ಕೆಟ್ಟ ಪ್ರಚಾರವೂ ಅತ್ಯಂತ ಸಶಕ್ತ ಪ್ರಚಾರವೇ ಎಂದ ಜಗತ್ತಿನ ಮೊದಲ ರಾಜಕಾರಣಿ ಟ್ರಂಪ್

Date:

Advertisements
ಟ್ರಂಪ್ ಕರಾಳ ಇತಿಹಾಸವನ್ನೇಕೆ ನೆನಪಿಸಿದ್ರಿ ಅಂತ ನೀವು ಕೇಳಿದ್ರಾ? ಮುಂದೊಂದು ದಿನ ಟ್ರಂಪ್ ಮತ್ತು ಮತ್ತಾವುದೋ ದೇಶದ ಪ್ರಧಾನಿ ಕೈ ಕೈ ಹಿಡಿದು ನಡೆದರೆ, ಪರಸ್ಪರ ಹೊಗಳಿಕೆಯ ಮಾತುಗಳನ್ನಾಡಿದರೆ, ಅದರಲ್ಲಿ ಗರ್ವದಿಂದ ಬೀಗುವ ಯಾವ ಅಂಶವೂ ಇರಲಾರದು ಎಂಬುದನ್ನು ಮನನ ಮಾಡಲಿಕ್ಕೆ ಈ ಬರಹ. 

ಅದು 1970ರ ದಶಕ. ಅಮೆರಿಕಾದ ಬ್ರೂಕ್ಲಿನ್ ಮತ್ತು ಕ್ವೀನ್ಸ್ ಪ್ರಾಂತ್ಯದಲ್ಲಿ ಫ್ರೆಡ್ ಮತ್ತವನ ಮಗ ಡೊನಾಲ್ಡ್ ಟ್ರಂಪ್ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಕೆಳ ಮತ್ತು ಮಧ್ಯಮ ವರ್ಗದ ಜನರಿಗಾಗಿ ಅಪಾರ್ಟ್ಮೆಂಟ್‌ಗಳನ್ನು ಕಟ್ಟಿ ಬಾಡಿಗೆ ನೀಡುವುದು ಮತ್ತು ಮಾರುವುದು ಅವರ ಆದಾಯದ ಮೂಲವಾಗಿತ್ತು.

1970ರ ಆ ದಿನಗಳಲ್ಲಿ ವರ್ಣಭೇದ ನೀತಿಯನ್ನು ಹತ್ತಿಕ್ಕಲು, ತರತಮ ಹೊಡೆದೋಡಿಸಿ ಸಮಾನತೆ ಸ್ಥಾಪಿಸಲು ಅಮೆರಿಕಾದ ಮಾನವ ಹಕ್ಕು ವಿಭಾಗ ಮತ್ತು ಡಿಪಾರ್ಟ್ಮೆಂಟ್ ಆಫ್ ಜಸ್ಟಿಸ್ (DOJ) ವಿಶಿಷ್ಟ ಕ್ಷಿಪ್ರ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದರು. ಅಮೆರಿಕಾದ ಮಾನವ ಹಕ್ಕುಗಳ ವಿಭಾಗಕ್ಕಾಗಿ ಟೆಸ್ಟರ್ಸ್ ಅಥವಾ ಪರೀಕ್ಷಕರು ಕೆಲಸ ಮಾಡುತ್ತಿದ್ದರು. ಕಪ್ಪು ವರ್ಣದ ವ್ಯಕ್ತಿಯೊಬ್ಬ ಅಪಾರ್ಟ್ಮೆಂಟ್ ಕೊಳ್ಳಲು ಅಥವಾ ಬಾಡಿಗೆಗೆ ಪಡೆಯಲು ಹೋದ ಕೆಲವೇ ನಿಮಿಷಕ್ಕೆ ಮಾರುವೇಷದಲ್ಲಿ ಬಿಳಿಯ ಟೆಸ್ಟರ್‍‌ಗಳು ಹೋಗಿ ಅಪಾರ್ಟ್ಮೆಂಟ್ ಖರೀದಿಸುವ ಅಥವಾ ಬಾಡಿಗೆ ಪಡೆಯುವ ನಾಟಕವಾಡುತ್ತಿದ್ದರು.

ಬ್ರೂಕ್ಲಿನ್ ಮತ್ತು ಕ್ವೀನ್ಸ್ ಪ್ರಾಂತ್ಯದಲ್ಲಿ ಡೊನಾಲ್ಡ್ ಟ್ರಂಪ್ ಸೇಲ್ ಮಾಡುತ್ತಿದ್ದ ಅಪಾರ್ಟ್ಮೆಂಟ್‌ಗಳಲ್ಲಿ ಬಾಡಿಗೆಗೆ ಅಥವಾ ಖರೀದಿಗಿದೆ ಎಂಬ ಫಲಕವಿತ್ತು. ಫ್ಲಾಟ್ ಕೊಳ್ಳಲು ಹೋದ ಕಪ್ಪು ವರ್ಣದ ವ್ಯಕ್ತಿಗೆ ಫ್ಲಾಟ್ ಅನ್ನು ನಯವಾಗಿ ನಿರಾಕರಿಸಲಾಗಿತ್ತು. ಎಲ್ಲಾ ಫ್ಲಾಟ್‌ಗಳು ಸೇಲ್ ಆಗಿ ಹೋಗಿವೆ ಎಂಬ ಸಬೂಬು ಹೇಳಿ ಕಪ್ಪು ವರ್ಣದವನನ್ನು ಸಾಗ ಹಾಕಲಾಗಿತ್ತು. ಕಪ್ಪು ಅಥವಾ ಬಿಳಿಯರಲ್ಲದ ಬೇರೆಯ ವರ್ಣದವರಿಗೆ ಫ್ಲಾಟ್ ಬಿಕರಿಗೆ/ಬಾಡಿಗೆಗೆ ನೀಡಬೇಡಿ ಎಂಬ ಕಠಿಣ ನಿರ್ದೇಶನವನ್ನ ಟ್ರಂಪ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವರಿಗೆಲ್ಲಾ ನೀಡಲಾಗಿತ್ತು.

Advertisements

ಆ ದಿನಗಳಲ್ಲಿ ಶೀಲಾ ಮೋರ್ಸ್ ಅಮೆರಿಕಾದ ಮಾನವ ಹಕ್ಕು ವಿಭಾಗದ ಟೆಸ್ಟರ್ ಆಗಿ ಕೆಲಸ ಮಾಡುತ್ತಿದ್ದಳು. ಕಪ್ಪು ವರ್ಣದವನಿಗೆ ನಿರಾಕರಿಸಲಾದ ಫ್ಲಾಟ್ ಬಾಡಿಗೆ ಪಡೆಯಲು ಬಿಳಿಯ ವರ್ಣದ ಶೀಲಾ ಹೋದಳು. ಟ್ರಂಪ್ ಕಂಪನಿ ಅವಳಿಗೆ ನೀಡಿದ ಆತಿಥ್ಯ ನೋಡಿ ಅವಳೇ ದಂಗಾಗಿ ಹೋದಳು. ಕಂಪನಿಯವರು ಫ್ಲಾಟ್ ಅನ್ನು ಅವಳಿಗೆ ತೋರಿಸಿ ಎಲ್ಲಾ ವಿವರಣೆಯನ್ನೂ ನೀಡಿದ್ದರು. ಫ್ಲಾಟ್ ಬಿಕರಿಗಿದೆ, ನೀವು ಬಾಡಿಗೆ ಅಥವಾ ಬೋಗ್ಯಕ್ಕೂ ಈ ಫ್ಲಾಟ್ ಪಡೆಯಬಹುದೆಂದು ಕೆಲಸಗಾರ ಶೀಲಾಗೆ ಹೇಳಿದ್ದ.

ಅಮೆರಿಕಾದ ಮಾನವ ಹಕ್ಕು ಆಯೋಗ ಅಂದು ಡೊನಾಲ್ಡ್ ಟ್ರಂಪ್ ವಿರುದ್ಧ ತರತಮದ ಕೇಸ್ ಒಂದನ್ನು ದಾಖಲಿಸಿತು. ಆ ಕೇಸ್ ಸುಮಾರು ಎರಡು ವರುಷಗಳ ಕಾಲ ನಡೆಯಿತು. ಈ ಕಹಿ ಅನುಭವದ ನಂತರವೇ ಡೊನಾಲ್ಡ್ ಟ್ರಂಪ್ ಮ್ಯಾನ್ ಹ್ಯಾಟನ್‌ನತ್ತ ಮುಖ ಮಾಡಿದ್ದು. ಕೆಳ ಮತ್ತು ಮಧ್ಯಮ ವರ್ಗದವರಿಗೆ ಅಪಾರ್ಟ್ಮೆಂಟ್ ಕಟ್ಟುವುದನ್ನು ನಿಲ್ಲಿಸಿದ ಡೊನಾಲ್ಡ್ ಟ್ರಂಪ್ ವಿಲಾಸಿ ಹೋಟೆಲ್‌ಗಳನ್ನು ಕಟ್ಟಲು ಶುರು ಮಾಡಿದ, ಟ್ರಂಪ್ ಟವರ್ಸ್ ಕಟ್ಟಿದ, ಜೂಜು ಆಡಲು ಕಸಿನೊಗಳನ್ನು ನಿರ್ಮಿಸಿದ, ಸೌಂದರ್ಯ ಸ್ಪರ್ಧೆಗಳನ್ನು ಆಯೋಜಿಸಿದ, ಹಣ ನೀಡಿ ಅಮೆರಿಕದ ಪತ್ರಿಕೆಗಳ ಮುಖಪುಟಗಳಲ್ಲಿ ಕಾಣಿಸಿಕೊಳ್ಳತೊಡಗಿದ, ನ್ಯಾಷನಲ್ ಫುಟ್ಬಾಲ್ ಲೀಗಿಗೆ ಪರ್ಯಾಯ ಲೀಗ್ ಒಂದನ್ನು ಶುರು ಮಾಡಹೊರಟ, ಟ್ರಂಪ್ ಏರ್ಲೈನ್ಸ್ ಶುರು ಮಾಡಿ ನಷ್ಟ ಅನುಭವಿಸಿದ.

ಇದನ್ನು ಓದಿದ್ದೀರಾ?: ಡೊನಾಲ್ಡ್ ಟ್ರಂಪ್‌ ಪುನರಾಗಮನ; ಜಾಗತಿಕ ನಾಯಕರಿಗೆ ಶುರುವಾಯಿತೆ ಆತಂಕ?

ಬಿಳಿಯರ ಪರಮ ಶ್ರೇಷ್ಠತೆಯನ್ನು ನಂಬುವ ಟ್ರಂಪ್ ಪಕ್ಕ patriarch ಕೂಡ. ಟ್ರಂಪ್ ಸುಂದರ ಹೆಣ್ಣು ಮಕ್ಕಳ ಕುರಿತು ಹೇಳಿದ ಈ ಕೆಳಗಿನ ಮಾತುಗಳನ್ನೇ ಒಮ್ಮೆ ಓದಿಬಿಡಿ:

“You know, I’m automatically attracted to beautiful — I just start kissing them. It’s like a magnet. Just kiss. I don’t even wait. And when you’re a star, they let you do it. You can do anything. Grab ’em by the pussy. You can do anything.” (The New York Times- 2016)

ಟ್ರಂಪ್ ವಿರುದ್ಧ ಇಪ್ಪತ್ತಾರು ಮಹಿಳೆಯರು ಅಸಭ್ಯವರ್ತನೆ, ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಈ ಇಪ್ಪತ್ತಾರು ಮಹಿಳೆಯರಲ್ಲಿ ಟ್ರಂಪ್ ಮಡದಿ ಇವ್ವನ್ ಟ್ರಂಪ್ ಕೂಡ ಒಬ್ಬರು!

ಟ್ರಂಪ್ ಕಿಸ್

ಟ್ರಂಪ್ ಎಂದೆಂದಿಗೂ ಸೋಲೊಪ್ಪದ ಹಠವಾದಿ. 2020 ಚುನಾವಣಾ ಫಲಿತಾಂಶವನ್ನು ಒಪ್ಪದೆ ಕ್ಯಾಪಿಟೋಲ್ ಒಳಕ್ಕೆ ಟ್ರಂಪ್ ಬೆಂಬಲಿಗರು ನುಗ್ಗಿ ನಡೆಸಿದ ದಾಂಧಲೆಯಲ್ಲಿ ಹಲವರು ಅಸುನೀಗಿದ್ದು ಟ್ರಂಪ್ ಹಠಕ್ಕೆ, ಮೊಂಡುತನಕ್ಕೆ ಸಾಕ್ಷಿ. ಹಣಬಲ, ಪ್ರಭಾವ ಬಳಸಿ ಸತ್ಯವನ್ನು ಮುಚ್ಚಿ ಹಾಕುವಲ್ಲಿ ಆತ ಸದಾ ಯಶಸ್ವಿಯಾಗಿದ್ದಾನೆ. ನೂರಾರು ಆರೋಪಗಳು ಅವನ ಮೇಲಿದ್ದರೂ, ಸಾಕ್ಷ್ಯಾಧಾರಗಳಿದ್ದರೂ ಆತ ಎಂದೆಂದೂ ಶಿಕ್ಷೆಗೆ ಒಳಪಟ್ಟಿಲ್ಲ. ಅವನ ಮೇಲೆ ಮಾಡಿದ ಆರೋಪಗಳೆಲ್ಲಾ, ಸಿಕ್ಕಿಬಿದ್ದ ಹಗರಣಗಳೆಲ್ಲಾ ಆತನ ಜನಪ್ರಿಯತೆಯನ್ನು ಹೆಚ್ಚಿಸಿದೆ! ಕೆಟ್ಟ ಪ್ರಚಾರವೂ ಅತ್ಯಂತ ಸಶಕ್ತ ಪ್ರಚಾರವೇ (even bad publicity is a good publicity) ಎಂದು ಕಂಡುಕೊಂಡ ಜಗತ್ತಿನ ಮೊದಲ ರಾಜಕಾರಣಿ ಟ್ರಂಪ್ ಅನಿಸುತ್ತೆ. ನಿರಂತರ ಪ್ರಚಾರದಲ್ಲಿರುವ ಕಲೆ ಆತನಿಗೆ ಸಿದ್ಧಿಸಿದೆ. ಜನರಿಗೆ ಫ್ಯಾಂಟಸಿಯನ್ನು ಸೇಲ್ ಮಾಡುತ್ತಲೇ ಅಮೆರಿಕದ 47ನೆ ರಾಷ್ಟ್ರಪತಿಯಾಗಿದ್ದಾರೆ ಟ್ರಂಪ್.

ಟ್ರಂಪ್ ಕರಾಳ ಇತಿಹಾಸವನ್ನೇಕೆ ನೆನಪಿಸಿದ್ರಿ ಅಂತ ನೀವು ಕೇಳಿದ್ರಾ? ಮುಂದೊಂದು ದಿನ ಟ್ರಂಪ್ ಮತ್ತು ಮತ್ತಾವುದೋ ದೇಶದ ಪ್ರಧಾನಿ ಕೈ ಕೈ ಹಿಡಿದು ನಡೆದರೆ, ಪರಸ್ಪರ ಹೊಗಳಿಕೆಯ ಮಾತುಗಳನ್ನಾಡಿದರೆ, ಅದರಲ್ಲಿ ಗರ್ವದಿಂದ ಬೀಗುವ ಯಾವ ಅಂಶವೂ ಇರಲಾರದು ಎಂಬುದನ್ನು ಮನನ ಮಾಡಲಿಕ್ಕೆ ಈ ಬರಹ. ಮುಂದುವರೆದು ಮುಂದಿನ ದಿನಗಳಲ್ಲಿ ಅಮೆರಿಕದ ವಲಸಿಗರಿಗೆ ಏನಾಗುತ್ತದೆ, ಸುಂಕ ನೀತಿಗಳು ಏನಾಗುತ್ತವೆ, ಗರ್ಭಪಾತದ ಕಾನೂನುಗಳು ಏನಾಗುತ್ತದೆ ಎಂಬುದರ ಜೊತೆ ಜೊತೆಗೆ ಅತ್ಯಂತ ಆತಂಕಕಾರಿ ವಿಷಯ ಗಾಜಾ ಪಟ್ಟಿಗೆ ಏನಾಗುತ್ತದೆ ಎಂಬುದಾಗಿದೆ.

ಹರೀಶ್ ಗಂಗಾಧರ್
‍ಹರೀಶ್ ಗಂಗಾಧರ್
+ posts

‍ಲೇಖಕ, ಪ್ರಾಧ್ಯಾಪಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

‍ಹರೀಶ್ ಗಂಗಾಧರ್
‍ಹರೀಶ್ ಗಂಗಾಧರ್
‍ಲೇಖಕ, ಪ್ರಾಧ್ಯಾಪಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತೀಯರು ಸೇರಿ 5.5 ಕೋಟಿ ವಿದೇಶಿಗರ ವೀಸಾಗಳ ಮರು ಪರಿಶೀಲನೆಗೆ ಟ್ರಂಪ್ ಆಡಳಿತ ನಿರ್ಧಾರ

ಅಮೆರಿಕಾದಲ್ಲಿ ವೀಸಾ ಹೊಂದಿರುವ 5.5 ಕೋಟಿ ವಿದೇಶಿಗರನ್ನು ಅವರ ದಾಖಲೆಗಳಲ್ಲಿ ಯಾವುದೇ...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಹಿಂಸಾಚಾರ ಪ್ರಕರಣ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಜಾಮೀನು

ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್‌ಗೆ ಮೇ 9, 2023ರ ಹಿಂಸಾಚಾರ...

Download Eedina App Android / iOS

X