ವಿಲ್ಲಾ ಮಾದರಿಯ ವಸತಿ ಸಮುಚ್ಚಯ: ಮನೆಗಳ ಹಂಚಿಕೆಗೆ ಸಿದ್ಧತೆ; ಬಿಡಿಎ ಆಯುಕ್ತ ಪರಿಶೀಲನೆ

Date:

Advertisements

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ವು ಯಶವಂತಪುರ ತಾಲೂಕಿನ ದಾಸನಪುರ ಹೋಬಳಿ ಹುಣ್ಣಿಗೆರೆ ಗ್ರಾಮದ ಸರ್ವೆ ನಂ.35 ರಲ್ಲಿ ವಿಲ್ಲಾ ಮಾದರಿಯ ವಸತಿ ಸಮುಚ್ಚಯವನ್ನು ನಿರ್ಮಾಣ ಮಾಡಿದ್ದು, ಒಂದು ಬಿಎಚ್‌ಕೆ ಮನೆಗಳನ್ನು ಹಂಚಿಕೆ ಮಾಡಲು ಸಿದ್ಧತೆ ನಡೆಸಿದೆ.

ಬಿಡಿಎ ಆಯುಕ್ತ ಜಿ. ಕುಮಾರ ನಾಯಕ ಅವರು ವಸತಿ ಸಮುಚ್ಚಯಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. “ಈ ವಸತಿ ಯೋಜನೆಯನ್ನು ಆದಷ್ಟು ಶೀಘ್ರವಾಗಿ ಸಾರ್ವಜನಿಕರಿಗೆ ಹಂಚಿಕೆ ಮಾಡಬೇಕು” ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಸತಿ ಯೋಜನೆಯಡಿ ಸಮುಚ್ಚಯಗಳಲ್ಲಿ ಒಂದು ಬಿಎಚ್‌ಕೆಯ 320 ಮನೆಗಳು, ಮೂರು ಬಿಎಚ್‌ಕೆ ಹೊಂದಿರುವ 152 ಮನೆಗಳು ಹಾಗೂ ನಾಲ್ಕು ಬಿಎಚ್‌ಕೆ ಇರುವ 170 ಮನೆಗಳು ಇರುತ್ತವೆ. ಈ ವಸತಿ ಯೋಜನೆಯಲ್ಲಿನ 3 ಮತ್ತು 4 ಬಿಎಚ್‌ಕೆ ಮನೆಗಳು ಆರ್‌ಸಿಸಿ ಫ್ರೇಮ್ ಸ್ಟ್ರಕ್ಚರ್‌ನಲ್ಲಿ ನಿರ್ಮಿಸಿದ್ದು, ಈ ಮನೆಗಳು ಡೂಪ್ಲೆಕ್ಸ್ ಮನೆಗಳಾಗಿರುತ್ತವೆ.

Advertisements

ಕಟ್ಟಡ ನಿರ್ಮಾಣಕ್ಕೆ ಸಂಪೂರ್ಣವಾಗಿ ಇಟ್ಟಿಗೆ ಉಪಯೋಗಿಸಲಾಗಿದೆ. ಈ ವಸತಿ ಯೋಜನೆಯನ್ನು ವಾಸ್ತುವಿಗನುಗುಣವಾಗಿ ನಿರ್ಮಿಸಲಾಗಿದೆ. ಪ್ರತಿ ಮನೆಗೆ ಡ್ಯುಯೆಲ್ ಪೈಪಿಂಗ್ ಸಿಸ್ಟಂ, ಸಂಪ್ ಮತ್ತು ಓವರ್ ಹೆಡ್ ಟ್ಯಾಂಕ್‌ ಇರುತ್ತದೆ. ಸೋಲಾರ್ ವಾಟರ್ ಹೀಟರ್ ಅಳವಡಿಸಲಾಗಿರುತ್ತದೆ.

ವಿಲ್ಲಾ
ವಿಲ್ಲಾ ಮಾದರಿ ವಸತಿಗಳ ಪರಿಶೀಲಿಸುತ್ತಿರುವ ಬಿಡಿಎ ಆಯುಕ್ತ ಜಿ ಕುಮಾರ ನಾಯಕ

ಒಂದು ಬಿಎಚ್‌ಕೆ ಮನೆಗಳನ್ನು ಆರ್‌ಸಿಸಿ ಗೋಡೆಗಳನ್ನು ಅಳವಡಿಸಿ ಜಿ+3 ಮಹಡಿಯಲ್ಲಿ ನಿರ್ಮಿಸಲಾಗಿರುತ್ತದೆ. 3 ಮತ್ತು 4 ಬಿಎಚ್‌ಕೆಗಳಿಗೆ ಪ್ರತ್ಯೇಕವಾದ ಗೇಟ್‌ಗಳನ್ನು ಅಳವಡಿಸಿ, ಮುಖ್ಯರಸ್ತೆಯಿಂದ ಪ್ರತ್ಯೇಕವಾಗಿ ಸಂಪರ್ಕ ಕಲ್ಪಿಸಲಾಗಿರುತ್ತದೆ. 3 ಮತ್ತು 4 ಬಿಎಚ್‌ಕೆ ಮನೆಗಳಿಗೆ  ಇ.ವಿ (ಕಾರ್ ಚಾರ್ಜಿಂಗ್) ಚಾರ್ಜಿಂಗ್ ಮಾಡಿಕೊಳ್ಳಲು ಅನುಕೂಲವಾಗುವಂತೆ ವ್ಯವಸ್ಥೆಯನ್ನು ಕಲ್ಪಿಸಲಾಗಿರುತ್ತದೆ.

ಎಲ್ಲ ಮನೆಗಳಿಗೂ ಮನೆಯಲ್ಲಿಯೇ ಕಾರ್ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ಈ ಯೋಜನೆಯಲ್ಲಿ 100ಕೆವಿ ಸಾಮರ್ಥ್ಯದ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಲಾಗಿರುತ್ತದೆ. ಮಳೆ ನೀರು ಕುಯ್ಲಿಗೆ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ಈ ಯೋಜನೆಯಲ್ಲಿ ಡಕ್ಟ್‌ಗಳನ್ನು ನಿರ್ಮಿಸಿ, ಅದರಲ್ಲಿ ನೀರಿನ ಹಾಗೂ ವಿದ್ಯುತ್ ಕೇಬಲ್ ಗಳನ್ನು ಅಳವಡಿಸಲಾಗಿರುತ್ತದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು ಅಂದು-ಇಂದು – 1 | ಬದಲಾಗುತ್ತಿರುವ ಬೆಂದಕಾಳೂರು ಹಿಂದೆ ಹೇಗಿತ್ತು; ಇಲ್ಲಿ ನೋಡಿ!

ಈ ವಸತಿ ಯೋಜನೆಯಲ್ಲಿ 27 ಉದ್ಯಾನವನಗಳಿದ್ದು, ಹಸಿರಿನ ಗಿಡಮರಗಳಿಗೆ ಪ್ರಾಮುಖ್ಯತೆ ಕೊಡಲಾಗಿದೆ. ಈ ವಸತಿ ಯೋಜನೆಯನ್ನು 26 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣ ಮಾಡಿದ್ದು, ಈ ವಸತಿ ಯೋಜನೆಯ ಸುತ್ತ 2.1 ಮೀ ಎತ್ತರದ ರಕ್ಷಣಾ ಗೋಡೆಯನ್ನು ನಿರ್ಮಿಸಲಾಗಿರುತ್ತದೆ.

ವಸತಿ ಯೋಜನೆಯ ಸುತ್ತ ರಸ್ತೆಯನ್ನು ಮಾಡಲಾಗಿರುತ್ತದೆ. ಹಾಗೂ ಈ ವಸತಿ ಯೋಜನೆಯಲ್ಲಿ ಮನೋರಂಜನಾ ಕೇಂದ್ರವನ್ನು ನಿರ್ಮಿಸಿದ್ದು, ಈ ಕೇಂದ್ರದಲ್ಲಿ ಒಳಾಂಗಣ ಆಟಗಳಿಗೆ ಪ್ರಾಮುಖ್ಯತೆ ಕೊಡಲಾಗಿದೆ. ಒಳಾಂಗಣ ಸೆಟಲ್ ಕೋರ್ಟ್‌, ರೆಸ್ಟೊರಂಟ್, ಜಿಮ್, ಏರೋಬಿಕ್ಸ್‌, ಪ್ರಾಥಮಿಕ ಆರೋಗ್ಯ ಕೇಂದ್ರ, ಕಮ್ಯೂನಿಟಿ ಹಾಲ್, ಗ್ರಂಥಾಲಯ, ಈಜುಕೊಳ ನಿರ್ಮಿಸಲಾಗಿದೆ ಹಾಗೂ ಸೂಪರ್ ಮಾರ್ಕೆಟ್‌ಗೆ ಸ್ಥಳಾವಕಾಶ ಕಲ್ಪಿಸಲಾಗಿದೆ. ಜೊತೆಗೆ ಅತಿಥಿಗಳಿಗಾಗಿ 4 ಕೊಠಡಿಗಳನ್ನು ಕಲ್ಪಿಸಲಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X