ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಮಸೂದೆ ತಂದಿದ್ದು ನಾನೇ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದರು.
ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಸತತ 4ನೇ ದಿನ ಚನ್ನಪಟ್ಟಣ ತಾಲ್ಲೂಕಿನ ಸಿಂಗರಾಜಿಪುರ, ಬೂಹಳ್ಳಿ ಮತ್ತು ಚನ್ನಪಟ್ಟಣ ಪಟ್ಟಣಗಳಲ್ಲಿ ಪ್ರಚಾರ ನಡೆಸಿ ಮಾತನಾಡಿದರು. ಚನ್ನಪಟ್ಟಣ ತಾಲ್ಲೂಕಿನಲ್ಲಿ ಸಾರ್ವಜನಿಕ ಸಭೆಯಲ್ಲಿ ಮೀಸಲಾತಿ ಬಗ್ಗೆ ಮಾತನಾಡಿ, ಭದ್ರಾವತಿ ಮತ್ತು ತಾಲ್ಲೂಕು ಪಂಚಾಯತ್‌ಗಳಲ್ಲಿನ ಮಹಿಳಾ ಮೀಸಲಾತಿ ಜಾರಿಗೊಳಿಸಲು ನಾನು ಹೋರಾಟ ಮಾಡಿದ್ದು” ಎಂದರು.
“ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಿದ್ದೇನೆ. ಮೋದಿ ಅವರು ಸಹ ಆ ಬಿಲ್‌ಗೆ ಒಪ್ಪಿಗೆ ನೀಡಿದ್ದಾರೆ, ನಾನು ನಿಮ್ಮ ಮುಂದೆ ನಿಂತು ಆ ಬಿಲ್ ಅನ್ನು ಒಪ್ಪಿಗೆಯಾಯಿತು. ಈ ಸರ್ಕಾರವನ್ನು ಸರ್ಕಾರ ಎಂದು ಕರೆಯಲು ಆಗುವುದಿಲ್ಲ. ನೀವು ನಿಮ್ಮ ಆತ್ಮವನ್ನು ಪ್ರಶ್ನಿಸಿ, ಇದನ್ನು ಸರ್ಕಾರ ಎಂದು ಕರೆಯುತ್ತೀರಾ” ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
“1957ರಲ್ಲಿ ನಾನು ಕಾಂಗ್ರೆಸ್ ವಿರುದ್ಧ ಹೋರಾಟವನ್ನು ಪ್ರಾರಂಭಿಸಿದ್ದೆ. ನಿಮ್ಮ ಬೆಂಬಲದಿಂದ ನಾನು ವರದೇಗೌಡರನ್ನು ವಿಧಾನಸೌಧಕ್ಕೆ ಕರೆದೊಯ್ದೆ. ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಬಡವರಿಗೆ ಐದು ಲಕ್ಷ ಮನೆಗಳನ್ನು ನಿರ್ಮಿಸುವ ಯೋಜನೆ ರೂಪಿಸಿದ್ದೆ. ನಾವು ಶಾಂತಿಯಾಗಿ ಬದುಕಬೇಕು ನಾನು ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿ ಆಗಿದ್ದೆ. ನಾವು ಎಲ್ಲರೂ ಮಾನವರು, ಹಿಂದೂ ಮತ್ತು ಮುಸ್ಲಿಂ ನಾವೆಲ್ಲರೂ ಒಂದೇ” ಎಂದರು.
ಈ ಸುದ್ದಿ ಓದಿದ್ದೀರಾ? ನ್ಯಾ. ಕುನ್ಹಾ ಆಯೋಗವು ಬಿಜೆಪಿ ಸರ್ಕಾರದ ಕೋವಿಡ್ ಭ್ರಷ್ಟಾಚಾರ ಬಿಚ್ಚಿಟ್ಟಿದೆ: ಸಿಎಂ ಸಿದ್ದರಾಮಯ್ಯ
“ಇಂಥ ನಿರ್ಲಕ್ಷ್ಯತೆ ಇರುವ ಸರ್ಕಾರವನ್ನು ಎಂದೂ ನೋಡಿಲ್ಲ. ಸರ್ಕಾರದ ನೀತಿಗಳನ್ನು ಜನರು ಪ್ರಶ್ನಿಸಬೇಕಾಗಿದೆ. ನಮ್ಮ ಭವಿಷ್ಯ ಅಪಾಯಕಾರಿ ಸ್ಥಿತಿಯಲ್ಲಿದೆ. ನಾವು ಜನರಿಗೆ ಸೇವೆ ಮಾಡುವ ಸರ್ಕಾರವನ್ನು ಆಯ್ಕೆ ಮಾಡಬೇಕು. ಕೊರತೆ ಇರುವ ಸರ್ಕಾರವನ್ನು ಅಲ್ಲ. ಚುನಾವಣೆ 13 ರಂದು ನಡೆಯುತ್ತದೆ, ಫಲಿತಾಂಶ 23 ರಂದು ಪ್ರಕಟವಾಗುತ್ತದೆ. ನಾನು ನಿಮ್ಮ ಜೊತೆಯಾಗಿ ಕೆಲಸಕ್ಕೆ ಮಾಡುತ್ತೇನೆ. ಮುಸ್ಲಿಂ ಮೊಹಲ್ಲಾದಲ್ಲಿ ನಿಮ್ಮೊಂದಿಗೆ ಕುಳಿತುಕೊಳ್ಳುತ್ತೇನೆ” ಎಂದು ಹೇಳಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಎಚ್.ಡಿ. ಕುಮಾರಸ್ವಾಮಿ ಅವರನ್ನು ಬಲಪಡಿಸಲು ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಬೇಕು. ಅವರು ಈ ಕ್ಷೇತ್ರಕ್ಕೆ ಹೊಸಬರೇನೂ ಅಲ್ಲ. ನಿಖಿಲ್ ಸಾರ್ವಜನಿಕ ಸೇವೆಯಲ್ಲಿ ಅನುಭವ ಹೊಂದಿರುವ ಪ್ರತಿಭಾವಂತ ಯುವನಾಯಕ. ಭಾರತದ ಭವಿಷ್ಯವನ್ನು ರೂಪಿಸಲು ಯುವಕರನ್ನು ರಾಜಕೀಯಕ್ಕೆ ಪ್ರೇರೇಪಿಸಲು ಅವರ ಗೆಲುವು ಅಗತ್ಯವಾಗಿದೆ ಎಂದರು.