ಕ್ಷುಲ್ಲಕ ಕಾರಣಕ್ಕೆ ಬಿಜೆಪಿ ಮುಖಂಡನ ಪುತ್ರ ಮತ್ತು ಆತನ ಸ್ನೇಹಿತರು ಹಾಗೂ ಯುವಕನೊಬ್ಬನ ಮಧ್ಯೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಎರಡು ಗುಂಡು ಹಾರಿಸಿದ ಘಟನೆ ಧಾರವಾಡದ ಆರ್.ಎನ್. ಶೆಟ್ಟಿ ಕ್ರಿಡಾಂಗಣದ ಬಳಿ ಕಳೆದ ಬುಧವಾರ ನಡೆದಿದೆ.
ಆ ಹಿನ್ನೆಲೆಯಲ್ಲಿ ಎರಡು ಗುಂಡು ಹಾರಿಸಿದ ಯುವಕ ಅಭಿಷೇಕ ಬಡ್ಡಿಮನಿ ಎಂಬಾತನ ವಿರುದ್ಧ ದೂರು ದಾಖಲಾಗಿದ್ದು, ಬಿಜೆಪಿ ಮುಖಂಡ ಹಾಗೂ ಸಿಂಡಿಕೇಟ್ ಸದಸ್ಯರಾಗಿದ್ದ ಕಲ್ಮೇಶ ಹಾವೇರಿಪೇಟೆ ಅವರ ಪುತ್ರ ಪ್ರಜ್ವಲ್, ಘಟನೆ ವೇಳೆ ಕಾರು ಚಲಾಯಿಸುತ್ತಿದ್ದರು. ಪ್ರಜ್ವಲ್ ಮತ್ತು ಸ್ನೇಹಿತರು ಕಾರಿನಲ್ಲಿ ಬರುವಾಗ ಏಕಾಏಕಿ ಡಿಕ್ಕಿ ಹೊಡೆದು ಹಲ್ಲೆ ಮಾಡಲು ಬಂದನು. ಅಲ್ಲದೇ ಗುಂಡು ಹಾರಿಸಿದ್ದಾರೆ ಎಂದು ಅಭಿಷೇಕ ಪ್ರತಿದೂರು ದಾಖಲಿಸಿದ್ದಾರೆ.
ಇನ್ನುಳಿದ ಗಣೇಶ ಮತ್ತು ದಿನೇಶ ಎಂಬುವವರು ಕಾರಿನಲ್ಲಿ ಬಂದು ಅಭಿಷೇಕನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ನಂತರ ಹಲ್ಲೆ ಮಾಡಲು ಯತ್ನಿಸಿದರು. ಆದ್ಧರಿಂದ ಜೀವ ರಕ್ಷಣೆಗೆ ಗುಂಡು ಹಾರಿಸಿರುವುದಾಗಿ ಅಭಿಷೇಕ ದೂರಿನಲ್ಲಿ ತಿಳಿಸಿದ್ದಾರೆ.
ಈ ವರದಿ ಓದಿದ್ದೀರಾ? ಧಾರವಾಡ | ಸರ್ಕಾರದ ವಿರುದ್ಧ ಬಿಜೆಪಿ ಅಪಪ್ರಚಾರ ಮಾಡುತ್ತಿದೆ: ಶಾಸಕ ಎನ್.ಎಚ್.ಕೋನರಡ್ಡಿ ಆರೋಪ
ಈ ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಪೋಲಿಸ್ ವಶಕ್ಕೆ ಪಡೆದಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ರಸ್ತೆ ಮದ್ಯೆ ಫೈರಿಂಗ್ ಮಾಡಿದ ಘಟನೆಗೆ ಸಂಬಂಧಪಟ್ಟಂತೆ ದೂರು ಪ್ರತಿ ದೂರುಗಳು ದಾಖಲಾಗಿದ್ದು, ಅಭಿಷೇಕ್ ಬಡ್ಡಿಮನಿ, ಪ್ರಜ್ವಲ್ ಹಾವೇರಿಪೇಟ್, ಗಣೇಶ್ ಕೋಡೆ, ದಾನೇಶ್ ಕಠಾರಿ ಎಂಬ ನಾಲ್ವರು ಯುವಕರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.