ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದ ಕಾರಣಕ್ಕಾಗಿ ಬಂಡಾಯ ಎದಿದ್ದ ಪಕ್ಷದ 40 ಮಂದಿ ಮುಖಂಡರು ಬಿಜೆಪಿ ಉಚ್ಚಾಟಿಸಿದೆ. 37 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 40 ಮಂದಿ ಮುಖಂಡರು ಮತ್ತು ಕಾರ್ಯಕರ್ತರು ಬಿಜೆಪಿಯಿಂದ ಉಚ್ಚಾಟನೆಗೊಂಡಿದ್ದಾರೆ.
ನವೆಂಬರ್ 20ರಂದು ಮಹಾರಾಷ್ಟ್ರ ವಿಧಾನಸಭೆಗೆ ಮತದಾನ ನಡೆಯಲಿದೆ. ರಾಜ್ಯದ ಇಟ್ಟು 288 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್, ಶಿವಸೇನೆ (ಉದ್ಧವ್ ಬಣ) ಮತ್ತು ಎನ್‌ಸಿಪಿ (ಶರದ್ ಬಣ)ದ ಮಹಾವಿಕಾಸ್ ಅಘಾಡಿ ಹಾಗೂ ಬಿಜೆಪಿ, ಶಿವಸೇನೆ (ಶಿಂಧೆ ಬಣ) ಮತ್ತು ಎನ್‌ಸಿಪಿ (ಅಜಿತ್ ಬಣ)ದ ಮಹಾಯುತಿ ನಡುವೆ ಪೈಪೋಟಿ ನಡೆಯುತ್ತಿದೆ. ಎರಡೂ ಮೈತ್ರಿಕೂಟಗಳು ಮೈತ್ರಿಯೊಳಗೆ ಕ್ಷೇತ್ರ ಹಂಚಿಕೊಂಡು ಚುನಾವಣೆ ಎದುರಿಸುತ್ತಿವೆ. ತಮ್ಮ ಅಭ್ಯರ್ಥಿಗಳನ್ನು ಘೋಷಿಸಿವೆ.
ಅಭ್ಯರ್ಥಿಗಳ ಪಟ್ಟಿಗಳು ಘೋಷಣೆಯಾದ ಬೆನ್ನಲ್ಲೇ, ಎಲ್ಲ ಪಕ್ಷಗಳಲ್ಲಿಯೂ ಬಂಡಾಯದ ಕಾವು ಭುಗಿಲೆದ್ದಿದೆ. ಬಿಜೆಪಿಯೂ ಹಲವು ಕ್ಷೇತ್ರಗಳಲ್ಲಿ ಟಿಕೆಟ್ ವಂಚಿತರಾದ ಆಕಾಂಕ್ಷಿಗಳಿಂದ ಬಂಡಾಯ ಎದುರಿಸುತ್ತಿದೆ. ಬಂಡಾಯ ಶಮನ ಮಾಡಲಾಗದೆ, ಹಲವು ಕ್ಷೇತ್ರಗಳಲ್ಲಿ ಪಕ್ಷದ 40ಕ್ಕೂ ಹೆಚ್ಚು ಮುಖಂಡರನ್ನು ಉಚ್ಚಾಟಿಸಿದೆ.