ಬಾಲಿವುಡ್ ನಟ ಶಾರುಕ್ ಖಾನ್ ನವಂಬರ್ 2 ರಂದು ತಮ್ಮ 59ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಅಭಿಮಾನಿಗಳೊಂದಿಗೆ ಸಿಗರೇಟ್ ಸೇವನೆ ತ್ಯಜಿಸಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಕಳೆದ 30 ವರ್ಷಗಳಿಂದ ನಿರಂತರವಾಗಿ ಸಿಗರೇಟ್ ಸೇವನೆ ಮಾಡುತ್ತಿದ್ದ ತಮ್ಮನ್ನು ರೋಲ್ ಮಾಡಲ್ ಎಂದು ಪರಿಗಣಿಸಿಕೊಳ್ಳಲು ಇಷ್ಟವಿರಲಿಲ್ಲ ಎಂದು ತಿಳಿಸಿದ್ದಾರೆ.
ನಿಮಗೆ ಏನು ಅನಿಸುತ್ತದೆಯೋ ಅದನ್ನೇ ಮಾಡಿ. ನಾನು ನಿಮ್ಮ ರೋಲ್ ಮಾಡಲ್ ಅಲ್ಲ ಎಂದು ಹುಟ್ಟುಹಬ್ಬದಂದು ಸಂದೇಶ ನೀಡಿದ್ದಾರೆ.
30 ವರ್ಷಗಳ ಕಾಲ ಸಿಗರೇಟ್ ಸೇವನೆ ಮಾಡುತ್ತಿದ್ದುದ್ದು ಕೆಟ್ಟ ಗಳಿಗೆಯಾಗಿತ್ತು. ಸಿಗರೇಟ್ ಸೇವನೆ ಮಾಡಬಾರದೆಂದು ನಿಮಗೆ ನಾನು ಸಲಹೆ ನೀಡುತ್ತೇನೆ. ನಮಗೆ ಯಾವಾಗಲು ತಿಳಿದಿದೆ ಸಿಗರೇಟ್ ಸೇವನೆ ಒಳ್ಳೆಯದಲ್ಲ. ನಾವು ಇದನ್ನು ಬಿಟ್ಟರೆ ತುಂಬಾ ಒಳ್ಳೆಯದು.ನಾವು ಇದನ್ನು ಬಿಡದಿದ್ದರೆ ತುಂಬ ಕೆಟ್ಟದ್ದು. ನೀವು ಸೂಕ್ತವೆಂದು ಭಾವಿಸುವ ಸಂದರ್ಭದಲ್ಲಿ ಸೂಕ್ತವಾದುದ್ದನ್ನೇ ಮಾಡಿ ಎಂದು ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.
“ಸ್ನೇಹಿತರೆ, ಒಳ್ಳೆಯ ವಿಷಯವೇನೆಂದರೆ ನಾನು ಸಿಗರೇಟ್ ಸೇದುವುದನ್ನು ಬಿಟ್ಟಿದ್ದೇನೆ. ಸಿಗರೇಟ್ ಬಿಟ್ಟ ನಂತರ ನಾನು ಚೆನ್ನಾಗಿ ಉಸಿರಾಡುತ್ತಿದ್ದೇನೆ. ದೇವರ ದಯೆಯಿಂದ ನನ್ನ ಆರೋಗ್ಯ ಚೆನ್ನಾಗಿದೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಕಡಿವಾಣ ಯಾವಾಗ?
ಶಾರುಕ್ ತಮ್ಮ ಸಿಗರೇಟ್ ಸೇವನೆಯ ಬಗ್ಗೆ ಆಗಾಗ ಸಂದರ್ಶನಗಳಲ್ಲಿ ಹೇಳುತ್ತಿದ್ದರು. 2011ರ ಸಂದರ್ಶನದಲ್ಲಿ, ನಾನು ದಿನಕ್ಕೆ 100 ಸಿಗರೇಟ್ ಸೇದುತ್ತೇನೆ. ಇದರಿಂದ ನಾನು ಊಟ ಮಾಡುವುದು, ನೀರು ಸೇವನೆಯನ್ನು ಮರೆಯುತ್ತಿದ್ದೆ ಎಂದು ಹೇಳಿದ್ದರು.
“ನಾನು ಮಧ್ಯಮ ವರ್ಗದ ಕುಟುಂಬದಿಂದ ಬಂದವನು. ನನ್ನ ಪೋಷಕರ ಒತ್ತಾಸೆಯಂತೆ ನಾನು ವಿದ್ಯಾಭ್ಯಾಸ ಪಡೆದುಕೊಂಡಿದ್ದೆ. ನನ್ನ ಶಿಕ್ಷಣ ನನ್ನ ಜೀವನದಲ್ಲಿ ಉಪಯುಕ್ತವಾಗಿತ್ತು. ನಾವೆಲ್ಲ ಎಲ್ಲಿಂದಲೋ ಬಂದವರಾಗಿತ್ತೇವೆ. ನಿಮ್ಮ ಜೀವನದ ಪ್ರಯಾಣ ಎಲ್ಲಿಂದಲೋ ಪ್ರಾರಂಭವಾಗಿರುತ್ತದೆ. ವಿದ್ಯಾಭ್ಯಾಸ ಸೇರಿದಂತೆ ಎಲ್ಲ ಕೆಲಸವನ್ನು ಪರಿಶ್ರಮದಿಂದ ಮುಂದುವರಿಸಿ. ಹಾಗೆಯೇ ನಿಮ್ಮ ಕನಸನ್ನು ಮುಂದುವರೆಸಿ, ನಿಮ್ಮ ಅಂತ್ಯವು ಸುಂದರವಾಗಿರುತ್ತದೆ. ನನ್ನ ಜೀವನವು ಇದೇ ರೀತಿ ಮುಂದುವರೆಯಿತು” ಎಂದು ತಿಳಿಸಿದ್ದಾರೆ.
ಸದ್ಯ ಶಾರುಕ್ ಅವರು ಸುಜಯ್ ಘೋಷ್ ನಿರ್ದೇಶನದ ಕಿಂಗ್ ಎಂಬ ಸಿನಿಮಾದಲ್ಲಿ ನಟಿಸುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.
