ವೇದಿಕೆಯಲ್ಲಿ ಪ್ರದರ್ಶನದ ಸಂದರ್ಭದಲ್ಲಿ ಕೋಳಿ ಕೊಂದು ರಕ್ತ ಕುಡಿದ ಆರೋಪದ ಮೇಲೆ ಅರುಣಾಚಲ ಪ್ರದೇಶದ ಕಲಾವಿದನ ಮೇಲೆ ಪ್ರಕರಣ ದಾಖಲಾಗಿದೆ. ವೇದಿಕೆಯ ಪ್ರದರ್ಶನದ ವೇಳೆ ಕಲಾವಿದ ಕೋನ್ ವಾಯ್ ಸನ್ ಕೋಳಿಯ ಕತ್ತು ಸೀಳಿ ರಕ್ತವನ್ನು ಕುಡಿದ ಕಾರಣ ಸನ್ ವಿರುದ್ಧ ಅರುಣಾಚಲ ಪ್ರದೇಶ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪಿಇಟಿಎ) ಅಕ್ಟೋಬರ್ 27ರಂದು ನಡೆದ ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಇಟಾನಗರ ಪೊಲೀಸರಿಗೆ ದೂರು ನೀಡಿದೆ.
ಇದನ್ನು ಓದಿದ್ದೀರಾ? ಚಿಕ್ಕನಾಯಕನಹಳ್ಳಿ | ವಿಚಿತ್ರ ಘಟನೆ: ದೇವಸ್ಥಾನಕ್ಕೆ ತೆರಳಿ ಕೋಳಿ ಮೊಟ್ಟೆ ಹೊಡೆಯುತ್ತಿದ್ದ ಆರೋಪಿಯ ಬಂಧನ
ಫೇಸ್ಬುಕ್ನಲ್ಲಿ ರೆಗ್ಗೀ/ಫೋಕ್ ಫ್ಯೂಷನ್ ಕಲಾವಿದ, ಗೀತರಚನೆಕಾರ, ಸಂಯೋಜಕ ಮತ್ತು ಸಂಗೀತಗಾರ ಎಂದು ಗುರುತಿಸಿಕೊಂಡ ಕೋನ್ ವಾಯ್ ಸನ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 325 (ಯಾವುದೇ ಪ್ರಾಣಿಯನ್ನು ಕೊಲ್ಲುವುದು, ವಿಷಪೂರಿತಗೊಳಿಸುವುದು, ಯಾವುದೇ ಪ್ರಾಣಿಯನ್ನು ಊನಗೊಳಿಸುವುದು) ಮತ್ತು ಪ್ರಾಣಿಗಳ ವಿರುದ್ಧ ಕ್ರೌರ್ಯ ತಡೆಗಟ್ಟುವಿಕೆ ಕಾಯಿದೆ, 1960 ಸೆಕ್ಷನ್ 11ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Controversy erupted in Itanagar when artist Kon Waii Son beheaded a chicken and drank its blood during a performance on Oct 28.#Itanagar #ArunachalPradesh #ViralVideopic.twitter.com/Ih7ReLEPqu
— ObserverNE (@ObserverNE_24_7) October 29, 2024
ಈ ಘಟನೆಯು ಪ್ರೇಕ್ಷಕರು ಮತ್ತು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಈ ಕಾರ್ಯಕ್ರಮ ಆಯೋಜಿಸಿದವರು ಈ ಕೃತ್ಯದ ಬಗ್ಗೆ ತಮಗೆ ಮೊದಲೇ ಮಾಹಿತಿ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಇನ್ನು ಕಲಾವಿದ ಕೋನ್ ವಾಯ್ ಸನ್ ಕ್ಷಮೆಯಾಚಿಸಿದ್ದಾರೆ.
