಸಗಳಿರುತ್ತಿದ್ದವು ಈ ಕಾರಣದಿಂದ ಮೊದಲ ಮಂಗಳವಾರವನ್ನು ನಿಗದಿಪಡಿಸಲಾಯಿತು. ಇದು ಹಾಗೆಯೇ ಮುಂದುವರೆದುಕೊಂಡು ಬಂದಿತು.

ಜನವರಿಯಲ್ಲಿ ಮತ ಎಣಿಕೆ

ನವೆಂಬರ್‌ನಲ್ಲಿ ಆಯ್ಕೆಯಾದ ಎಲೆಕ್ಟ್ರರ್ಸ್‌ ಡಿಸೆಂಬರ್‌ನ ಮೊದಲ ಬುಧವಾರದ ನಂತರದ ಮಂಗಳವಾರದಂದು ತಮ್ಮ ರಾಜ್ಯಗಳಲ್ಲಿ ಭೇಟಿಯಾಗುತ್ತಾರೆ. ಆಗ ಇಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆರಿಸಲಾಗುತ್ತದೆ ಮತ್ತು ಸಹಿ ಮಾಡಿದ ಪ್ರಮಾಣಪತ್ರಗಳನ್ನು ರಾಜಧಾನಿ ವಾಷಿಂಗ್ಟನ್‌ ಡಿ.ಸಿ.ಗೆ ಕಳುಹಿಸಲಾಗುತ್ತದೆ. ಅಡ್ಡ ಮತದಾನ ಮಾಡುವ ಎಲೆಕ್ಟರ್ಸ್‌ಗಳನ್ನು ‘ನಂಬಿಕೆಯಿಲ್ಲದ ಮತದಾರರು’ ಎಂದು ಕರೆಯಲಾಗುತ್ತದೆ. ಅಮೆರಿಕದ 32 ರಾಜ್ಯಗಳಲ್ಲಿ ಇಂತಹ ಎಲೆಕ್ಟರ್ಸ್‌ಗಳ ವಿರುದ್ಧ ಕಾನೂನುಗಳಿವೆ. 2016ರಲ್ಲಿ, ವಾಷಿಂಗ್ಟನ್‌ ಮತ್ತು ಕೊಲೊರಾಡೋದ ನಾಲ್ವರು ಮತದಾರರು ತಮ್ಮ ಮತಗಳನ್ನು ಬದಲಾಯಿಸಲು ಯತ್ನಿಸಿದ್ದ ಕಾರಣ ಅವರಿಗೆ 1 ಸಾವಿರ ಡಾಲರ್‌ ದಂಡ ವಿಧಿಸಲಾಗಿತ್ತು. ಡಿಸೆಂಬರ್‌ನ 4ನೇ ಬುಧವಾರದಂದು (ಡಿ.25), ಅಮೆರಿಕದ ಸೆನೆಟ್‌ ಅಧ್ಯಕ್ಷರು ಎಲೆಕ್ಟ್ರರ್ಸ್‌ ಮತಗಳನ್ನು ಸ್ವೀಕರಿಸುತ್ತಾರೆ. ಇದರ ನಂತರ ಮತಗಳನ್ನು ಹೌಸ್‌ ಆಫ್‌ ರೆಪ್ರೆಸೆಂಟೇಶನ್‌ ಮತ್ತು ಸೆನೆಟ್‌ ಎಣಿಕೆ ಮಾಡುತ್ತದೆ. ಅಂತಿಮವಾಗಿ ಜನವರಿ 6ರಂದು ಎಣಿಕೆ ನಡೆಯಲಿದೆ. ಅಧ್ಯಕ್ಷರಾಗಿ ಆಯ್ಕೆಯಾದವರು ಜ.20ರಂದು ಅಧಿಕಾರ ಚಲಾಯಿಸುತ್ತಾರೆ.

ಹೆಚ್ಚು ಮತ ಪಡೆದರೂ ಸೋಲಬಹುದು

ಅಮೆರಿಕದ ಚುನಾವಣೆಗಳಲ್ಲಿ, ಯಾವುದೇ ಪಕ್ಷವು 270 ಎಲೆಕ್ಟೋರಲ್‌ ವೋಟ್‌ ತಲುಪಲು ಸಾಧ್ಯವಾಗದಿದ್ದರೆ, ಅಧ್ಯಕ್ಷರನ್ನು ಆರಿಸುವ ಅಧಿಕಾರ ಕೆಳಮನೆ ಸದಸ್ಯರಾದ ಹೌಸ್‌ ಆಫ್‌ ರೆಪ್ರೆಸೆಂಟೇಟಿವ್ಸ್‌ಗೆ ಸಿಗುತ್ತದೆ. ಎಲ್ಲ ಅಮೆರಿಕನ್‌ ರಾಜ್ಯಗಳಿಂದ 435 ಪ್ರತಿನಿಧಿಗಳಿರುತ್ತಾರೆ. ಆದರೆ, ಹೌಸ್‌ ಆಫ್‌ ರೆಪ್ರೆಸೆಂಟೇಟಿವ್ಸ್ ನಡೆಸುವ ಚುನಾವಣೆಯಲ್ಲಿ ಪ್ರತಿ ರಾಜ್ಯವು ಕೇವಲ 1 ಮತಕ್ಕೆ ಅರ್ಹವಾಗಿರುತ್ತದೆ. ಅಂದರೆ, 50 ರಾಜ್ಯಗಳಲ್ಲಿ 26 ಮತಗಳನ್ನು ಪಡೆದ ಅಭ್ಯರ್ಥಿ ಅಮೆರಿಕ ಅಧ್ಯಕ್ಷರಾಗುತ್ತಾರೆ. ಇದು ಅಮೆರಿಕದ ಇತಿಹಾಸದಲ್ಲಿ ಎರಡು ಬಾರಿ ಮಾತ್ರ ನಡೆದಿದೆ. ಅಮೆರಿಕದಲ್ಲಿ ಹೆಚ್ಚಿನ ಶೇಕಡ 5 ರಷ್ಟು ಮತ ಪಡೆದರೂ ಯಾವುದೇ ಅಭ್ಯರ್ಥಿ ಸೋಲಬಹುದು. ಏಕೆಂದರೆ, ಇಲ್ಲಿ ಅಧ್ಯಕ್ಷರಾಗಲು ಹೆಚ್ಚು ಎಲೆಕ್ಟೋರಲ್‌ ಮತಗಳ ಅಗತ್ಯವಿದೆ ಹೊರತು, ದೇಶಾದ್ಯಂತ ಬಂದ ಹೆಚ್ಚಿನ ಮತಗಳಲ್ಲ. 2016ರಲ್ಲಿ ಹಿಲರಿ ಕ್ಲಿಂಟನ್‌ ಶೇ.48.18 ಮತ ಪಡೆದಿದ್ದರು. ಟ್ರಂಪ್‌ ಶೇ.46.09ರಷ್ಟು ಮತ ಗಳಿಸಿದ್ದರು. ಆದರೆ, ಟ್ರಂಪ್‌ ಗಳಿಸಿದ್ದ ಎಲೆಕ್ಟೋರಲ್‌ ಮತಗಳು ಅಧಿಕವಿದ್ದ ಕಾರಣ ಅಧ್ಯಕ್ಷರಾಗಿ ಆಯ್ಕೆಯಾದರು.

2 ಬಾರಿ ಮಾತ್ರ ಅವಧಿ

1947ರಲ್ಲಿ ಜಾರಿಗೊಳಿಸಿದ 22ನೇ ಸಾಂವಿಧಾನಿಕ ತಿದ್ದುಪಡಿಯಂತೆ ಅಮೆರಿಕದಲ್ಲಿ ಒಬ್ಬ ವ್ಯಕ್ತಿಯು ಕೇವಲ 2 ಅವಧಿಗಷ್ಟೇ ಅಧ್ಯಕ್ಷರಾಗಬಹುದು. 1932ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಫ್ರಾಂಕ್ಲಿನ್‌ ಡಿ. ರೂಸ್‌ ವೆಲ್ಟ್‌ 4 ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅಮೆರಿಕದ ಅಧ್ಯಕ್ಷರಾಗಬೇಕಾದರೆ ಅಮೆರಿಕದಲ್ಲಿ ಜನಿಸಿರಬೇಕು. ಕನಿಷ್ಠ ವಯಸ್ಸು 35 ವರ್ಷಗಳಾಗಿರಬೇಕು ಹಾಗೂ ಕನಿಷ್ಠ 14 ವರ್ಷ ಅಮೆರಿಕ ನಿವಾಸಿಯಾಗಿರಬೇಕು. ಒಂದು ವೇಳೆ ಹಾಲಿ ಅಧ್ಯಕ್ಷರು ಅಧಿಕಾರದಲ್ಲಿದ್ದಾಗ ಮೃತಪಟ್ಟರೆ 1947ರಲ್ಲಿ’ರಾಷ್ಟ್ರಾಧ್ಯಕ್ಷ ಉತ್ತರಾಧಿಕಾರ ಕಾಯಿದೆ’ ನಿಯಮದಂತೆ ಉಪಾಧ್ಯಕ್ಷರು ಅಧ್ಯಕ್ಷರಾಗುತ್ತಾರೆ.

  • ಲೇಖನ: ಕಿಶೋರ್ ಗೋವಿಂದ
  • ಅನುವಾದ: ಕೆ ಚೇತನ್ ಕುಮಾರ್
ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ಅಫ್ಘಾನಿಸ್ತಾನ | ಭೀಕರ ಅಪಘಾತ: ಹೊತ್ತಿ ಉರಿದ ಬಸ್, 17 ಮಕ್ಕಳು ಸೇರಿ 71 ಮಂದಿ ದಾರುಣ ಸಾವು

ಅಫ್ಘಾನಿಸ್ತಾನದ ಪಶ್ಚಿಮ ಹೆರಾತ್ ಪ್ರಾಂತ್ಯದಲ್ಲಿ ನಡೆದ ಭೀಕರ ಬಸ್ ಅಪಘಾತದಲ್ಲಿ ಬಸ್...

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

Download Eedina App Android / iOS

X